Thursday, April 30, 2026
Thursday, April 30, 2026

ರಾಷ್ಟ್ರೀಯ ಏಕತಾ ದಿನ

ರಾಷ್ಟ್ರೀಯ ಏಕತಾ ದಿನ

Date:

ಕೋಟೇಶ್ವರ, ನ.14: ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ ಕುಂದಾಪುರ ಇಲ್ಲಿಯ ವಿವಿಧ ಸಮಿತಿಗಳ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಏಕತಾ ದಿನದ ಮಹತ್ವ ಮತ್ತು ಆಚರಣೆಯ ಹಿನ್ನಲೆಯನ್ನು ವಿವರಿಸಿದರು. ದೇಶದಲ್ಲಿದ್ದ ವಿವಿಧ ಸಂಸ್ಥಾನಗಳನ್ನು ಭಾರತ ಸರ್ಕಾರದ ಪ್ರಜಾಪ್ರಭುತ್ವದ ಛತ್ರದ ಅಡಿಯಲ್ಲಿ ತರುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಿದರು.

ರಾಷ್ಟ್ರೀಯ ಏಕತೆಯ ಜಾಗೃತ ಭಾವ ಇದ್ದಾಗ ಮಾತ್ರ ರಾಷ್ಟ್ರೀಯ ಏಕತೆ ಮತ್ತು ಅಖಂಡತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಸಮಾಹಿತರಾದ ಎಲ್ಲಾ ವಿದ್ಯಾರ್ಥಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಏಕತಾ ಪ್ರತಿಜ್ಞೆಯನ್ನು ಸ್ವೀಕರಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ್ ಪ್ರತಿಜ್ಞೆ ಬೋಧಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆರೋಗ್ಯ ಇಲಾಖೆಗೆ ವಾಹನ ಹಸ್ತಾಂತರ

ಉಡುಪಿ, ಏ.29: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ...

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

ಕಾಪು, ಏ.29: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಿಂದ ಪಡುಬಿದ್ರಿ ಶ್ರೀ...

ತ್ರಾಸಿ: ಲಾರಿಗೆ ಬಸ್ ಡಿಕ್ಕಿ-ಮೂರು ಮಂದಿ ಸಾವು

ತ್ರಾಸಿ, ಏ.29: ಪ್ರವಾಸಕ್ಕೆ ಹೊರಟಿದ್ದ ಬಸ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ...
error: Content is protected !!