Sunday, July 26, 2026
Sunday, July 26, 2026

ಇಸ್ರೋ ವಿಜ್ಞಾನಿ ಸುಮನ್ ಆರ್. ವಾಲ್ಕೆಗೆ ಸನ್ಮಾನ

ಇಸ್ರೋ ವಿಜ್ಞಾನಿ ಸುಮನ್ ಆರ್. ವಾಲ್ಕೆಗೆ ಸನ್ಮಾನ

Date:

ಮಂಗಳೂರು, ಸೆ.13: ಕೆನರಾ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಮತ್ತು ಇಸ್ರೋ ವಿಜ್ಞಾನಿಯಾದ ಸುಮನ್ ಆರ್. ವಾಲ್ಕೆ ಅವರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕೆನರಾದ ಹೆಮ್ಮಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಂಗಳೂರು ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಈ ಸನ್ಮಾನವನ್ನು ನಡೆಸಿದ್ದು ವಾಲ್ಕೆಯವರನ್ನು ಮರಳಿ ಈ ಸಂಸ್ಥೆಯಡಿ ಸನ್ಮಾನಿಸಲು ಹೆಮ್ಮೆಯಾಗುತ್ತದೆ ಎಂದರು.

ಇದೇ ವೇಳೆ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮತ್ತು ದಿ ಕೋಸ್ಟಲ್ ಆಸ್ಟ್ರೋನಮಿ ಗ್ರೂಪ್ ಜಂಟಿಯಾಗಿ ಆಯೋಜಿಸಿದ ಉಪಗ್ರಹ ಸಂವಹನ ಕಾರ್ಯಾಗಾರದಲ್ಲಿ, ಉಪಗ್ರಹ ಅಮೆಚೂರ್ ರೇಡಿಯೋ ಕ್ಲಬ್‌ನ ಸಹ ವಿಜ್ಞಾನಿಗಳಾದ ಡಾ. ರಾಹುಲ್ ವಾಘ್ಮರೆ, ಮೋಹನ್ ಮತ್ತು ಶ್ವೇತಾ ಅವರ ವಿಶೇಷ ಕೊಡುಗೆಗಳಿಗಾಗಿ ಸನ್ಮಾನಿಸಲಾಯಿತು.

ಕೆನರಾ ಪ್ರೌಢಶಾಲಾ ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ಭಟ್, ಕೆನರಾ ವಿಕಾಸ್ ಸಂಸ್ಥೆಗಳ ಸಂಯೋಜಕರಾದ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ನಂದಗೋಕುಲ ಮತ್ತು ಕೆನರಾ ಅಂತರರಾಷ್ಟ್ರೀಯ ಶಾಲೆಯ ಸಂಚಾಲಕರಾದ ನರೇಶ್ ಶೆಣೈ, ಕೆನರಾ ಪ್ರೌಢಶಾಲೆ (ಮುಖ್ಯ) ಸಂಚಾಲಕರಾದ ಅಶ್ವಿನಿ ಕಾಮತ್, ಕೆನರಾ ಪಿಯು ಕಾಲೇಜು ಪ್ರಾಂಶುಪಾಲರಾದ ಲತಾ ಮಹೇಶ್ವರಿ ಹಾಗೂ ಕೋಸ್ಟಲ್ ಆಸ್ಟ್ರಾನೋಮಿ ಕ್ಲಬ್ ನ ಅಶ್ವಿನ್ ಶೆಣೈ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!