Home ಸುದ್ಧಿಗಳು ಪ್ರಾದೇಶಿಕ ತೆಂಕನಿಡಿಯೂರು ಕಾಲೇಜು: ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ

ತೆಂಕನಿಡಿಯೂರು ಕಾಲೇಜು: ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ

375
0

ಮಲ್ಪೆ: ಭಾರತದ ೭೫ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಾಲೇಜು ಮಟ್ಟದ ಕಾರ್ಯಕ್ರಮ “ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ “ಸಪ್ತಾಹ”ವನ್ನು ದಿನಾಂಕ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಸೇನೆಯ ನಿವೃತ್ತ ಜೂನಿಯರ್ ಕಮೀಷನರ್ ಆಫೀಸರ್ ಗಿಲ್ಬರ್ಟ್ ಬ್ರಗ್ರಾನ್ಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ, ನಮ್ಮ ದೇಶದ ಯುವಕರಿಗೆ ದೇಶ ಸೇವೆ ಮಾಡಲು ಇದೊಂದು ಅಪೂರ್ವ ಅವಕಾಶ. 4 ವರ್ಷಗಳ ಸೈನ್ಯ ಸೇವೆಯ ನಂತರ ಇಷ್ಟಪಟ್ಟರೆ ಅಗ್ನಿವೀರರು ನಿಗದಿ ಪರೀಕ್ಷೆ ಉತ್ತೀರ್ಣರಾಗಿ ಖಾಯಂ ಸೈನಿಕರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬಹುದು.

ಒಂದು ವೇಳೆ ಅಗ್ನಿವೀರರು ಸೇವೆಯನ್ನು ಬಿಟ್ಟರೆ ಬೇರೆ ಯಾವುದೇ ಸರಕಾರಿ ಅಥವಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅವರಿಗೆ ಉದ್ಯೋಗ ನೀಡುವ ವೇಳೆ ಶೇಕಡಾ 10 ಮೀಸಲಾತಿ ಇರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ದೇಶ ಪ್ರೇಮ ಉದ್ದೀಪನಗೊಳಿಸುವ ಕೆಲಸದಲ್ಲಿ ನಿರತರಾಗಬೇಕು. ನಮಗೆ ದೇಶ ಮುಖ್ಯ, ದೇಶವಿದ್ದರೆ ನಾವೆಲ್ಲ ಉತ್ತಮ ಭವಿಷ್ಯವನ್ನು ಹೊಂದಬಹುದು ಎಂದರು.

ಕಾಲೇಜು ಮಟ್ಟದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಸಂಚಾಲಕ ರಾಧಾಕೃಷ್ಣ ಸ್ವಾಗತಿಸಿ, ಪ್ರಸ್ತಾವನೆ ಗೈದರು. ದ್ವಿತೀಯ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಅನುಷಾ ಪ್ರಾರ್ಥಿಸಿದರು. ಮನಿಷಾ ನಿರೂಪಿಸಿದರು. ಧೀರಜ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.