Saturday, January 17, 2026
Saturday, January 17, 2026

ರಥಬೀದಿ ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ಶಿಬಿರಕ್ಕೆ ಚಾಲನೆ

ರಥಬೀದಿ ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ಶಿಬಿರಕ್ಕೆ ಚಾಲನೆ

Date:

ಮಂಗಳೂರು, ಏ.28: ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಶಕ್ತಿನಗರದ ನಾಲ್ಯಪದವಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಕಿಶೋರ್ ಜೆ. ಧ್ವಜಾರೋಹಣಗೈದರು. ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಅಶೋಕ್ ನಾಯಕ್ ಶ್ರಮದಾನಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ
ಸ್ನಾತಕ ವಿಭಾಗದ ಸಂಯೋಜಕಿ ಪ್ರೊ. ವಸಂತಿ ಪಿ. ಅವರು ಸ್ವಯಂಸೇವಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ೨೧ನೇ ಶತಮಾನಗಳ ಪೂರಕ ಕೌಶಲ್ಯಗಳು ಎನ್.ಎಸ್.ಎಸ್. ಶಿಬಿರಕ್ಕೆ ಪೂರಾಕವಾಗುವ ವಿಚಾರಗಳ ಬಗ್ಗೆ ಮಾತನಾಡಿದರು. ಮಾಜಿ ಕಾರ್ಪೊರೇಟರ್ ಶಕಿಲಾ ಕಾವ, ವಿದ್ಯಾದೀವಿಗೆ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ದೇವಾನಂದ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಟೋನಿ ಪಿಂಟೋ, ಶಾಲಾ ಮುಖ್ಯ ಶಿಕ್ಷಕಿ ದಾಕ್ಷಾಯನಿ ಎಸ್. ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಲೋಕೇಶ್ ನಾಥ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಮೋಹನದಾಸ್ ವಂದಿಸಿದರು. ಶಾಂತಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!