Monday, October 19, 2026
Monday, October 19, 2026

ಜ.3- ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮ

ಜ.3- ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮ

Date:

ಜನವರಿ 3 ರಂದು ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮ. ಈ ಸಂದರ್ಭ ಅತೀ ವಿರಳ. ಖಗೋಳದಲ್ಲಿ ಇದೊಂದು ವಿಶೇಷ ದಿನ. ಈ ದಿನ ಸೂರ್ಯನೂ ಸುಮಾರು 30 ಲಕ್ಷ ಕಿಮೀ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಾಣುವುದು., ಚಂದ್ರನೂ ಸುಮಾರು 27ಸಾವಿರ ಕಿಮೀ ಸಮೀಪ ಬಂದು ದೊಡ್ದಾಗಿ ಕಾಣುವುದು . ಈ ಘಟನೆ ನಡೆಯುವುದು ಒಂದೇ ದಿನ, ಅದೇ ವಿಶೇಷ.

ಜನವರಿ 3ರಂದು ಹುಣ್ಣಿಮೆ, ಹಾಗೂ ಸೂಪರ್ ಮೂನ್. ಇದು ಈ ವರ್ಷದ ಪ್ರಥಮ ಸೂಪರ್ ಮೂನ್. ಸೂಪರ್ಮೂನ್ ನಿಂದಾಗಿ ಹುಣ್ಣಿಮೆಯ ಚಂದ್ರ ಭೂಮಿಗೆ ಸುಮಾರು 27000 ಕಿಮೀ ಸಮೀಪ ಬಂದು 14 ಅಂಶ ದೊಡ್ಡದಾಗಿ, ಸುಮಾರು 30 ಅಂಶ ಹೆಚ್ಚಿನ ಹುಣ್ಣಿಮೆಯ ಬೆಳ್ಳಂ ಬೆಳಕಿಂದ ಬೆಳಗುತ್ತದೆ.
ಸೂರ್ಯನಲ್ಲೂ ಇಂದು ವರ್ಷದ ವಿಶೇಷ ದಿನ. ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣದಿಂದ ಜನವರಿ 3ರಂದು ಸಮೀಪ ದೂರ (ಪೆರಿಜಿಗೆ) ಭೂಮಿ ಬಂದು ಸರಾಸರಿ ದೂರ 15 ಕೋಟಿ ಕಿಮೀ ಕ್ಕಿಂತ 14 ಕೋಟಿ 70 ಲಕ್ಷ ಕಿಮೀ ಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಗೆ ಸಮೀಪ ಬರಲಿದೆ. ಹಾಗಾಗಿ ಸೂರ್ಯ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು.

ಈ ವರ್ಷ ಭೂಮಿ ಜನವರಿ 3 ಪೆರಿಜಿಗೆ ಬರುವುದು, ಜುಲೈ 6ರಂದು ಅಪೊಜಿಗೆ ಬರುವುದು. ಸೂರ್ಯ ಸುತ್ತ ತಿರುಗುವ ಭೂಮಿ ಹಾಗೂ ಭೂಮಿಯ ಸುತ್ತ ತಿರುಗುವ ಚಂದ್ರ ಪಥ ವರ್ತುಲವಲ್ಲದೇ ದೀರ್ಘ ವೃತ್ತಾಕಾರವಾಗಿರುವುದೀ ಈ ಎಲ್ಲ ಸುಂದರ ಖಗೋಳ ವಿದ್ಯಾಮಾನಗಳಿಗೆ ಕಾರಣ. ಅದರಲ್ಲೂ ಈ ವರ್ಷ ಜನವರಿ 3 ರಂದು ಹುಣ್ಣಿಮೆ ಬಂದು ಸೂಪರ್ಮೂನ್ ಆಗಿರುವುದು ವಿಶೇಷ.

ಡಾ. ಎ.ಪಿ ಭಟ್ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!