Monday, November 30, 2026
Monday, November 30, 2026

ಹಿರಿಯಡಕ: ಕಿಶೋರ ಯಕ್ಷ ಸಂಭ್ರಮ ಸಮಾರೋಪ

ಹಿರಿಯಡಕ: ಕಿಶೋರ ಯಕ್ಷ ಸಂಭ್ರಮ ಸಮಾರೋಪ

Date:

ಹಿರಿಯಡಕ, ನ.29: ಕಿಶೋರ ಯಕ್ಷಗಾನ ಸಂಭ್ರಮ 2026ರ ನಾಲ್ಕು ಶಾಲೆಗಳ ಪ್ರದರ್ಶನ ಹಿರಿಯಡಕದ ವೀರಭದ್ರ ದೇವಳದ ವಠಾರದಲ್ಲಿ ನಡೆಯುತ್ತಿದ್ದು ಅದರ ಸಮಾರೋಪ ಸಮಾರಂಭ ಜರುಗಿತು. ನಾಲ್ವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಹೊರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಮಾತನಾಡಿ ಯಕ್ಷಗಾನದ ಬಗ್ಗೆ ಏನೂ ಗೊತ್ತಿಲ್ಲದ ನಮಗೆ ಉಡುಪಿಯಲ್ಲಿ ಶಾಲಾ ಶಿಕ್ಷಣ ಪಡೆದಿದ್ದರಿಂದಾದ ದೊಡ್ಡ ಲಾಭವೆಂದರೆ ಮೂರು ವರ್ಷ ಯಕ್ಷಗಾನದಲ್ಲಿ ಭಾಗವಹಿಸಿದ್ದು. ಇದರಿಂದ ನಮ್ಮ ಭಾಷಾ ಕೌಶಲ, ಪುರಾಣ ಜ್ಞಾನ, ಆತ್ಮವಿಶ್ವಾಸ ಹೆಚ್ಚಿದೆ. ಕಲಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕಿ ನಳಿನಾ ಎಂ. ಆರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯಡಕ ಪಬ್ಲಿಕ್ ಸ್ಕೂಲಿನ ಆಡಳಿತ ಸಮಿತಿ ಅಧ್ಯಕ್ಷ ಶ್ರೀಶ ನಾಯಕ್, ಕಾರ್ಯದರ್ಶಿ ಜಯರಾಮ ಶೆಟ್ಟಿ, ಉದ್ಯಮಿಗಳಾದ ಸುನಿಲ್ ಓಂತಿಬೆಟ್ಟು, ವಿಶ್ವನಾಥ ಶೇರಿಗಾರ್ ಹಾಗು ಸುಧಾಕರ ಪೂಜಾರಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಗುಂಪು ಛಾಯಾಚಿತ್ರ ವಿತರಿಸಲಾಯಿತು. ಪ್ರದರ್ಶನ ಸಂಘಟನಾ ಸಮಿತಿಯ ನೇತೃತ್ವ ವಹಿಸಿ ಯಶಸ್ವಿಯಾಗಿ ನಿರ್ವಹಿಸಿದ ಶ್ರೀನಿವಾಸ ರಾವ್ ಇವರನ್ನು ಶಾಲು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿಗಳಾದ ನಾರಾಯಣ ಎಂ. ಹೆಗಡೆ, ನಾಗರಾಜ ಹೆಗಡೆ ಸಹಕರಿಸಿದರು. ಯು. ಎಸ್.ನಾಯಕ್ ಪ್ರೌಢಶಾಲೆ ಪಟ್ಲ ಇಲ್ಲಿಯ ವಿದ್ಯಾರ್ಥಿಗಳಿಂದ ‘ಗಣೇಶೋದ್ಭವ’ ಹಾಗು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ ಇಲ್ಲಿಯ ವಿದ್ಯಾರ್ಥಿಗಳಿಂದ ‘ಮೈಂದದ್ವಿವಿಧ’ ಪ್ರಸಂಗಗಳು ಪ್ರಸ್ತುತಗೊಂಡವು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಚೀನಾವನ್ನು 3-1 ಅಂತರದಿಂದ ಸೋಲಿಸಿ ನಾಲ್ಕನೇ ಬಾರಿಗೆ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡ ಭಾರತ

ಹಾಕಿಯಲ್ಲಿ, ಹಾಲಿ ಚಾಂಪಿಯನ್ ಭಾರತವು ಚೀನಾವನ್ನು 3-1 ಅಂತರದಿಂದ ಸೋಲಿಸಿ ನಾಲ್ಕನೇ...

ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಕರ್ಜೆಯಿಂದ ಕುರ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬ್ರಹ್ಮಾವರ, ನ.29: ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಕರ್ಜೆ ಹೊಸೂರು ಶಾಲೆಯಿಂದ...

ಪರಿಪೂರ್ಣತೆಯ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯದ ಸಾಧನೆಗೆ ಅಡಿಪಾಯ: ಡಾ. ಎಂ. ಮೋಹನ್ ಆಳ್ವ

ಉಡುಪಿ, ನ.29: ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪಠ್ಯಕ್ರಮದ ಶಿಕ್ಷಣತೆಗೆ ಸೀಮಿತವಾಗಿರದೇ...

ಕಾಪು: ಅನುಷಾ ರೈ ಅಕ್ಷರ ನಮನ

ಕಾಪು, ನ.29: ಬಿಗ್‌ಬಾಸ್ ಖ್ಯಾತಿಯ, ‘ಕರ್ನಾಟಕ ಕ್ರಶ್’ ಎಂದೇ ಜನಪ್ರಿಯತೆ ಪಡೆದಿರುವ...
error: Content is protected !!