ಸಿದ್ಧಾಪುರ: ನೆಹರು ಯುವ ಕೇಂದ್ರ ಉಡುಪಿ ಹಾಗೂ ಸಮೃದ್ಧಿ ಯುವಕ ಮಂಡಲ(ರಿ). ಕುಳ್ಳುಂಜೆ ಶಂಕರನಾರಾಯಣ ಇವರ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಹಾಗೂ ಸ್ವಚ್ಚತಾ ಅಭಿಯಾನ ಸಮೃದ್ಧಿ ಯುವಕ ಮಂಡಲದಲ್ಲಿ ನೆರವೇರಿತು. ಭಾರತೀಯ ಭೂಸೇನೆಯ ಮಾಜಿ ಸೈನಿಕರಾದ ಪ್ರಭಾಕರ್ ನಾಯ್ಕ್ ಮಾವಿನಕೊಡ್ಲು ಧ್ವಜಾರೋಹಣಗೈದು ದೇಶದ ತಮ್ಮ ಸೇವಾವಧಿಯ ಅನುಭವವನ್ನು ಹಂಚಿಕೊಂಡರು. ಪ್ರಭಾಕರ ನಾಯ್ಕ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಶಂಕರನಾರಾಯಣದ ವಿದ್ಯಾರ್ಥಿನಿ ಮಂಗಳರವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ತಲ್ಲಂಜೆ ವಹಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಘುರಾಮ ಕುಳ್ಳುಂಜೆ, ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ ಬಾಳೆಕೋಡ್ಲು, ಗೋಪಾಲ್ ಎಳ್ಮಣ್ಣು, ಚಂದ್ರ ಕೆ, ಸತೀಶ್ ಟಿ, ಚಂದ್ರ ಡಿ.ಎಸ್, ರಾಜೇಶ್ ಆಚಾರ್ಯ, ಉದಯ ಎಳ್ಮಣ್ಣು, ಶಿಕ್ಷಕ ಉದಯ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಜಿತ್ ಶೇಟ್ ಸ್ವಾಗತಿಸಿ, ಪ್ರವೀಣ್ ನಾಯ್ಕ್ ಬಾಳೆಕೊಡ್ಲು ವಂದಿಸಿದರು. ನಾರಾಯಣ್ ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಮೃದ್ಧಿ ಯುವಕ ಮಂಡಲದಿಂದ ಸಿಂಗಿನಕೋಡ್ಲು ಮೂರುಕೈವರೆಗಿನ ರಸ್ತೆಯ ಇಕ್ಕೆಲಗಳಲ್ಲಿನ ಸ್ವಚ್ಛತಾ ಅಭಿಯಾನ ನಡೆಯಿತು.




By
ForthFocus™