Home ಸುದ್ಧಿಗಳು ಪ್ರಾದೇಶಿಕ ‘ಕಗ್ಗದ ಬೆಳಕು’ ವಿಶೇಷ ಉಪನ್ಯಾಸ

‘ಕಗ್ಗದ ಬೆಳಕು’ ವಿಶೇಷ ಉಪನ್ಯಾಸ

324
0

ಕಾರ್ಕಳ: ಡಿ.ವಿ.ಜಿಯವರ ಬದುಕು ಮತ್ತು ಕಾವ್ಯಕ್ಕೆ ವ್ಯತ್ಯಾಸವಿಲ್ಲ. ನಡೆಯೇ ನುಡಿಯಾಗಿಸಿ ಗೌರವ ಪಡೆದುದಕ್ಕೆ ಸಾಕ್ಷಿ ಮಂಕುತಿಮ್ಮನ ಕಗ್ಗವಾಗಿದೆ ಎಂದು ಮುಂಡ್ಕೂರು ವಿದ್ಯಾವರ್ಧಕ ಪಿಯು ಕಾಲೇಜಿನ ಕನ್ನಡ ಅಧ್ಯಾಪಕ ಪ್ರಭಾಕರ ಕೊಂಡಳ್ಳಿ ಹೇಳಿದರು.

ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಾಸ್ಥಾನ ಗಣಿತನಗರ ಹಾಗೂ ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಸಹಯೋಗದೊಂದಿಗೆ ನಡೆದುಕೊಂಡು ಬರುತ್ತಿರುವ ಮೌಲ್ಯಸುಧಾ – ತಿಂಗಳ ಸರಣಿಯ ಎರಡನೆಯ ಕಾರ್ಯಕ್ರಮ ಕಗ್ಗದ ಬೆಳಕು ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ತಂತ್ರಜ್ಞಾನವನ್ನು ಹಣಕೊಟ್ಟು ಕೊಂಡುಕೊಳ್ಳಬಹುದು. ಆದರೆ ಸಮಾಜವನ್ನು ನಾವೇ ಬೆಳೆಸಿಕೊಳ್ಳಬೇಕು. ಭಾವನೆಗಳಿಲ್ಲದೆ ಬದುಕು ಇಲ್ಲ. ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ಎಂದವರು ಡಿವಿಜಿ. ಡಿವಿಜಿಯವರ ಬದುಕೇ ಪ್ರೇರಣಾದಾಯಕ ಸಾಹಸಗಾಥೆಯಾಗಿದೆ.

ಕಗ್ಗದ ಮೂಲಕ ಜೀವನ ದರ್ಶನವನ್ನೆ ಮಾಡಿಕೊಟ್ಟಿದ್ದಾರೆ, ಬದುಕಿನ ಮಾರ್ಗದರ್ಶಿ ಸೂತ್ರವನ್ನು ನೀಡಿದ್ದಾರೆ ಎಂದು ಅನೇಕ ಕಗ್ಗವನ್ನು ಉದಾಹರಿಸಿ ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್‌ ಹೆಗ್ಡೆ, ಅನಿಲ್‌ ಕುಮಾರ್‌ ಜೈನ್, ಕಾರ್ಕಳ ಜ್ಞಾನಸುಧಾ ಪಿಯು ಪ್ರಾಂಶುಪಾಲ ದಿನೇಶ್‌ ಎಂ ಕೊಡವೂರ್‌, ಉಪಪ್ರಾಂಶುಪಾಲರಾದ ಸಾಹಿತ್ಯ, ಡೀನ್‌ ಅಕಾಡೆಮಿಕ್ಸ್‌ ಮಿಥುನ್ ಯು., ಜ್ಞಾನಸುಧಾ ಹೈಸ್ಕೂಲ್‌ ಪ್ರಾಂಶುಪಾಲೆ ಉಷಾ ರಾವ್‌ ಯು., ಉಪಪ್ರಾಂಶುಪಾಲೆ ವಾಣಿ.ಕೆ., ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಕೌನ್ಸಿಲರ್‌ ಡಾ. ಪ್ರಸನ್ನ ಹೆಗ್ಡೆ, ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ, ಸುರೇಂದ್ರ ನಾಯಕ್‌ ಉಪಸ್ಥಿತರಿದ್ದರು.
ಉಪನ್ಯಾಸಕ ವಿನಯಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.