Home ಸುದ್ಧಿಗಳು ಪ್ರಾದೇಶಿಕ ಕುಂದಾಪುರವನ್ನು ಮತ್ತಷ್ಟು ಹತ್ತಿರವಾಗಿಸಿದೆ “ಊರ್ಮನಿ ಅಂಗಡಿ”

ಕುಂದಾಪುರವನ್ನು ಮತ್ತಷ್ಟು ಹತ್ತಿರವಾಗಿಸಿದೆ “ಊರ್ಮನಿ ಅಂಗಡಿ”

719
0

ಈಗ ಆನ್ಲೈನ್ ಶಾಪಿಂಗ್ ಭರಾಟೆ ಹೆಚ್ಚಿದೆ. ಯುವಜನರು ಆನ್ಲೈನ್ ಮೂಲಕವೇ ತಮಗೆ ಬೇಕಾದ್ದನ್ನು ಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದೇ ಆನ್ಲೈನ್ ಮೂಲಕ ತನ್ನೂರಿನ ತಿಂಡಿಗಳು, ಸ್ಥಳೀಯ ಸಂಸ್ಕೃತಿ ಬಿಂಬಿಸುವ ವಸ್ತುಗಳು ದೊರೆಯುವಂತಾಗಿದ್ದರೆ ಅನ್ನುವ ಕನಸು ಎಷ್ಟೋ ಜನರಲ್ಲಿರುತ್ತದೆ. ಇಂತಾ ಕನಸನ್ನ ನನಸು ಮಾಡಲೆಂದೇ ಹುಟ್ಟಿಕೊಂಡಿದ್ದು oormaniangadi.com ಎಂಬ ಕುಂದಾಪುರ ಮೂಲದ ಆನ್ಲೈನ್ ಶಾಪಿಂಗ್ ತಾಣ.

ಈಗಾಗಲೇ ಭಾರತದಾದ್ಯಂತ ಸಾಫ್ಟ್ವೇರ್ ಡೆವಲಪ್ಮೆಂಟ್ , ವೆಬ್ ಡೆವಲಪ್ಮೆಂಟ್ , ಆಪ್ ಡೆವಲಪ್ಮೆಂಟ್ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿರುವ, ಹಾಗು ವಿಪ್ರ ಮ್ಯಾಟ್ರಿಮೋನಿಯ ಪ್ರವರ್ತಕರಾದ ಫೋರ್ಥ್ ಫೋಕಸ್ ಗ್ರೂಪ್ ತಂಡದ ಕೊಡುಗೆಯೇ ಈ “ಊರ್ಮನಿ ಅಂಗಡಿ”.

ಆರಂಭಗೊಂಡ ತಿಂಗಳೊಳಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆಯೇ ಸಿಕ್ಕಿದೆ. ನ್ಯಾಯಯುತ ಬೆಲೆಯೊಂದಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ತಲುಪಿಸುವ ಮೂಲಕ ಗ್ರಾಹಕರಿಂದ ವ್ಯಾಪಕ ಪ್ರಶಂಸೆಯನ್ನು ಪಡೆಯುತ್ತಿದೆ. ಭಾರತದೊಳಗೆ ಎಲ್ಲಾ ಪ್ರದೇಶಕ್ಕೂ 5 – 6 ದಿನಗಳೊಳಗೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ತೆ ಹೊಂದಿದ್ದು ಪ್ರಸ್ತುತ 22,000 ಕ್ಕೂ ಹೆಚ್ಚು ಪಿನ್ ಕೋಡ್ ಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ವಿಶೇಷವೆಂದರೆ ರೂ. 2000.00 ಮೇಲಿನ ಖರೀದಿಗೆ ಯಾವುದೇ ವಿತರಣಾ ಶುಲ್ಕವಿಲ್ಲದೆ ಉಚಿತ ಹೋಂ ಡೆಲಿವೆರಿಯನ್ನು ನೀಡುತ್ತಿದೆ.

ಕುಂದಾಪುರದ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಶರ್ಟ್‌ಗಳು, ಮೊಬೈಲ್ ಫೋನ್ ಬ್ಯಾಕ್ ಕವರ್‌ಗಳು, ಲ್ಯಾಪ್‌ಟಾಪ್ ಸ್ಲೀವ್, ಕಾಫಿ ಮಗ್‌, ಟೀ ಶರ್ಟ್‌ಗಳು, ಮೌಸ್ ಪ್ಯಾಡ್‌ಗಳು ಮುಂತಾದ ಕುಂದಾಪುರದ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯ ಬಿಂಬಿಸುವಂತಹ ವಸ್ತುಗಳ ದೊಡ್ಡ ಭಂಡಾರವೇ ಇದೆ‌. ಸ್ಥಳೀಯ ಲೇಖಕರ ಪುಸ್ತಕಗಳು, ಸ್ಥಳೀಯ ಆಹಾರ ಪದಾರ್ಥಗಳಾದ ಹಪ್ಪಳ, ಸಂಡಿಗೆ, ಒಣ ಮೀನು, ಚಟ್ಲಿ, ಸಾರು ಮತ್ತು ಸಾಂಬಾರ್ ಪುಡಿ, ಕೋರಿ ರೊಟ್ಟಿ, ಕುಂದಾಪುರ ಚಿಕನ್ ಮಸಾಲಾ, ಬಾರ್ಕುರ್ ಬೆಲ್ಲ, ಕೊಚ್ಚಕ್ಕಿ ಗಾಣದ ತೆಂಗಿನ ಎಣ್ಣೆ, ವ್ಯಾಕ್ಯುಮ್ ಫ್ರೈಡ್ ಗೋಡಂಬಿಗಳು, ಇನ್ನಿತರ ವ್ಯಾಕ್ಯುಮ್ಮ್ ಫ್ರೈಡ್ ತಿಂಡಿ ತಿನಿಸುಗಳು, ಮಿಡಿ ಉಪ್ಪಿನಕಾಯಿ, ಹಲ್ವಾ ಗಳನ್ನೂ ಸೇರಿ ಒಟ್ಟು 1500 ಕ್ಕೂ ಹೆಚ್ಚು ವಸ್ತುಗಳ್ಳನ್ನು ಊರ್ಮನಿ ಅಂಗಡಿಯಲ್ಲಿ ಖರೀದಿಸಬಹುದಾಗಿದೆ.

ಸಂಪೂರ್ಣ ಸುರಕ್ಷಿತ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಇದ್ದು ಗ್ರಾಹಕರು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ, ಗೂಗಲ್ ಪೆ, ಫೋನ್ ಪೆ ನಂತಹ ಯಾವುದೇ ವ್ಯವಸ್ಥೆ ಇಂದ ಆರ್ಡರ್ ಮಾಡಬಹುದಾಗಿದೆ. ವೆಬ್ಸೈಟ್ ನ ಜೊತೆಗೆ ಆಂಡ್ರಾಯ್ಡ್ ಅಪ್ಲಿಕೇಶನ್ ಕೂಡ ಇದ್ದು ಈಗಾಗಲೇ ಸಾವಿರಾರು ಜನರು ಪ್ರತಿನಿತ್ಯ ಊರ್ ಮನಿ ಅಂಗಡಿಯ ಸೇವೆಯನ್ನು ಬಳಸಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸರಾಸರಿ 4.9 ರೇಟಿಂಗ್ಸ್ ಹೊಂದಿದೆ.

ಕನ್ನಡದಲ್ಲಿ ಅತ್ಯಂತ ಸೊಗಸಾದ ಭಾಷೆ ನಮ್ಮ‌ ಈ ಕುಂದಗನ್ನಡ. ನಮ್ಮ ಊರ್ಮನಿ ಅಂಗಡಿ ಕೂಡ ನಮ್ಮ ಮಾತೃಭಾಷೆ ಕುಂದಗನ್ನಡಕ್ಕೆ ಗೌರವ ಅರ್ಪಿಸುವಂತ ಒಂದು‌ ಪ್ರಯತ್ನ. ನಮ್ಮ ತಂಡದಲ್ಲಿ ಸಂಪೂರ್ಣ ಸ್ಥಳೀಯರೇ ಮತ್ತು ಹೊಸದನ್ನೇನಾದರೂ ನಮ್ಮೂರು, ನಮ್ಮೂರಿನವರಿಗೆ ನೀಡಬೇಕು ಅನ್ನೋ ಹಂಬಲವಿರೋ ಯುವ ಮನಸ್ಸುಗಳೇ ತುಂಬಿಕೊಂಡಿರೋದ್ರಿಂದ, ಗ್ರಾಹಕರಿಗೆ ಪರಿಣಾಮಕಾರಿಯಾಗಿ ತಲುಪಬಲ್ಲಂತ, ಹಾಗೂ ಅವರನ್ನು ಸಂತುಷ್ಟಪಡಿಸಬಲ್ಲ ಹೊಸ ಹೊಸಾ ಐಡಿಯಾಗಳು ಹುಟ್ಟಿಕೊಳ್ಳುತ್ತದೆ.

ನಾವು ಸ್ಥಳೀಯ ಯುವ ಮನಸ್ಸುಗಳಿಗೆ ಹತ್ತಿರವಾಗಿ, ಅವರಿಗೂ ಊರನ್ನು ಹತ್ತಿರವಾಗಿಸುವ ಪ್ರಯತ್ನದಲ್ಲಿದ್ದೇವೆ. ನಾವು ಉತ್ತಮ ಗುಣಮಟ್ಟದ ಸೇವೆಯನ್ನ ಗ್ರಾಹಕರಿಗೆ ನೀಡುವುದರೊಂದಿಗೆ, ಗ್ರಾಹಕರೊಂದಿಗಿನ ಎಲ್ಲಾ ವ್ಯವಹಾರಗಳಲ್ಲೂ ಪಾರದರ್ಶಕತೆಯನ್ನ ಕಾಯ್ದುಕೊಳ್ಳುತ್ತೇವೆ. ದೊಡ್ಡ ದೊಡ್ಡ ಆನ್ಲೈನ್ ಮಾರುಕಟ್ಟೆಗಳ ಮಟ್ಟಕ್ಕೆ ಊರ್ಮನಿ ಅಂಗಡಿಯನ್ನ ಕೊಂಡೊಯ್ಯುವವರೆಗೂ ನಮ್ಮ ತಂಡ ವಿರಮಿಸುವುದಿಲ್ಲನಾವು ಈಗಿರುವ ಡೆಲಿವರಿ ಶುಲ್ಕವನ್ನ ಇನ್ನೂ ತಗ್ಗಿಸುವುದರ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಊರ್ಮನಿ ಅಂಗಡಿ ಸಂಸ್ಥಾಪಕರು ಮತ್ತು ನಿರ್ದೇಶಕರಾಗಿರುವ
ವಿ. ಗೌತಮ್ ನಾವಡ.

ಇಷ್ಟೇ ಅಲ್ಲದೇ, ಕುಂದಾಪುರ ವ್ಯಾಪ್ತಿಯ ಇತರ ಉತ್ಪಾದಕರು ಹಾಗೂ ಮಾರಾಟಗಾರರು ಕೂಡ ತಮ್ಮ ಉತ್ಪನ್ನಗಳನ್ನು ಈ ತಾಣದಲ್ಲಿ ನೊಂದಾಯಿಸಿಕೊಂಡು ಆನ್ಲೈನ್ ಮೂಲಕ ಜನರಿಗೆ ತಲುಪಿಸುವಂತಹ ಅವಕಾಶವನ್ನೂ ನೀಡಲಾಗಿದೆ. ಕೈಬೆರಳ ತುದಿಯಲ್ಲಿ ನಿಮ್ಮೂರಿನ ಸ್ಥಳೀಯ ವಸ್ತುಗಳು ಸಿಕ್ಕುವಾಗ ತಡ ಯಾಕೆ, ಈಗಲೇ http://oormaniangadi.com ಆನ್ಲೈನ್ ಶಾಪಿಂಗ್ ತಾಣಕ್ಕೆ ಈಗಲೇ ಭೇಟಿಕೊಡಿ, ನಿಮ್ಮ “ಊರ್ಮನಿ ಅಂಗಡಿ” ಯನ್ನು ಬಳಸಿ ಮತ್ತು ಬೆಳೆಸಿ.

ಊರ್ಮನಿ ಅಂಗಡಿ ಆಪ್: https://play.google.com/store/apps/details?id=com.forthfocus.oormaniangadi&hl=en_IN&gl=US

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.