Thursday, April 23, 2026
Thursday, April 23, 2026

ಮಣಿಪಾಲ: ವನಮಹೋತ್ಸವ ಆಚರಣೆ

ಮಣಿಪಾಲ: ವನಮಹೋತ್ಸವ ಆಚರಣೆ

Date:

ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ನೇತೃತ್ವದಲ್ಲಿ ಅರಣ್ಯ ಇಲಾಖೆ, ಮತ್ತು ಚೌಡೇಶ್ವರಿ ಫ್ರೆಂಡ್ಸ್ ಶಾಂತಿನಗರ ಸಹಭಾಗಿತ್ವದಲ್ಲಿ ಮಣಿಪಾಲದ ಶಾಂತಿನಗರದ ರಸ್ತೆಯ ಸನಿಹಗಳಲ್ಲಿ ಶನಿವಾರ ಸಾಲು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪವಲಯ ಅರಣ್ಯಾಧಿಕಾರಿ ಸುರೇಶ್ ಜಿ ಮಾತನಾಡುತ್ತಾ, ದೇಶದಲ್ಲಿರುವ ಜನಸಂಖ್ಯೆ ಅನುಗುಣವಾಗಿ 33 ಶೇಕಡರಷ್ಟು ಅರಣ್ಯವು ಉಸಿರಾಡಲು ಬೇಕಾಗಿದೆ. ಇವಾಗ ದೇಶದಲ್ಲಿ 17 ಶೇಖಡದಷ್ಟು ಅರಣ್ಯವು ಉಳಿದುಕೊಂಡಿದೆ. ಹೀಗೆ ಪರಿಸರ ನಾಶ ಮುಂದುವರೆದರೆ, ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿ, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಬಹುದು. ಹಾಗಾಗಿ ಗಿಡಗಳು ನೆಡುವ ಮತ್ತು ಪರಿಸರ ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಬೇಕೆಂದು ಹೇಳಿದರು. ಅತಿಥಿಯಾಗಿ ಉಪಸ್ಥಿತರಿದ್ದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯ ಜನಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್ ಮಾತನಾಡುತ್ತಾ, ಮುಂದಿನ ತಲೆಮಾರಿಗೆ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಒದಗಿಸಬೇಕೆಂದು ಕರೆ ನೀಡಿದರು. ನಾಗರಿಕ ಸಮಿತಿಯ ಸಂಚಾಲಕ ಒಳಕಾಡು ನಿತ್ಯಾನಂದ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಅರಣ್ಯ ರಕ್ಷಕರಾದ ದೇವಾರಜ್ ಪಾಣ, ಕೇಶವ ಪೂಜಾರಿ, ಚೌಡೇಶ್ವರಿ ಫ್ರೆಂಡ್ಸ್ ಅಧ್ಯಕ್ಷ ವಿನಯ ಕುಂದರ್ ಹಾಗೂ ಸರ್ವ ಸದಸ್ಯರು, ರಾಘವೇಂದ್ರ ರಾವ್, ರತ್ನಾಕರ್ ಶೆಟ್ಟಿ, ಸತೀಶ್ ಪೂಜಾರಿ, ಸುಧಾಕರ್ ಶೆಟ್ಟಿ, ಮೋಹನ್ ಶಾಂತಿನಗರ, ನಾಗರಿಕ ಸಮಿತಿಯ ಕೃಷ್ಣಮೂರ್ತಿ ಸಾಮಗ, ವಿನೋದ ಸಾಮಗ, ಯುಕ್ತ ಸಾಮಗ, ಕೆ. ಬಾಲಗಂಗಾಧರ್ ರಾವ್, ಕಮಲಾಕ್ಷ ಪ್ರಭು, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು. ವಿನಯಚಂದ್ರ ಸಾಸ್ತಾನ ಅವರು ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕ್ರಿಯೇಟಿವ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲೋಕಾರ್ಪಣೆ; ಸಾಧಕರಿಗೆ ಸನ್ಮಾನ

ಕಾರ್ಕಳ, ಏ.23: ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ...

ಕಾವೂರು: ರಥಬೀದಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ

ಮಂಗಳೂರು, ಏ.23: ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ–ಪಿ. ಸತೀಶ...

ಮನುಷ್ಯ ಮಾನವೀಯನಾಗುವುದು ಮೂಕಜ್ಜಿಯ ಸಂದೇಶ: ಪ್ರೊ.ಸ್ವೀವನ್ ಕ್ವಾಡ್ರಸ್

ಉಡುಪಿ, ಏ.22: ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು...
error: Content is protected !!