Saturday, July 25, 2026
Saturday, July 25, 2026

ನಾಳೆ ಹುಣ್ಣಿಮೆ; ಈ ವರ್ಷದ ದೊಡ್ಡ ಸೂಪರ್ ಮೂನ್

ನಾಳೆ ಹುಣ್ಣಿಮೆ; ಈ ವರ್ಷದ ದೊಡ್ಡ ಸೂಪರ್ ಮೂನ್

Date:

ವೆಂಬರ್ 5 ಕಾರ್ತೀಕ ಹುಣ್ಣಿಮೆಯಂದು ಸೂಪರ್ಮೂನ್. ಶರತ್ಕಾಲದ ರಾತ್ರಿ ತಂಪು ತಂಪಾಗಿ ತೇವಭರಿತ ಹವಾಮಾನದಲ್ಲಿ ಶುಭ್ರ ಆಕಾಶ ನೋಡಲು ಆಹ್ಲಾದ. ಅದರಲ್ಲೂ ಹುಣ್ಣಿಮೆ ಚಂದ್ರ ಬೆಳದಿಂಗಳ ಹಾಲು ಹೊಯ್ದಂತೆ. ಈ ಬಾರಿ ವಿಶೇಷವಾಗಿ ಭವ್ಯ ಸೂಪರ್ಮೂನ್.

ಈ ವರ್ಷದ ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ್ ಮೂರು ಸೂಪರ್ಮೂನ್ ಗಳಲ್ಲಿ ಈಗ ನಡೆಯುವ ಸೂಪರ್ ಮೂನ್ ಭೂಮಿಗೆ ಸಮೀಪವಿದ್ದು ದೊಡ್ಡದು. ಭೂಮಿಗೆ ದೀರ್ಘವೃತ್ತದಲ್ಲಿ 28 ದಿನಗಳಿಗೊಮ್ಮೆ ತಿರುಗುವ ಚಂದ್ರ ಭೂಮಿಗೊಮ್ಮೆ ಸಮೀಪವಿರುವುದುಂಟು. (3,56,400ಕಿಮೀ). ಆಗ ಹುಣ್ಣಿಮೆಯಾದಲ್ಲಿ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವನು. ಈ ವರ್ಷದ ಮೂರು ಸೂಪರ್ ಮೂನ್ಗಳು ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ್ ನಲ್ಲಿವೆಯಾದರೂ ಭೂಮಿಗೆ ಅತೀ ಸಮೀಪ ಈ ನವಂಬರ್ 5ರ ಹುಣ್ಣಿಮೆಯದ್ದು. ಅದು 3, 57,000 ಕಿಮೀಗೆ ಬಂದು ಸರಾಸರಿ ದೂರಕ್ಕಿಂತ 27,000 ಕಿಮೀ ಭೂಮಿಗೆ ಹತ್ತಿರ ಬರುವುದಿದೆ. 14 ಅಂಶ ದೊಡ್ಡದಾಗಿ ಕಂಡು 27ಅಂಶ ಹೆಚ್ಚಿನ ಬೆಳದಿಂಗಳಿಂದ ಚಂದ್ರ ಹೊಳೆಯಲಿದೆ. ಅಂದು ಅಕಾಲಿಕ ಮಳೆಯಿಲ್ಲದಿದ್ದಲ್ಲಿ ನಮ್ಮ ಹುಣ್ಣಿಮೆಯ ಸೂಪರ್ ಮೂನ್ ಸೂಪರ್ ಆಗಿ ಕಾಣಿಸಲಿದೆ.

ಡಾ. ಎ.ಪಿ ಭಟ್ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!