Friday, April 24, 2026
Friday, April 24, 2026

ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 58ನೇ ಜನ್ಮ ನಕ್ಷತ್ರ

ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 58ನೇ ಜನ್ಮ ನಕ್ಷತ್ರ

Date:

ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 58ನೇ ಜನ್ಮದಿನ ಹಾಗೂ ಜನ್ಮ ನಕ್ಷತ್ರ ಕಾರ್ಯಕ್ರಮವನ್ನು ಉಡುಪಿ ಒಳಕಾಡಿನಲ್ಲಿರುವ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರರ ಮನೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು. ಲಾಕ್ ಡೌನ್ ನಿಮಿತ್ತ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು. ವಿಶೇಷ ಪಾರಾಯಣದೊಂದಿಗೆ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಅಭಿಷೇಕ ಸಹಿತ ಪೂಜೆಯನ್ನು ಸಲ್ಲಿಸಲಾಯಿತು. ಕುಟುಂಬಿಕರು ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಅಂತೆಯೇ ಕೇಮಾರು ಶ್ರೀ ಸಾಂದೀಪಿನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿಯವರ ಕೇಮಾರು ಮಠದಲ್ಲಿ ಶ್ರೀಪಾದರ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜಾ ನಂತರ ಶ್ರೀಪಾದರ ಭಾವ ಚಿತ್ರಕ್ಕೆ ಕೇಮಾರು ಶ್ರೀಪಾದರು ಆರತಿ ಬೆಳಗಿದರು.

ತದನಂತರ ನುಡಿನಮನ ಸಲ್ಲಿಸಿದ ಕೇಮಾರು ಶ್ರೀಪಾದರು ನಲವತ್ತೆಂಟು ವರ್ಷಗಳ ಕಾಲ ಶ್ರೀಕೃಷ್ಣ ಶ್ರೀವಿಠಲ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿ ಮೂರು ಪರ್ಯಾಯವನ್ನು ವೈಭವದಲ್ಲಿ ನೆರವೇರಿಸಿದ ಶಿರೂರು ಶ್ರೀಪಾದರು ಧಾರ್ಮಿಕವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಬಹುವಿಧದ ಕೊಡುಗೆಗಳನ್ನು ಸಮಾಜಕ್ಕೆ ಸಲ್ಲಿಸಿದವರು. ದೀನ ದಲಿತರು ಬಡಬಗ್ಗರು ಕಲಾವಿದರ ಬಗ್ಗೆ ಶಿರೂರು ಶ್ರೀಪಾದರಿಗಿದ್ದ ಕಾಳಜಿ ಸ್ಮರಣೀಯ. ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಅವರು ಇರುತ್ತಿದ್ದರೆ ತಕ್ಷಣ ಸ್ಪಂದಿಸಿ ಸಹಸ್ರಾರು ಮಂದಿಗೆ ಸಹಾಯದ ಹಸ್ತಚಾಚಿ ಉಪಕರಿಸುತ್ತಿದ್ದರು ಎಂದು ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಸೇವೆಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಉಡುಪಿಯ ಆಚಾರ್ಯಾಸ್ ಏಸ್ ಹಾಗೂ ಶ್ರೀ ಶಿರೂರು ಮಠ ಭಕ್ತ ಸಮಿತಿಯ ಹಾಗೂ ದ್ವಾರಕಾನಾಥ್ ಲಕ್ಷ್ಮೀ ವೆಂಕಟೇಶ ಗ್ರಾಸರಿ ಇವರ ಆಶ್ರಯದಲ್ಲಿ ಉಡುಪಿ ಗಾಂಧಿ ಆಸ್ಪತೆಯ ಕೋರೋನ ವಾರಿಯರ್ಸ್ ಗೆ ಹಾಗೂ ಅಲ್ಲಿನ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಗಾಂಧಿ ಆಸ್ಪತ್ರೆಯ ಡಾ.ಹರಿಶ್ಚಂದ್ರ, ಡಾ.ವ್ಯಾಸರಾಜ ತಂತ್ರಿ ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಸೇವೆಗಳನ್ನು ನೆನಪಿಸಿಕೊಂಡರು. ಪಿ.ಲಾತವ್ಯ ಆಚಾರ್ಯ, ಸೊಂಡೂರು ಪ್ರಹ್ಲಾದ ಆಚಾರ್ಯ, ಪಿ.ವಾದಿರಾಜ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಅಕ್ಷೋಭ್ಯ ಆಚಾರ್ಯ, ಅರ್ಜುನ್ ಆಚಾರ್ಯ ಹಾಗೂ ಶಿರೂರು ಶ್ರೀಪಾದರ ಪೂರ್ವಾಶ್ರಮದ ಕುಟುಂಬದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಮಿಳುನಾಡಿನಲ್ಲಿ ಶೇ. 85; ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ಶೇ. 92 ಮತದಾನ

ನವದೆಹಲಿ, ಏ.24: ತಮಿಳುನಾಡಿನಲ್ಲಿ ಒಂದೇ ಹಂತದ ವಿಧಾನಸಭಾ ಚುನಾವಣೆ ಮತ್ತು ಪಶ್ಚಿಮ...

ನಂದಳಿಕೆ: ಅಬ್ಬನಡ್ಕ ಕ್ರಿಕೆಟ್ ಟ್ರೋಫಿ 2026 ಉದ್ಘಾಟನೆ

ಬೆಳ್ಮಣ್, ಏ.24: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಭಗೀರಥರ ತಪಸ್ಸು ಪರಿಶ್ರಮ ಬದುಕಿಗೆ ಮಾದರಿ: ಎಂ ಎ ಗಫೂರ್

ಉಡುಪಿ, ಏ.23: ರಾಜನಾಗಿ, ಋಷಿಯಾಗಿ ಭಗೀರಥರು ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು...
error: Content is protected !!