Thursday, March 19, 2026
Thursday, March 19, 2026

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

Date:

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ ಏಳು ಮಠಗಳಿಗೆ ಒಲಿಪೆ ನೀಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಒಲಿಪೆ‌ ಅಂದರೆ ಪರ್ಯಾಯ ಸಂದರ್ಭದಲ್ಲಿ ಆಗಮಿಸುವ ಭಕ್ತರ ಆತಿಥ್ಯಕ್ಕೆ ಪರ್ಯಾಯ ಮಠದಿಂದ ನೀಡುವ ವಸ್ತು ರೂಪದ‌ ಕಾಣಿಕೆ, ನಾಡಿನ‌ ಬೇರೆ ಬೇರೆ ಭಾಗದಿಂದ ಬರುವ ಭಕ್ತರು ಬೇರೆ ಬೇರೆ ಮಠಗಳಲ್ಲಿ ತಂಗುತ್ತಾರೆ. ಆಗಮಿಸಿದ ಭಕ್ತರಿಗೆ ಊಟೋಪಚಾರ ಔಷಧೋಪಚಾರ ಹೀಗೆ ಅತ್ಯಗತ್ಯ ದಿನಬಳಕೆಗೆ ಬೇಕಾದ ಎಲ್ಲಾ‌ ವಸ್ತುಗಳನ್ನು ಒಲಿಪೆಯಲ್ಲಿ ನೀಡಲಾಗುತ್ತದೆ.

ಸಂಪ್ರದಾಯದಂತೆ ಒಂದು ಬುಟ್ಟಿಯಲ್ಲಿ ಮಠದ ದೇವರ ಪೂಜೆಗೆ ಜೋಡು ತೆಂಗಿನಕಾಯಿ, ಸಿಂಗಾರ ಗಂಧದ ಕೊರಡು ಮತ್ತು ಹೂಮಾಲೆ ಇರುತ್ತದೆ. ಮತ್ತೊಂದು ಬುಟ್ಟಿಯಲ್ಲಿ ಪ್ರತಿ ಮಠದ ಪಾರುಪತ್ಯಗಾರರಿಗೆ ನೀಡುವ ವಸ್ತುಗಳು ಇರುತ್ತದೆ ಉಳಿದಂತೆ ಬೇರೆ ಬೇರೆ ಬುಟ್ಟಿಗಳಲ್ಲಿ ಅಕ್ಕಿ, ಬೇಳೆ, ತರಕಾರಿ, ಬಾಳೆ‌ಎಲೆ, ಸೀಯಾಳ, ಹಗ್ಗ, ಔಷದೀಯ ವಸ್ತುಗಳು, ಹೀಗೆ ದಿನ ಬಳಕೆಯ ಅಗತ್ಯದ ವಸ್ತುಗಳನ್ನು ನೀಡಲಾಗುತ್ತದೆ. ಒಂದೆಡೆ ಸಂಪ್ರದಾಯ ಪಾಲನೆಯಾದರೆ ಇನ್ನೊಂದೆಡೆ ಇಂದಿಗೂ ನಾರಿನ ಬುಟ್ಟಿಗಳನ್ನು ಬಳಸುವ ಮೂಲಕ ಗುಡಿಕೈಗಾರಿಕೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗುತ್ತದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಶ್ಚಿಮ ಏಷ್ಯಾ ಪ್ರದೇಶಗಳಿಗೆ ಇಂದಿನಿಂದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ಆರಂಭ

ನವದೆಹಲಿ, ಮಾ.19: ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ...

ನಿಟ್ಟೆ: ಐ.ಆರ್.ಎಸ್.ಎಂ ರಾಷ್ಟ್ರೀಯ ಸಿಂಪೋಸಿಯಂ

ನಿಟ್ಟೆ, ಮಾ.19: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ...

ಆರೋಗ್ಯ ಇಲಾಖೆಯ ವಿವಿಧ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಮಾ.19: ಆರೋಗ್ಯ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕಭೀ ಕಾರ್ಯಕ್ರಮದಡಿಯಲ್ಲಿ...

ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕರಿಯರ್ ಮೇಳ

ಉಡುಪಿ ಮಾ.19: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ವೃತ್ತಿಪರ...
error: Content is protected !!