Wednesday, September 30, 2026
Wednesday, September 30, 2026

ದೇಶಾದ್ಯಂತ 86,498 ಪಾಸಿಟಿವ್ | 1.82 ಲಕ್ಷ ಗುಣಮುಖ | 2123 ಸಾವು

ದೇಶಾದ್ಯಂತ 86,498 ಪಾಸಿಟಿವ್ | 1.82 ಲಕ್ಷ ಗುಣಮುಖ | 2123 ಸಾವು

Date:

24 ಗಂಟೆಗಳಲ್ಲಿ ದೇಶಾದ್ಯಂತ 86,498 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,89,96,473 ಕ್ಕೆ ಏರಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ತಿಳಿಸಿದೆ. 

ಇದೇ ವೇಳೆ 1,82,282 ಮಂದಿ ಕಳೆದ 24 ತಾಸಿನಲ್ಲಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 13,03,702 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 2,73,41,462 ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2123 ಮಂದಿ ಸಾವನ್ನಪ್ಪಿದ್ದಾರೆ, ಇಲ್ಲಿಯವರೆಗೆ ಒಟ್ಟು 3,51,309 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 23,61,98,726 ಡೋಸ್ ಲಸಿಕೆ ನೀಡಲಾಗಿದೆ.

ಜೂನ್ 7 ರಂದು 18,73,485 ಮಾದರಿಗಳನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ 36,82,07,596 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ ನೀಡಿದೆ. 

63 ದಿನಗಳ ನಂತರ ದೇಶದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಪಾಸಿಟಿವ್ ಕೇಸ್ ಗಳು ವರದಿಯಾಗಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಕುಂದಾಪುರ, ಸೆ.30: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ...

ಮಂಗಳೂರಿನ ಎಂಆರ್‌ಪಿಎಲ್ ಸಂಕೀರ್ಣದಲ್ಲಿ ಸ್ಫೋಟ

ಮಂಗಳೂರು, ಸೆ.30: ಬುಧವಾರ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)...

ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನ ಭದ್ರ ಬುನಾದಿ: ಡಾ.ಶ್ರೀಪಾದ್ ಭಟ್

ಉಡುಪಿ, ಸೆ.29: ಅಂಬೇಡ್ಕರ್ ರವರು ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ನೀಡಿದವರು. ಶಿಕ್ಷಣ...

ಮಣಿಪಾಲ ಜ್ಞಾನಸುಧಾ: ಎನ್.ಎಸ್. ಎಸ್ ದಿನಾಚರಣೆ

ಮಣಿಪಾಲ, ಸೆ.29: ಮಣಿಪಾಲ ಜ್ಞಾನಸುಧಾ ಪ. ಪೂ. ಕಾಲೇಜಿನಲ್ಲಿ ಎನ್.ಎಸ್. ಎಸ್...
error: Content is protected !!