ಹಿರಿಯಡಕ, ನ.26: ಜಾತಿ, ಮತ, ಭಾಷೆ, ಬಣ್ಣಗಳಲ್ಲಿ ಬಹುರೂಪಿಯಾದ ಬಹುತ್ವಭಾರತದ ಬದುಕಿನ ಕಾಲುದಾರಿಗಳಿಗೆ ನೆಮ್ಮದಿಯ ಬೆಳಕು ತೋರುವ ಬಾಬಾ ಸಾಹೇಬರ ಸಂವಿಧಾನವೇ ಭಾರತದ ಪಾಲಿನ ಕೈದೀವಿಗೆ ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್ ಅವರು ಹೇಳಿದರು.

ಪ್ರಜಾಪ್ರಭುತ್ವ ಭಾರತದ ಸರ್ವಸಮ್ಮತಿಯ ಧರ್ಮಗ್ರಂಥದಂತಿರುವ ಸಂವಿಧಾನವನ್ನು ಅಂಗೀಕರಿಸಿದ ನವೆಂಬರ್ 26 ರಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು. ಸಂವಿಧಾನ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆಯನ್ನು ವಾಚಿಸಲಾಯಿತು. ಮತದಾರ ಸಾಕ್ಷರತಾ ಸಮಿತಿಯ ಸಂಚಾಲಕ ಡಾ. ರಾಧಾಕೃಷ್ಣ ನಾಯಕ್, ಕನ್ನಡ ಉಪನ್ಯಾಸಕ ಪಂಜು ಹಾಗೂ ಇತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಶಾಲಿನಿ ಯು.ಬಿ. ನಿರೂಪಿಸಿದರು.




By
ForthFocus™