Saturday, September 5, 2026
Saturday, September 5, 2026

ಆರೋಗ್ಯ ರಕ್ಷಕರಿಗೆ ನಮೋ ನಮಃ

ಆರೋಗ್ಯ ರಕ್ಷಕರಿಗೆ ನಮೋ ನಮಃ

Date:

ವೈದ್ಯೋ ನಾರಾಯಣೋ ಹರಿ ಎಂಬಂತೆ ಭೂಮಿ ಮೇಲಿನ ದೇವರು ಎಂದರೆ ಅದು ವೈದ್ಯರು ಎಂಬ ಮಾತಿದೆ. ಈ ಮೂಲಕ ವೈದ್ಯರ ಸೇವೆಗೆ ಗೌರವವನ್ನು ನಾವೆಲ್ಲರೂ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ರೋಗಿಗಳ ಜೀವ ಉಳಿಸುವ ಸಲುವಾಗಿ ಪ್ರತಿ ಕ್ಷಣವೂ ಎಂತಹ ಪರಿಸ್ಥಿತಿಯಲ್ಲಿ ನಿಸ್ವಾರ್ಥವಾಗಿ ಉತ್ತಮ ಸೇವೆಯನ್ನು ವೈದ್ಯರು ನೀಡುತ್ತಾರೆ. ವ್ಯಕ್ತಿಯೊಬ್ಬ ತನ್ನ ದೇಹದ ಬಗ್ಗೆ ಸಂಪೂರ್ಣ ಅಸಹಾಕತೆ ಹೊಂದಿದಾಗ ಆತ ಗುಣಮುಖವಾಗುವ ಭರವಸೆಯೊಂದಿಗೆ ವೈದ್ಯರ ಬಳಿ ಹೋಗುತ್ತಾನೆ. ಔಷಧಗಳು ರೋಗಗಳನ್ನು ಗುಣಪಡಿಸಿದರೆ, ವೈದ್ಯ ರೋಗಿಯನ್ನು ಗುಣಪಡಿಸುತ್ತಾನೆ ಎಂಬ ಮಾತಿದೆ. ಅದರಂತೆ ವೈದ್ಯರ ಈ ಸೇವೆ ಮತ್ತು ಸಮರ್ಪಣೆಯನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಣೆ ಮಾಡುವ ಹಿಂದೆ ಒಂದು ಪ್ರಮುಖ ಕಾರಣವೂ ಇದೆ. ಇದು ಭಾರತದ ಶ್ರೇಷ್ಠ ವೈದ್ಯರಲ್ಲಿ ಒಬ್ಬರಾದ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿಧಾನ್​ ಚಂದ್ರ ರಾಯ್​ ಅವರಿಗೆ ಗೌರವ ನೀಡುವ ಉದ್ದೇಶವನ್ನು ಈ ದಿನ ಹೊಂದಿದೆ. ಡಾ. ರಾಯ್​ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದು, ಬಂಗಾಳದ ದೂರದೃಷ್ಟಿಯ ನಾಯಕತ್ವಕ್ಕಾಗಿ ಬಂಗಾಳದ ವಾಸ್ತುಶಿಲ್ಪಿ ಎಂದು ಕೂಡ ಕರೆಯಲ್ಪಡುತ್ತಾರೆ. ಡಾ. ರಾಯ್​ ದೇಶದ ಅತ್ಯುನ್ನತ ನಾಗರೀಕ ಗೌರವವಾದ ಭಾರತ ರತ್ನ ಪ್ರಶಸ್ತಿಗೂ 1961ರಲ್ಲಿ ಭಾಜನರಾದರು. ಭಾರತ ಸರ್ಕಾರ 1991ರಿಂದ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆರಂಭಿಸಲು ಘೋಷಿಸಿತು.

ಜಗತ್ತು ಕೊರೊನಾ ಸಾಂಕ್ರಾಮಿಕತೆಯಿಂದ ಬಳಲುತ್ತಿದ್ದಾಗ, ವಾರದ 7ದಿನ ದಿನದ 24 ಗಂಟೆಯೂ ಸೇವೆ ನೀಡಿದ ವೈದ್ಯರು ಸಾವಿರಾರು ಜೀವ ಉಳಿಸಲು ಹೋರಾಡಿದರು. ಇಡೀ ಜಗತ್ತು ಸೋಂಕಿನ ಭಯದಲ್ಲಿದ್ದಾಗ, ಈ ಭಯವನ್ನು ಮರೆತು ಅವರು ರೋಗಿಗಳ ಚಿಕಿತ್ಸೆಗೆ ಮುಂದಾದರು. ಈ ಸಂದರ್ಭದಲ್ಲಿ ವೈದ್ಯರು ನಿರ್ವಹಿಸಿದ್ದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

ಜಗತ್ತಿನಲ್ಲಿ ಅತ್ಯಂತ ಕ್ಲಿಷ್ಟಕರ ಉದ್ಯೋಗದಲ್ಲಿ ವೈದ್ಯ ವೃತ್ತಿ ಒಂದಾಗಿದ್ದು, ಉದಾತ್ತ ಹುದ್ದೆಗಳಲ್ಲಿ ಒಂದಾಗಿದೆ. ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಹಗಲಿರುಳು ಜನರ ಸೇವೆ ಸಿದ್ದವಾಗಿರುವ ಇಂತಹ ವೈದ್ಯರ ಸೇವೆ ಪ್ರಶಂಸೆ ಮಾಡಲು ಒಂದು ದಿನ ಸಾಕಾಗುವುದಿಲ್ಲ. ಅವರ ಸೇವೆ ಎಷ್ಟು ಬಾರಿ ನೆನೆದರೂ ಕಡಿಮೆಯೇ ಸಮಾಜದಲ್ಲಿ ವೈದ್ಯರ ಪ್ರಾಮುಖ್ಯತೆಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ದಿನ ಅವರಿಗೆ ಗೌರವ ಸಮರ್ಪಣೆ ಜೊತೆ ವಿವಿಧ ಕಾರ್ಯಗಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜನೆ ಮಾಡಲಾಗುತ್ತಿದೆ.

ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನಾಚರಣೆ ಮಾಡಲಾಗುತ್ತಿದೆ. ಇನ್ನು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ವೈದ್ಯರ ದಿನವನ್ನು ಬೇರೆ ದಿನದಂದು ಆಚರಿಸಲಾಗುತ್ತದೆ.

ನಿಜವಾದ ಆಪ್ತರಕ್ಷಕರು: ಉಸಿರಾಟ ಏರುಪೇರಾ ದಾಗ, ದೇಹಕ್ಕೆ ಸಂಕಟ ಒದಗಿದ ಸಂದಭ೯ದಲ್ಲಿ ನಮಗೆ ತಕ್ಷಣ ನೆನಪಾಗುವುದು ವೈದ್ಯರು.ಪ್ರಸ್ತುತ ಸನ್ನಿವೇಶದಲ್ಲಿ ಈ ವೈದ್ಯರ ಸೇವೆ ಅನನ್ಯ ಅಮೋಘವಾಗಿದೆ. ಅವರ ಖಾಸಗಿ ಬದುಕನ್ನು ಬದಿಗಿರಿಸಿ ರೋಗಿಗಳ ಆರೋಗ್ಯ ರಕ್ಷಣೆಗೆ ಅದೆಲ್ಲವನ್ನು ತ್ಯಾಗ ಮಾಡಿ ಜೀವನ ನಡೆಸುತ್ತಿರುವ ಎಲ್ಲಾ ವೈದ್ಯರು ಅಭಿನಂದನಾಹ೯ರು. ಭಗವಂತನು ವೈದ್ಯರ ರೂಪದಲ್ಲಿ ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿವನು ಹೀಗಾಗಿ ವೈದ್ಯರ ಆರೋಗ್ಯಕ್ಕೆ ನಾವು ದೇವರಲ್ಲಿ ಪ್ರಾರ್ಥನೆ ಮಾಡಬೇಕು.

ವೈದ್ಯರು ಚಿಕಿತ್ಸೆ ಸಂದರ್ಭದಲ್ಲಿ ಏನಾದರೂ ತೊಂದರೆ ಕಂಡು ಬಂದಾಗ ರೋಗಿಯ ಕುಟುಂಬಸ್ಥರು ವೈದ್ಯರಿಗೆ ನೀಡುತ್ತಿರುವ ತೊಂದರೆ ಅವಮಾನ ಹೇಳುತ್ತಿರುದು ಆದರೂ ಕೂಡ ವೈದ್ಯರು ತಾವು ಮಾಡುತ್ತಿರುವ ಕರ್ತವ್ಯವನ್ನು ಅದು ಕೂಡ ಜನರ ಪ್ರಾಣ ಉಳಿಸುವ ಮಹತ್ವಪೂರ್ಣ ಕಾರ್ಯವನ್ನು ಚಾಚು ತಪ್ಪದೇ ಮಾಡುತ್ತಿರುವುದು ನಿಜವಾಗಿಯೂ ಅಭಿನಂದನೀಯವಾಗಿದೆ.

ಪ್ರತಿದಿನ ವೈದ್ಯರ ಸೇವೆಗೆ ನಮ್ಮ ಕೃತಜ್ಞತೆ ಅರ್ಪಿಸೋಣ: ವೈದ್ಯರ ದಿನಾಚರಣೆಯಂದು ಮಾತ್ರ ವೈದ್ಯರಿಗೆ ಕೃತಜ್ಞತೆ ಅರ್ಪಿಸಿದರೆ ಸಾಲದು, ಅವರು ಮಾಡುತ್ತಿರುವ ಈ ಅಮೋಘ ಕಾರ್ಯಕ್ಕೆ ಪ್ರತಿದಿನ ಕೂಡ ನಾವು ಕೃತಜ್ಞತೆ ಸಲ್ಲಿಸಬೇಕು.

ವೈದ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲಾ ಒಂದು ಹಂತದಲ್ಲಿ ದೇವರು ಸ್ವರೂಪಿಯಾಗಿ ಕಾಣಿಸುತ್ತಾರೆ. ನಮಗೆ ಏನಾದರೂ ಆದಾಗ ಅಥವಾ ನಮ್ಮ ಆಪ್ತರಿಗೆ ಏನಾದರೂ ಆರೋಗ್ಯ ಸಮಸ್ಯೆ ಸಂಭವಿಸಿದಾಗ ಅವರನ್ನು ಬದುಕಿಗೆ ಮರಳಿ ತರುವ, ನಮ್ಮ ಬದುಕಿನಲ್ಲಿ ಭರವಸೆ ತುಂಬುವ, ಸಂತೋಷಕ್ಕೆ ಕಾರಣವಾಗುವ ವೈದ್ಯರು ನಮಗೆ ದೇವರ ಸಮನಾಗಿರುತ್ತಾರೆ. ವೈದ್ಯರು ಹಲವಾರು ಮಂದಿಯ ಜೀವ ರಕ್ಷಣೆಯೊಂದಿಗೆ ಸಾವಿರಾರು ಮಂದಿ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ (ಅರೆ ವೈದ್ಯಕೀಯ, ವೈಧ್ಯಕೀಯ ಪ್ರತಿ ನಿಧಿಗಳ) ಜೀವನವನ್ನು ರೂಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಒಟ್ಟಾಗಿ ಈ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಹಾಗೂ ಸಮಾಜದ ನಿಜವಾದ ರಕ್ಷಣೆ ಮಾಡುವ ನಮ್ಮ ರಕ್ಷಕರಿಗೆ ವೈದ್ಯ ದಿನಾಚರಣೆಯ ಶುಭ ಹಾರೈಕೆಗಳು.

ರಾಘವೇಂದ್ರ ಪ್ರಭು ಕರ್ವಾಲು
ವೈದ್ಯಕೀಯ ಪ್ರತಿನಿಧಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!