Thursday, April 23, 2026
Thursday, April 23, 2026

ಬಿ.ಬಿ. ಹೆಗ್ಡೆ ಕಾಲೇಜು: ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಕಡಲ ತೀರದ ಸ್ವಚ್ಛತೆ

ಬಿ.ಬಿ. ಹೆಗ್ಡೆ ಕಾಲೇಜು: ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಕಡಲ ತೀರದ ಸ್ವಚ್ಛತೆ

Date:

ಕುಂದಾಪುರ, ಏ.22: ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ನೇಚರ್ ಕ್ಲಬ್ ಜಂಟಿ ಆಶ್ರಯದಲ್ಲಿ ರೀಫ್ ವಾಚ್ ಮರೈನ್ ಸಂಸ್ಥೆ ಸಹಯೋಗದೊಂದಿಗೆ, ಎಚ್.ಸಿಎಲ್ ಫೌಂಡೇಶನ್ ಹಾಗೂ ಸ್ಥಳೀಯ ಭಜನಾ ಮಂಡಳಿ ಮತ್ತು ಮೀನುಗಾರರ ಸಹಕಾರದೊಂದಿಗೆ ಏಪ್ರಿಲ್ 22ರಂದು ವಿಶ್ವ ಭೂಮಿಯ ದಿನ ಆಚರಣೆಯ ಅಂಗವಾಗಿ ಕಂಚುಗೋಡಿನ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ರೀಫ್ ವಾಚ್ ಸಂಸ್ಥೆಯವರು ತೇಲುವ ತುಂಡು ಬಲೆಗಳಿಂದ ಸಮುದ್ರ ಮತ್ತು ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳು ಸಿಕ್ಕಿ ಹಾಕಿ ಸಾಯುವುದನ್ನು ತಡೆಯಲು ಮತ್ತು ಪರಿಸರ ಸಂರಕ್ಷಣೆಗಾಗಿ ಕಡಲ ತೀರದಲ್ಲಿ ಕಸದಂತೆ ಬಿದ್ದಿದ ರಾಶಿ ರಾಶಿ ನಿರೂಪಯುಕ್ತ ಬಲೆಗಳನ್ನು ಖರೀದಿಸಿದರು. ವಿಶ್ವ ಭೂಮಿ ದಿನ ಆಚರಣೆಯ ಪ್ರಸಿದ್ಧ ಘೋಷಣೆಯಾದ ಕಡಿಮೆ ಮಾಡಿ, ಮರುಬಳಕೆ ಮಾಡಿ ಎಂಬಂತೆ ತುಂಡು ವ್ಯರ್ಥ ಬಲೆಯಿಂದ ತಯಾರಿಸಿದ ಅತ್ಯುತ್ತಮ ಬೆಂಚ್ ಟೇಬಲ್ ಮತ್ತು ಬ್ಯಾಗ್‌ಳನ್ನು ಸಮುದಾಯದ ಬಳಕೆಗಾಗಿ ಕಂಚುಗೋಡಿನ ಕಡಲ ತೀರದಲ್ಲಿ ಹಾಕಿಸಿ ಅದನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯಕ್ ಉದ್ಘಾಟಿಸಿದರು. ರೀಫ್ ವಾಚ್ ಮರೈನ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಅರ್ಪಿತ್ ದತ್ತ ಕಡಲಾಮೆ ಸಂರಕ್ಷಣೆ ಹಾಗೂ ಕಡಲ ಸ್ವಚ್ಛತೆ ಕುರಿತು ಮಾತನಾಡಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ IIರ ಕಾರ್ಯಕ್ರಮ ಅಧಿಕಾರಿ ದೀಪ ಪೂಜಾರಿ, ನೇಚರ್ ಕ್ಲಬ್ ಸಂಯೋಜಕ ಸತೀಶ್ ಕಾಂಚನ್, ಶ್ರೀರಾಮ ಭಜನಾ ಮಂದಿರಾ ಕಂಚುಗೋಡು ಅಧ್ಯಕ್ಷ ನಾಗೇಶ್ ಖಾರ್ವಿ, ವಿಶ್ವನಾಥ್ ಖಾರ್ವಿ, ನಾಗರಾಜ ಖಾರ್ವಿ, ರಮೇಶ್ ಖಾರ್ವಿ, ಉರಗ ತಜ್ಞ ನಾಗರಾಜ ಖಾರ್ವಿ ಹಾಗೂ ಕಂಚುಗೋಡು ಭಾಗದ ಮೀನುಗಾರರು, ಎನ್.ಎಸ್.ಎಸ್. ಸ್ವಯಂ ಸೇವಕರು ಉಪಸ್ಥಿತರಿದ್ದರು. ಪ್ರಕಾಶ್ ಖಾರ್ವಿ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಡಾ| ಪ್ರಶಾಂತ್ ಕಾರ್ಯಕ್ರಮ ಸಂಯೋಜಿಸಿ, ವೆಂಕಟೇಶ್ ಶೇರೆಗಾರ್ ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮನುಷ್ಯ ಮಾನವೀಯನಾಗುವುದು ಮೂಕಜ್ಜಿಯ ಸಂದೇಶ: ಪ್ರೊ.ಸ್ವೀವನ್ ಕ್ವಾಡ್ರಸ್

ಉಡುಪಿ, ಏ.22: ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು...

ಹ್ಯಾಕ್ ಫೆಸ್ಟ್ 2026

ಕಾರ್ಕಳ, ಏ.22: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಫೈನೈಟ್...

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಯಶಸ್ವಿನ ತಂತ್ರಗಳು

ಬಸ್ರೂರು, ಏ.22: ಶ್ರೀ ಶಾರದಾ ಕಾಲೇಜು ಬಸ್ರೂರು ಗ್ರಂಥಾಲಯ ಮತ್ತು ಮಾಹಿತಿ...

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವರ್ಷ- ಭಯೋತ್ಪಾದನಾ ಕೃತ್ಯ ಎಸಗಿದವರಿಗೆ ಭಾರತೀಯ ಸೇನೆಯ ಕಠಿಣ ಎಚ್ಚರಿಕೆ

ಶ್ರೀನಗರ, ಏ.22: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಈ ದಿನದಂದು,...
error: Content is protected !!