Friday, July 24, 2026
Friday, July 24, 2026

ಇಂಗ್ಲೆಂಡ್ ನಲ್ಲಿ ಪ್ರಜ್ವಲಿಸಿದ ಆಕಾಶದೀಪ; ಭಾರತ ದಿಗ್ವಿಜಯ

ಇಂಗ್ಲೆಂಡ್ ನಲ್ಲಿ ಪ್ರಜ್ವಲಿಸಿದ ಆಕಾಶದೀಪ; ಭಾರತ ದಿಗ್ವಿಜಯ

Date:

ಯು.ಬಿ.ಎನ್.ಡಿ., ಜು.6: ಇಂಗ್ಲೆಂಡ್ ವಿರುದ್ಧ ಎದ್ಜ್ಬಾಸ್ಟನ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ನಲ್ಲಿ ಭಾರತ 336 ರನ್ ಗಳ ಬೃಹತ್ ಗೆಲುವನ್ನು ಸಾಧಿಸಿದೆ. ತನ್ಮೂಲಕ ಐದು ಪಂದ್ಯಗಳ ಸರಣಿ 1-1 ಸಮಬಲಗೊಂಡಿದೆ.

ಐದನೇ ದಿನವಾದ ಭಾನುವಾರ ಭಾರತದ ಬೌಲರ್ ಗಳು ಮೇಲುಗೈ ಸಾಧಿಸಿದರು. ವೇಗಿ ಆಕಾಶದೀಪ್ 6 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 587 ರನ್ ಗಳಿಸಿದರೆ, ಇಂಗ್ಲೆಂಡ್ 407 ರನ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 427 ರನ್ ಗಳಿಸಿ ಡಿಕ್ಲೇರ್ ಮಾಡಿದ ಬಳಿಕ ಇಂಗ್ಲೆಂಡ್ ಗೆಲ್ಲಲು 608 ರನ್ ಗಳ ಗುರಿ ಪಡೆಯಿತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 271 ಕ್ಕೆ ಸರ್ವಪತನವಾಯಿತು. ಭಾರತದ ಆಕಾಶದೀಪ್ ಇಂಗ್ಲೆಂಡ್ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಆಟಗಾರರಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಜ್ಯಾಮಿ ಸ್ಮಿತ್ 88 ರನ್ ಗಳಿಸಿದರು.

ಪ್ರಥಮ ಇನ್ನಿಂಗ್ಸ್ ನಲ್ಲಿ ನಾಯಕ ಶುಭ್ಮನ್ ಗಿಲ್ ಆಕರ್ಷಕ ದ್ವಿಶತಕ (269) ಗಳಿಸಿದರೆ, ಯಶಸ್ವಿ ಜೈಸ್ವಾಲ್ 87 ರನ್, ರವೀಂದ್ರ ಜಡೇಜಾ 89 ಗಳಿಸಿದರು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 158 ರನ್ ಗಳಿಸಿದರೆ, ಸ್ಮಿತ್ 184 ರನ್ ಗಳಿಸಿದರು. ದ್ವಿತೀಯ ಇನ್ನಿಂಗ್ಸ್ ನಲ್ಲಿ ನಾಯಕ ಗಿಲ್ 161 ರನ್ ಗಳಿಸಿದರು. ಜಡೇಜಾ 69, ರಿಷಬ್ ಪಂತ್ 65, ಕೆ.ಎಲ್. ರಾಹುಲ್ 55 ರನ್ ಗಳಿಸಿದರು. ಶುಭ್ಮನ್ ಗಿಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಭಾಜನರಾದರು.

ಹತ್ತು ವಿಕೆಟ್ ಸಾಧನೆ: ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದ ಆಕಾಶದೀಪ್, ದ್ವಿತೀಯ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಪಂದ್ಯದಲ್ಲಿ 10 ವಿಕೆಟ್ ಪಡೆದ ಅಪರೂಪದ ದಾಖಲೆ ನಿರ್ಮಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ವಿದ್ಯಾ ಕಾಲೇಜು: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

ಕಟಪಾಡಿ, ಜು.23: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್...

ಶೈಕ್ಷಣಿಕ ಬದುಕಿನ ಅರ್ಥವನ್ನು ಅರಿತುಕೊಳ್ಳಿ: ವಿದ್ಯಾರ್ಥಿಗಳಿಗೆ ಡಾ. ಕೆ. ಉಮೇಶ್ ಶೆಟ್ಟಿ ಕರೆ

ಕುಂದಾಪುರ, ಜು.23: ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಧನಾತ್ಮಕವಾಗಿ ಚಿಂತಿಸಿ,...

ಕಟ್ಟಡ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಬಾಲ ಕಾರ್ಮಿಕನ ರಕ್ಷಣೆ

ಉಡುಪಿ, ಜು.23: ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರ್ ಗ್ರಾಮದಲ್ಲಿ ನಡೆಯುತ್ತಿರುವ ಕಟ್ಟಡ...
error: Content is protected !!