Sunday, September 6, 2026
Sunday, September 6, 2026

ಕಿಳಿಂಗಾರು ಸಾಯಿರಾಮ ಭಟ್ ನಿಧನಕ್ಕೆ ಕಲ್ಕೂರ ಸಂತಾಪ

ಕಿಳಿಂಗಾರು ಸಾಯಿರಾಮ ಭಟ್ ನಿಧನಕ್ಕೆ ಕಲ್ಕೂರ ಸಂತಾಪ

Date:

ಉಡುಪಿ: ಬಡವರ ಪಾಲಿಗೆ ಸೇವಾ ದುರಂಧರರೆನಿಸಿದ್ದ ಕಿಳಿಂಗಾರು ಸಾಯಿರಾಮ್ ಭಟ್ ನಿಧನಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

250ಕ್ಕೂ ಹೆಚ್ಚು ಮಂದಿಗೆ ಮನೆ ನಿರ್ಮಿಸಿದ ದಾನಿ, ನೂರಾರು ಮನೆಗಳಿಗೆ ಕುಡಿಯುವ ನೀರು, 50ಕ್ಕೂ ಅಧಿಕ ಮಂದಿಗೆ ರಿಕ್ಷಾ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದ ಭಟ್ಟರು ಉಚಿತ ವೈದ್ಯಕೀಯ ಸೇವೆ, ಬಡ ಜನತೆಯ ಕುಟುಂಬದ ಶುಭ ಸಮಾರಂಭ ನೆರವೇರಿಸುವರೇ ಉಚಿತವಾಗಿ ಸಮುದಾಯ ಭವನವನ್ನು ಬಳಸಿಕೊಳ್ಳುವ ಅವಕಾಶ ಸಹಿತ ನೂರಾರು ಜನಹಿತ ಕಾರ್ಯಗಳಿಂದ ಜನಮನ್ನಣೆಗಳಿಸಿದ ಸಾಯಿರಾಮ ಭಟ್‌ರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಲ್ಕೂರ ಜೀವಮಾನ ಸಾಧನಾ ಪ್ರಶಸ್ತಿ, ಭಗವಾನ್ ಸಾಯಿಬಾಬಾ ಸೇವಾ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಪ್ರದೀಪ ಕುಮಾರ ಕಲ್ಕೂರ ಸ್ಮರಿಸಿದ್ದಾರೆ.

ದಿವಂಗತರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಪೊಳಲಿ ನಿತ್ಯಾನಂದ ಕಾರಂತ, ಡಾ. ಎಂ. ಪ್ರಭಾಕರ ಜೋಶಿ, ಶರವು ರಾಘವೇಂದ್ರ ಶಾಸ್ತ್ರಿ, ಎಚ್. ಜನಾರ್ದನ ಹಂದೆ ಮೊದಲಾದವರು ಕಂಬನಿ ಮಿಡಿದಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!