Sunday, August 9, 2026
Sunday, August 9, 2026

ನಿಟ್ಟೆ: ಐ.ಆರ್.ಎಸ್.ಎಂ ರಾಷ್ಟ್ರೀಯ ಸಿಂಪೋಸಿಯಂ

ನಿಟ್ಟೆ: ಐ.ಆರ್.ಎಸ್.ಎಂ ರಾಷ್ಟ್ರೀಯ ಸಿಂಪೋಸಿಯಂ

Date:

ನಿಟ್ಟೆ, ಮಾ.19: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ (IGS), ಸುರತ್ಕಲ್ ಚಾಪ್ಟರ್ ಸಹಯೋಗದಲ್ಲಿ “Insights for Resilient Soil Mechanics: IRSM–2026” ಎಂಬ ರಾಷ್ಟ್ರೀಯ ಸಿಂಪೋಸಿಯಂ ನ್ನು ಗುರುವಾರ ನಿಟ್ಟೆಯ ಸಂಭ್ರಮ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಆಯೋಜಿಸಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎನ್.ಐ.ಟಿ.ಕೆ ಸುರತ್ಕಲ್ ನ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್. ಕೆ. ಯಾಜಿ ಉದ್ಘಾಟಿಸಿದರು. ಅವರು ಮಾತನಾಡಿ, ಭೂವಿಜ್ಞಾನ ಮತ್ತು ಜಿಯೋಟೆಕ್ನಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ತಾಂತ್ರಿಕ ಅನ್ವಯಿಕತೆಗಳ ಮಹತ್ವವನ್ನು ವಿವರಿಸಿದರು. ಸಧೃಢ ಮೂಲಸೌಕರ್ಯ ನಿರ್ಮಾಣಕ್ಕೆ ಮಣ್ಣು ಮೆಕ್ಯಾನಿಕ್ಸ್ ಅಧ್ಯಯನ ಮತ್ತು ಆವಿಷ್ಕಾರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ಐಜಿಎಸ್ ಸುರತ್ಕಲ್ ಚಾಪ್ಟರ್ ಅಧ್ಯಕ್ಷರು ಹಾಗೂ ಎನ್‌ಐಟಿಕೆ ಸುರತ್ಕಲ್‌ನ ಪ್ರಾಧ್ಯಾಪಕರಾದ ಪ್ರೊ. ಸುನಿಲ್ ಬಿ.ಎಂ., ಐಜಿಎಸ್ ಸುರತ್ಕಲ್ ಚಾಪ್ಟರ್ ನ ಕಾರ್ಯದರ್ಶಿ ಡಾ. ಬಬ್ಲು ಚೌದರಿ ಮತ್ತು ನಿಟ್ಟೆ ತಾಂತ್ರಿಕ ಕಾಲೇಜಿನ ಡೀನ್ ಅಕಾಡೆಮಿಕ್ಸ್ ಪ್ರೊ. ಐ.ಆರ್. ಮಿತ್ತಂತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರೊ. ಐ.ಆರ್. ಮಿತ್ತಂತಾಯ ಅವರ ಸಿವಿಲ್ ವಿಭಾಗದಲ್ಲಿನ ೪೦ ವರ್ಷಗಳ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ಸಿಂಪೋಸಿಯಂನಲ್ಲಿ ಜಿಯೋಟೆಕ್ನಿಕಲ್ ಇಂಜಿನಿಯರಿಂಗ್ ಕ್ಷೇತ್ರದ ಇತ್ತೀಚಿನ ಸಂಶೋಧನೆಗಳು, ತಾಂತ್ರಿಕ ಅಭಿವೃದ್ಧಿಗಳು ಹಾಗೂ ಕ್ಷೇತ್ರ ಅನುಭವಗಳ ಕುರಿತು ವಿವಿಧ ತಜ್ಞರು ಉಪನ್ಯಾಸಗಳನ್ನು ನೀಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.

ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಕುಮಾರ್ ಭಟ್ ಸ್ವಾಗತಿಸಿ ಅತಿಥಗಳನ್ನು ಪರಿಚಯಿಸಿದರು. ಡಾ. ಶ್ರೀನಾಥ್ ಶೆಟ್ಟಿ ಕೆ. ಅವರು ಡಾ. ಐ ಆರ್ ಮಿತ್ತಂತಾಯರ ಬಗೆಗೆ ಮಾತನಾಡಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಶ್ರೀರಾಮ್ ಮರಾಠೆ ಸಿಂಪೋಸಿಯಂ ಬಗೆಗೆ ವಿವರಿಸಿದರು. ಸಂಯೋಜಕ ಪ್ರದೀಪ್ ಕಾರಂತ್ ವಂದಿಸಿದರು. ಎಂ.ಸಿ.ಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೇಮಿತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿತ್ತ ಸಚಿವೆಗೆ ರಾಜ್ಯದ ಸಂಸದರ ನಿಯೋಗದಿಂದ ಮನವಿ

ಉಡುಪಿ, ಆ.9: ದೇಶದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರನ್ನು ರಾಜ್ಯದ...

ಅಧಿವಕ್ತ ಪರಿಷತ್: ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ಗುರುವಂದನೆ

ಉಡುಪಿ, ಆ.9: ಗುರುಪೂರ್ಣಿಮೆಯ ಪ್ರಯುಕ್ತ ಅಧಿವಕ್ತ ಪರಿಷತ್ ಉಡುಪಿ ಜಿಲ್ಲಾ ಘಟಕದ...

ಯೋಗ ಸ್ಪರ್ಧೆಯಲ್ಲಿ ಪ್ರೇರಣಾ ಸಾನ್ವಿ ಸಾಧನೆ

ಉಡುಪಿ, ಆ.8: ಬ್ರಹ್ಮಾವರದಲ್ಲಿ ನಡೆದ ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್...

ಶ್ರೀ ಕೃಷ್ಣ ಮಠಕ್ಕೆ ವಿಶ್ವ ಹಿಂದೂ ಪರಿಷದ್ ಅಂತರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಭೇಟಿ

ಉಡುಪಿ, ಆ.8: ಶ್ರೀ ಕೃಷ್ಣ ಮಠಕ್ಕೆ ವಿಶ್ವ ಹಿಂದೂ ಪರಿಷದ್ ಅಂತರಾಷ್ಟ್ರೀಯ...
error: Content is protected !!