Tuesday, October 27, 2026
Tuesday, October 27, 2026

ವೈದ್ಯಕೀಯ ತಪಾಸಣಾ ಶಿಬಿರ

ವೈದ್ಯಕೀಯ ತಪಾಸಣಾ ಶಿಬಿರ

Date:

ಬ್ರಹ್ಮಾವರ: ನಮ್ಮ ಜೀವನದಲ್ಲಿ ಅತ್ಯಂತ ಮಹತ್ವದ ಕೊಡುಗೆ ಆರೋಗ್ಯ. ಆರೋಗ್ಯದ ಪಾಲನೆ ಸರಿಯಾಗಿ ಮಾಡಿದರೆ ನಮ್ಮ ಜೀವನ ಯಶಸ್ವಿಯಾಗುವುದು ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಅವರು ಬ್ರಹ್ಮಾವರ ಭಾರತೀಯ ಜನೌಷಧಿ ಕೇಂದ್ರ ಹಾಗೂ ಜಯಂಟ್ಸ್ ಗ್ರೂಪ್ ಇದರ ವತಿಯಿಂದ ಇಂದು ನಡೆದ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ಮತ್ತು 75 ಹಿರಿಯ ನಾಗರಿಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿಯವರ ಕನಸಿನ ಕಾರ್ಯಕ್ರಮ ಹಿರಿಯ ನಾಗರಿಕರಿಗೆ ಅಭಿನಂದನೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.

ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್ ಶೆಟ್ಟಿ, ಮೂಳೆ ರೋಗ ತಜ್ಞ ಡಾ. ಅರ್ಜುನ್ ಬಲ್ಲಾಳ, ಡಾ. ಗಣೇಶ್ ಕಾಮತ್, ಕೆ.ಎಂ.ಸಿ ನೇತ್ರತಜ್ಞರಾದ ಡಾ. ಸೌಮ್ಯ, ಡಾ. ಧನಂಜಯ್ ಭಟ್, ಮಧುಸೂಧನ್ ಹೇರೂರು, ಪ್ರಸನ್ನ ಕಾರಂತ್ ಮುಂತಾದವರಿದ್ದರು.

ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಸ್ವಾಗತಿಸಿ, ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗುರ್ಮೆ ಫೌಂಡೇಶನ್: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ

ಕಾಪು, ಅ.26: ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆಯಲ್ಲಿ 25 ವರ್ಷ...

ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಿಎಂ ಸಭೆ

ಬೆಳಗಾವಿ, ಅ.26: ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮುಖ್ಯಮಂತ್ರಿ ಡಿ.ಕೆ....
error: Content is protected !!