ಮಂಗಳೂರು, ಮೇ 15: ಡಾ.ಪಿ.ದಯಾನಂದ ಪೈ ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇದರ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಂಘದ ದಶಮಾನೋತ್ಸವದ ಅಂಗವಾಗಿ ಬುಧವಾರ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಉದ್ಯೋಗ ಕೋಶದ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ಸ್ಪರ್ಧೆ ಜ್ಞಾನರಥ 2025 ನ್ನು ನಡೆಸಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂತೋಷ್ ಪೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಜಯಕರ ಭಂಡಾರಿ ಎಂ ಅವರು ಅಧ್ಯಕ್ಷತೆ ವಹಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯೋಜಕ ನಾಗರಾಜ್ ಎಂ., ಕಾಲೇಜು ಐಕ್ಯೂಏಸಿ ಸಂಯೋಜಕ ದೇವಿಪ್ರಸಾದ್, ಸಹಸಂಯೋಜಕಿ ಡಾ.ಜ್ಯೋತಿಪ್ರಿಯ, ಜ್ಞಾನ ರಥ 2025 ರ ಸಲಹೆಗಾರ ಪ್ರಾಧ್ಯಾಪಕರು ಲೂಯಿಸ್ ಮನೋಜ್ ಅಂಬ್ರೋಸ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಧೀರಜ್ ಕುಮಾರ್, ಕಾರ್ಯದರ್ಶಿ ತುಷಾರ್ ಕೆ., ಜ್ಞಾನ ರಥ 2025 ರ ಸಂಯೋಜಕರು ಉಪಾಧ್ಯಕ್ಷರಾದ ಮೋನಿಷಾ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಮೋಹಿತ್ ಕುಮಾರ್, ಖಜಾಂಜಿ ಗೋಪಿನಾಥ ಬಾಳಿಗಾ ಉಪಸ್ಥಿತರಿದ್ದರು. ಧನ್ಯಶ್ರೀ ನಿರೂಪಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧಾಕೂಟದಲ್ಲಿ ಭಾಗವಹಿಸಿದರು. ಸಾಮಾನ್ಯ ಕ್ವಿಜ್, ಡಿಜಿಟಲ್ ಪೋಸ್ಟರ್ ತಯಾರಿ, ಬೆಸ್ಟ್ ಮ್ಯಾನೇಜರ್, ಕ್ಯಮಿಲಿಯನ್ ಎಂಬ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಡಾ. ಪಿ ದಯಾನಂದ ಪೈ ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಸಮಗ್ರ ಪ್ರಶಸ್ತಿಯನ್ನು ಪಡೆದರೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ರನ್ನರ್ಸ್ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ ವಸಂತಿ, ಡಾ. ದುಗ್ಗಪ್ಪ ಕಜೆಕಾರ್, ಐಕ್ಯೂಏಸಿ ಸಂಯೋಜಕ ದೇವಿಪ್ರಸಾದ್, ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯೋಜಕ ನಾಗರಾಜ್ ಎಂ., ಪ್ರಾಧ್ಯಾಪಕಿ ಶಾಂತಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.




By
ForthFocus™