ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಡತಿಯು ಪಾತ್ರೆಯ ಬುಟ್ಟಿಯನ್ನು ಹೊರಗೆ ಇಡಲು ಗಂಡನನ್ನು ಹೇಳುತ್ತಾಳೆ. ತನ್ನ ಕೆಲಸದಲ್ಲಿ ಮಗ್ನರಾಗಿದ್ದ ಗಂಡ ಸ್ವಲ್ಪ ಹೊತ್ತಿನ ನಂತರ ಮಾಡುತ್ತೇನೆ ಎಂದು ಹೇಳುತ್ತಾನೆ. ಸಿಟ್ಟಿಗೆದ್ದ ಹೆಂಡತಿ ಎಲ್ಲಾ ಕೆಲಸವನ್ನು ತಾನೇ ಮಾಡಬೇಕೆಂದು ಮನೆಯಲ್ಲಿ ರಂಪಾಟ ಶುರು ಮಾಡುತ್ತಾಳೆ. ಇದನ್ನು ನೋಡಿ ಗಂಡ ತಾನು ತನ್ನ ಕೆಲಸದಲ್ಲಿ ಬಿಜಿ ಇದ್ದೆ, ಸ್ವಲ್ಪ ಸಮಯದ ನಂತರ ಸಹಾಯ ಮಾಡುತ್ತೇನೆಂದು ಆಲೋಚನೆಯಲ್ಲಿದ್ದೆ 10 ನಿಮಿಷದ ನಂತರ ಮಾಡಿದರೆ ಏನು ತೊಂದರೆ? ಎಂದು ಇಬ್ಬರೂ ಜಗಳವಾಡಲು ಶುರು ಮಾಡುತ್ತಾರೆ.
ಇಲ್ಲಿ ಆಗಿರುವುದೇನು ಎಂದು ನೋಡೋಣ. ಹೆಂಡತಿಗೆ ಆ ಕೆಲಸ ಅರ್ಜೆಂಟ್ ಇತ್ತು. ಆ ಕೆಲಸವಾದರೆ ಮಾತ್ರ ಮುಂದಿನ ಕೆಲಸ ಮಾಡಲು ಆಗುತ್ತಿತ್ತು. ಸಮಯದ ಅಭಾವವಿರುವುದರಿಂದ ಗಂಡನಿಗೆ ಸಹಾಯ ಮಾಡಲು ಕರೆಯುತ್ತಾಳೆ. ಆದರೆ ಇಲ್ಲಿ ಹೆಂಡತಿಗೆ ಆ ಕೆಲಸ ಅರ್ಜೆಂಟಿದೆ ಎಂದು ಗಂಡನಿಗೆ ತಿಳಿದಿರಲಿಲ್ಲ. ಹೆಂಡತಿಯು ಹೇಳಿರಲಿಲ್ಲ. ಇಲ್ಲಿ ಹೆಂಡತಿಯು ಗಂಡನಿಗೆ ಹೇಳುವಾಗ ಆ ಕೆಲಸ ಅರ್ಜೆಂಟಿದೆ ಈಗಲೇ ಮಾಡಬೇಕೆಂದು ಹೇಳಿದರೆ ಆಗುತ್ತಿತ್ತೆನೋ. ಅಥವಾ ಗಂಡ ಬೇರೆ ಕೆಲಸದಲ್ಲಿ ಬಿಜಿ ಇರುವುದನ್ನು ಮನಗೊಂಡು ತಾನೆ ಆ ಕೆಲಸ ಮಾಡಲು ಮುಂದುವರೆಬೇಕಿತ್ತೇನೋ. ಇಲ್ಲಿ ಗಂಡನಿಗೆ ಹೆಂಡತಿ ಕರೆದಾಗ ಈಗಲೇ ಮಾಡಬೇಕಾ ಅಥವಾ ಮತ್ತೆ ಮಾಡಿದರಾಗುತ್ತಾ ಎಂದು ಕೇಳಿದರೆ ಆಗುತ್ತಿತ್ತೆನೋ. ಹೆಂಡತಿ ಇಷ್ಟು ಸಿಟ್ಟು ಮಾಡುತ್ತಾಳೆ ಅವಳಿಗೆ ಇದು ಅರ್ಜೆಂಟ್ ಇದೆ ಎಂದು ಅವನಿಗೆ ತಿಳಿದಿರಲಿಲ್ಲ.
ಹೆಂಡತಿ ಇಷ್ಟು ಸಿಟ್ಟು ಮಾಡಲು ಕಾರಣ ಅವಳ ಕೆಲಸದ ಭಾರವೆಂದು ತಿಳಿಯಬೇಕು. ವರ್ಕ್ ಪ್ರೆಶರ್ ಹೇಗಿರುತ್ತದೆಂದರೆ ನಾವು ಆ ಕ್ಷಣದಲ್ಲಿ ಸಿಟ್ಟಿಗೆದ್ದು ಮುಂದೆ ಇರುವ ವ್ಯಕ್ತಿಯನ್ನು ನೋವುಂಟು ಮಾಡುತ್ತೇವೆ. ಅದು ಬೇಕಂತಲೇ ಮಾಡುವುದಲ್ಲ. ಸ್ಟ್ರೆಸ್ ಆ ರೀತಿ ಕೋಪಕ್ಕೆ ಕಾರಣವಾಗುತ್ತದೆ.
ಏನು ಮಾಡಬೇಕು?: ಏನಾದರು ಹೇಳುವಾಗ ಯಾಕೆ ಯಾವಾಗ ಅರ್ಜೆಂಟ್ ಇದೆಯಾ ಈಗಲೇ ಮಾಡಬೇಕಾ ಪ್ರತಿಯೊಂದು ಹೇಳಿದರೆ ಒಳ್ಳೆಯದು. ಆಗ ಇನ್ನೊಬ್ಬರಿಗೆ ನಿಮಗೆ ಸಹಾಯ ಮಾಡಲು ಸುಲಭವಾಗುತ್ತದೆ. ಕೆಲವೊಂದು ವ್ಯಕ್ತಿಗಳನ್ನು ನೀವು ಹೇಳಿದ ನಂತರವೂ ಸಹಾಯ ಮಾಡದಿದ್ದರೆ ಅವರ ಮೇಲೆ ಬೊಬ್ಬೆ ಹೊಡೆಯುವುದು ಬಿಟ್ಟು ಆ ಕೆಲಸವನ್ನು ನೀವೇ ಮಾಡಿ ಅಥವಾ ಇತರರ ಸಹಾಯ ಕೇಳಿ. ಕೋಪಗೊಂಡು ಹಿಂದಿನ ವಿಷಯವನ್ನು ಕೆದಕಿ “ನೀವು ಹೀಗೇನೇ ಇರುವುದು” ಎಂದು ಆ ವ್ಯಕ್ತಿಯನ್ನು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತೆ ಮಾತನಾಡುವುದರಿಂದ ಸಂಬಂಧಗಳು ಕೆಡುತ್ತವೆ ಅಷ್ಟೇ. ಜೀವನದಲ್ಲಿ ಯಾರೂ ಪರ್ಫೆಕ್ಟ್ ಇಲ್ಲ. ಎಲ್ಲರಿಗೂ ಅವರದ್ದೇ ಆದ ಕೆಲಸಗಳು ಇರುತ್ತವೆ. ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ಚಿಕ್ಕ ಪುಟ್ಟ ವಿಷಯವನ್ನು ಹಿಡಿದು ಸಂಬಂಧವನ್ನು ಹಾಳು ಮಾಡಬೇಡಿ.
-ಡಾ. ಹರ್ಷಾ ಕಾಮತ್




By
ForthFocus™