Home ಸುದ್ಧಿಗಳು ಕ್ರೀಡೆ ಏಷ್ಯನ್ ಚೆಸ್ ಚಾಂಪಿಯನ್ಶಿಪ್: ರಾಜ್ಯದ ಚಾರ್ವಿ ಅನಿಲ್ ಕುಮಾರ್ ಅವರಿಗೆ ರಜತ ಪದಕ

ಏಷ್ಯನ್ ಚೆಸ್ ಚಾಂಪಿಯನ್ಶಿಪ್: ರಾಜ್ಯದ ಚಾರ್ವಿ ಅನಿಲ್ ಕುಮಾರ್ ಅವರಿಗೆ ರಜತ ಪದಕ

398
0

ಬೆಂಗಳೂರು: ಏಷ್ಯನ್ ಚೆಸ್ ಚಾಂಪಿಯನ್ ಶಿಪ್ ನ ಏಳು ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಚಾರ್ವಿ ಅನಿಲ್ ಕುಮಾರ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಭಾರತದವರೇ ಆದ ತೆಲಂಗಾಣದ ಸಂಹಿತಾ ಪುಂಗವನಮ್ ಪ್ರಥಮ ಸ್ಥಾನ ಗಳಿಸಿದ್ದು, ಪಿಲಿಪ್ಪೈನ್ಸ್ ನ ವೆಂಟುರಾ ತಾಲಿಯಾ ತೃತೀಯ ಸ್ಥಾನ ಗಳಿಸಿದ್ದಾರೆ.

ಹತ್ತು ದಿನಗಳ ಹಿಂದಷ್ಟೇ ನಡೆದಿದ್ದ ಭಾರತದ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಚಾರ್ವಿ, ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಸಹ ಕೊನೆಯ ಸುತ್ತಿನವರೆಗೂ ಪ್ರಥಮ ಸ್ಥಾನದಲ್ಲಿದ್ದರು.

ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಭಾರತದವರೇ ಆದ ಸಂಹಿತಾ ಇಂದ ಪ್ರಬಲ ಪೈಪೋಟಿ ಎದುರಿಸಿದ ಚಾರ್ವಿ ಚಿನ್ನದ ಪದಕದ ಸನಿಹದಲ್ಲಿದ್ದರು. ಕೊನೆಯಲ್ಲಿ ಇಬ್ಬರೂ ತಲಾ 8 ಅಂಕ ಗಳಿಸಿದಾಗ ಟೈ ಬ್ರೇಕರ್ ಆಧಾರದ ಮೇಲೆ ಚಾರ್ವಿ ಎರಡನೇ ಸ್ಥಾನ ಹಾಗೂ ರಜತ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಅದೇ ಪಂದ್ಯಾವಳಿಯ ತಂಡ ವಿಭಾಗದಲ್ಲಿ ಚಾರ್ವಿ ಪ್ರತಿನಿಧಿಸಿದ 4 ಜನರ ಭಾರತೀಯ ತಂಡ ಚಿನ್ನದ ಪದಕ ಗಳಿಸಿದೆ.

ಈ ಸಾಧನೆಯ ಮುಖಾಂತರ ಆಗಸ್ಟ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅಂಡರ್ -7 ವಿಭಾಗದಲ್ಲಿ ಚಾರ್ವಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಲಿದ್ದಾರೆ. ಹಿಂದೆ ವರದಿಯಾದಂತೆ ಇದೇ ಪಂದ್ಯಾವಳಿಯ ಹತ್ತು ವರ್ಷದ ಒಳಗಿನವರ ವಿಭಾಗದಲ್ಲಿ ಕೂಡ ಚಾರ್ವಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ.

ಮೂಲತಃ ಶ್ರವಣಬೆಳಗೊಳದ ಜಿನೇನಹಳ್ಳಿಯ ಅನಿಲ್ ಕುಮಾರ್ ಹಾಗೂ ಅಖಿಲಾ ಅವರ ಪುತ್ರಿಯಾಗಿರುವ ಚಾರ್ವಿ, ಕಳೆದ ಎರಡೂವರೆ ವರ್ಷಗಳಿಂದ ಮಲ್ಲೇಶ್ವರಂನ ಕರ್ನಾಟಕ ಚೆಸ್ ಅಕಾಡೆಮಿಯಲ್ಲಿ ಚದುರಂಗ ಅಭ್ಯಾಸ ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಚೆಸ್ ಆಟಗಾರ ಶಿವಾನಂದ ಬಿ.ಎಸ್ ಚಾರ್ವಿಯ ಮುಖ್ಯ ತರಬೇತುದಾರರಾಗಿದ್ದು, ಇನ್ನೋರ್ವ ಖ್ಯಾತ ಆಟಗಾರ ಗಹನ್ ಎಂ.ಜಿ ಸಹಾಯಕ ತರಬೇತುದಾರರಾಗಿ ಚಾರ್ವಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.