Tuesday, April 14, 2026
Tuesday, April 14, 2026

ಗೂಡು ಖಾಲಿಯಾದಾಗ

ಗೂಡು ಖಾಲಿಯಾದಾಗ

Date:

ಕ್ಕಳು ದೊಡ್ಡವರಾಗಿ ಉನ್ನತ ವ್ಯಾಸಂಗಕ್ಕಾಗಿ ಅಥವಾ ಕೆಲಸಕ್ಕಾಗಿ ದೂರದ ಸ್ಥಳಕ್ಕೆ ಅಥವಾ ಬೇರೆ ದೇಶಕ್ಕೆ ಹೋದಾಗ ತಾಯಿ ತಂದೆಗೆ ಕಾಡುವ ಸಮಸ್ಯೆ ಒಂಟಿತನ. ಮಕ್ಕಳಿಗೆ ಸಾಕಿ ಸಲಹಿ ದೊಡ್ಡವರಾದ ಮೇಲೆ ತಮ್ಮಿಂದ ದೂರ ಕಳುಹಿಸಬೇಕಲ್ಲ ಎನ್ನುವ ಚಿಂತೆ ಒಂದೆಡೆಯಾದರೆ, ತಮ್ಮ ಮಕ್ಕಳು ತಮ್ಮ ತಮ್ಮ ಕನಸನ್ನು ಪೂರೈಸುತ್ತಿದ್ದಾರೆ ಎನ್ನುವ ಸಂತೋಷ ಇನ್ನೊಂದೆಡೆ. ಕೆಲವರು ಇದರಿಂದ ಬೇಗ ಹೊರಬಂದರೆ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಇದನ್ನು ಎಂಟಿ ನೆಕ್ಸ್ಟ್ ಸಿಂಡ್ರೋಮ್ (empty nest syndrome) ಎಂದು ಕರೆಯುತ್ತಾರೆ.

ಏನಿದು ಎಂಟಿ ನೆಸ್ಟ್ ಸಿಂಡ್ರೋಮ್? ಮಕ್ಕಳು ಮೊದಲ ಬಾರಿಗೆ ಮನೆ ಬಿಟ್ಟು ಬೇರೆ ಸ್ಥಳಗಳಿಗೆ ಹೋದಾಗ ಕಾಡುವ ಭಾವನಾತ್ಮಕ ಏರುಪೇರು ಇದು. ಚಿಕ್ಕಂದಿನಿಂದ ಪಾಲನೆ ಪೋಷಣೆ ಅವರ ಕೆಲಸ ಮಾಡಿ ಸಂತೋಷದಿಂದ ಸಮಯ ಕಳೆಯುತ್ತಿದ್ದ ಪಾಲಕರಿಗೆ ಒಂದೇ ಸಮನೆ ಮಕ್ಕಳು ಮನೆ ಬಿಟ್ಟು ಹೋದಾಗ ಒಂಟಿತನ ಕಾಡುತ್ತದೆ ಖಿನ್ನತೆಗೆ ಕಾರಣವಾಗುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ದೊಡ್ಡದಿರುವುದರಿಂದ ತಾಯಂದಿರಿಗೆ ಇದು ಕಾಡುವುದು ಜಾಸ್ತಿ. ಇದು ಎಲ್ಲರಿಗೂ ಆಗಬೇಕೆಂದೇನಿಲ್ಲ ಕೆಲವರಿಗೆ ಇದರಿಂದ ಹೊರಬರಲು ಕಷ್ಟವಾಗುತ್ತದೆ. ಇಡೀ ದಿನ ಮಕ್ಕಳ ಚಿಂತೆಯಲ್ಲಿಯೇ ದಿನವನ್ನು ಕಳೆಯುತ್ತಾರೆ. ಹೀಗೆ ಮಾಡುವುದರಿಂದ ತಮ್ಮ ಭಾವನೆಗಳನ್ನು ಹಿಡಿತದಲ್ಲಿ ಇಡಲಿಕ್ಕೆ ಆಗದೆ ಜೀವನವೇ ಶೂನ್ಯ ಎಂದು ಎನಿಸುವುದು. ಇದರಿಂದ ದುಃಖ, ನಿದ್ರಾಹೀನತೆಗೆ ಜಾರುತ್ತಾರೆ ಕೋಪಗೊಳ್ಳುತ್ತಾರೆ. ಬೇರೆಯವರಿಗೆ ಬೇರೆ ಬೇರೆ ಸಮಸ್ಯೆ ಕಾಣಬಹುದು.

ಇದರಿಂದ ಹೊರಬರುವುದು ಹೇಗೆ? ಇಲ್ಲಿ ಮುಖ್ಯವಾಗಿ ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದೊಂದೇ ಪರಿಹಾರ. ಇಷ್ಟು ವರ್ಷ ಮಕ್ಕಳಿಗೋಸ್ಕರ ಸಮಯವನ್ನು ಮೀಸಲಿಡುತ್ತಿದ್ದೀರಿ. ಈಗ ನಿಮಗೋಸ್ಕರ ಸಮಯವನ್ನು ಕಳೆಯಿರಿ. ಮಕ್ಕಳು ದೊಡ್ಡವರಾದಂತೆ ಜವಾಬ್ದಾರಿ ಕಡಿಮೆಯಾಗುತ್ತಾ ಬಂದಾಗ ನಿಮ್ಮ ಹವ್ಯಾಸಗಳನ್ನು ಶುರು ಮಾಡಿ. ಮನಸ್ಸನ್ನು ಮೊದಲು ತಯಾರಿಸಿ. ಮಕ್ಕಳು ಇನ್ನು ಮುಂದೆ ಅವರ ಕಾಲ ಮೇಲೆ ನಿಲ್ಲುತ್ತಾರೆ ಎಂದು ಸಂತೋಷಪಡಿ. ಈಗಂತೂ ವಿಡಿಯೋ ಕಾಲ್ ಲಭ್ಯವಿದೆ ದೇಶದ ಯಾವ ಮೂಲೆಯಲ್ಲಿದ್ದರೂ ನೋಡಬಹುದು ಮಾತನಾಡಬಹುದು. ನಿಮ್ಮ ಬಾಳ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಚಿಕ್ಕ ಚಿಕ್ಕ ಟ್ರಿಪ್ ಟೂರ್ ಗೆ ಹೋಗಿ. ಗೆಳೆಯರೊಂದಿಗೆ ಸಮಯ ಕಳೆಯಿರಿ. ದೇವಸ್ಥಾನ, ಆಶ್ರಮಕ್ಕೆ ಭೇಟಿ ನೀಡಿ. ಹೊಸದನ್ನು ಕಲಿಯಿರಿ. ಯೋಗಾಸನ, ಪ್ರಾಣಾಯಾಮ, ಧ್ಯಾನವನ್ನು ಮಾಡಿರಿ. ಪುಸ್ತಕಗಳನ್ನು ಓದಿರಿ, ಜೀವನವನ್ನು ನೋಡುವ ದೃಷ್ಟಿ ಬದಲಾಗುತ್ತದೆ. ತೋಟಗಾರಿಕೆ, ಹೊಲಿಯುವುದು, ಸಂಗೀತ, ಚಿತ್ರಕಲೆ, ನೃತ್ಯ ಹೀಗೆ ಬೇರೆ ಬೇರೆ ಕಲೆಗಳನ್ನು ಕಲಿಯಿರಿ ಅಥವಾ ಅದರ ಬಗ್ಗೆ ತಿಳಿದುಕೊಳ್ಳಿ. ಸಮಸ್ಯೆ ಗಂಭೀರವಾದರೆ ವೈದ್ಯರನ್ನು ಭೇಟಿಯಾಗಿ. ದುಃಖದಲ್ಲಿರುವ ಬದಲು ಅದನ್ನು ಹೇಗೆ ಸಂತೋಷವಾಗಿ ತಿರುಗಿಸಬಹುದೆಂದು ಆಲೋಚಿಸಿ, ಪಾಲಿಸಿ.

ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಧ್ಯಪ್ರವೇಶಿಸಬೇಡಿ: ಹಾರ್ಮುಜ್ ದಿಗ್ಬಂಧನದ ಬಗ್ಗೆ ಅಮೆರಿಕಾಗೆ ಚೀನಾ ಎಚ್ಚರಿಕೆ

ಯು.ಬಿ.ಎನ್.ಡಿ., ಏ.14: ಚೀನಾದ ಹಿರಿಯ ಅಧಿಕಾರಿಯೊಬ್ಬರು ಹಾರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ...

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧ

ಉಡುಪಿ, ಏ.14: ಬಾಳೆಬರೇ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟಿಯಲ್ಲಿ...

ರಥಬೀದಿ ಕಾಲೇಜು: ತುಳು ಐಸಿರೊ-2026

ಮಂಗಳೂರು, ಏ.14: ಇಂದಿನ ಸಾಮಾಜಿಕ ಮಾಧ್ಯಮ, ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ತುಳು...
error: Content is protected !!