ನವದೆಹಲಿ, ಜೂ.2: ನೈಋತ್ಯ ಮುಂಗಾರು ಜೂನ್ 4 ರಂದು ಕೇರಳಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.
ಮೇ 29 ರಂದು ಐಎಂಡಿ ತನ್ನ ಮುನ್ಸೂಚನೆಯ ದಿನಾಂಕವಾದ ಮೇ 26 ರ ನಾಲ್ಕು ದಿನಗಳ ಒಳಗೆ ಮಳೆ ಕೇರಳವನ್ನು ತಲುಪುವ ಸಾಧ್ಯತೆಯಿಲ್ಲ ಎಂದು ಹೇಳಿದ ನಂತರ ಈ ಮಾಹಿತಿ ಬಂದಿದೆ. ಆರಂಭದಲ್ಲಿ ಜೂನ್ 1 ರಂದು ರಾಜ್ಯಕ್ಕೆ ಮಾನ್ಸೂನ್ ಆಗಮನಕ್ಕೆ ‘ಸಾಮಾನ್ಯ’ ದಿನಾಂಕವನ್ನು ನಿಗದಿಪಡಿಸಲಾಗಿತ್ತು.
ಕಳೆದ ವರ್ಷ, ಮೇ 24 ರಂದು ಕೇರಳಕ್ಕೆ ಮುಂಗಾರು ಆಗಮಿಸಿತು. ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಬಗ್ಗೆ ಐಎಂಡಿ ಮಾಹಿತಿ ನೀಡಿದೆ.




By
ForthFocus™