Tuesday, November 17, 2026
Tuesday, November 17, 2026

ಅವೈಜ್ಞಾನಿಕ ಹಾಗೂ ದುಬಾರಿ ಪ್ರವೇಶ ಶುಲ್ಕ- ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಅವೈಜ್ಞಾನಿಕ ಹಾಗೂ ದುಬಾರಿ ಪ್ರವೇಶ ಶುಲ್ಕ- ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Date:

ಮಂಗಳೂರು, ನ.17: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳಿಗೆ ಅದಾನಿ ಸಂಸ್ಥೆಯು ವಿಧಿಸುತ್ತಿರುವ ಅವೈಜ್ಞಾನಿಕ ಹಾಗೂ ದುಬಾರಿ ಪ್ರವೇಶ ಶುಲ್ಕದ ವಿರುದ್ಧ ಮತ್ತು ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್‌ಗಳ ನೇತೃತ್ವದಲ್ಲಿ ವಿಮಾನ ನಿಲ್ದಾಣದ ಪ್ರವೇಶ ದ್ವಾರವಾದ ಕೆಂಜಾರು ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಸಂಘಟನೆಗಳ ಪದಾಧಿಕಾರಿಗಳು ಭೇಟಿ ಮಾಡಿ ತಮ್ಮ ಬೇಡಿಕೆಗಳ ಕುರಿತು ಸಮಗ್ರ ಮನವಿ ನೀಡಲಾಯಿತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳಿಗೆ ವಿಧಿಸಲಾಗುತ್ತಿರುವ ದುಬಾರಿ ಹಾಗೂ ಅವೈಜ್ಞಾನಿಕ ಶುಲ್ಕವು ಸ್ಥಳೀಯ ಟ್ಯಾಕ್ಸಿ ಚಾಲಕರು ಮತ್ತು ವಾಹನ ಮಾಲೀಕರ ಜೀವನೋಪಾಯಕ್ಕೆ ತೀವ್ರ ಹೊಡೆತ ನೀಡುತ್ತಿದೆ. ಈಗಾಗಲೇ ವಿವಿಧ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಚಾಲಕರ ಮೇಲೆ ಇಂತಹ ಏಕಪಕ್ಷೀಯ ಶುಲ್ಕದ ಹೊರೆ ಹೇರುವುದು ನ್ಯಾಯಸಮ್ಮತವಲ್ಲ. ಈ ಶುಲ್ಕ ವ್ಯವಸ್ಥೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಸ್ಥಳೀಯ ಪ್ರವಾಸಿ ವಾಹನಗಳಿಗೆ ನ್ಯಾಯಯುತ ಮತ್ತು ಸಮಂಜಸವಾದ ಶುಲ್ಕ ನೀತಿಯನ್ನು ಜಾರಿಗೊಳಿಸಬೇಕು. ಅಲ್ಲದೆ, ಸಂಘಟನೆಗಳು ಮುಂದಿಟ್ಟಿರುವ ಇತರ ನ್ಯಾಯಯುತ ಬೇಡಿಕೆಗಳಿಗೂ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಕೆ. ರಘುಪತಿ ಭಟ್, ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ (ರಿ.), ಮಂಗಳೂರು ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ (ರಿ.) ಇದರ ಪದಾಧಿಕಾರಿಗಳು ಹಾಗೂ ಉಭಯ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶತಾಯುಷಿ ಹಿರಿಯ ಸಾಹಿತಿ, ಪತ್ರಕರ್ತ ಅಮ್ಮೆಂಬಳ ಆನಂದ ಅವರಿಗೆ ಗೌರವ ಸನ್ಮಾನ

ಉಡುಪಿ, ನ.17: ಶತಾಯುಷಿ ಹಿರಿಯ ಸಾಹಿತಿ, ಪತ್ರಕರ್ತ ಅಮ್ಮೆಂಬಳ ಆನಂದ ಅವರನ್ನು...

ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ

ಬ್ರಹ್ಮಾವರ, ನ.17: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಯಕ್ಷಗಾನ ಕಲಾರಂಗ, ಶ್ರೀಕೃಷ್ಣ ಮಠ,...

34ನೇ ಘಟಿಕೋತ್ಸವಕ್ಕೆ ಮಾಹೆ ಸಜ್ಜು: ಜಾಗತಿಕ ಮಟ್ಟದ ಔದ್ಯಮಿಕ, ಶೈಕ್ಷಣಿಕ ಸಾಧಕರು ಭಾಗಿ

ಮಣಿಪಾಲ, ನ.17: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ...

ಕಾರಂತರು ನಾಡಿಗೆ ಹೆಮ್ಮೆ: ಪ್ರೊ. ಕನರಾಡಿ ವಾದಿರಾಜ ಭಟ್

ಉಡುಪಿ, ನ.17: ಅಡಂಬರದ ಬದುಕನ್ನು ಇಷ್ಟ ಪಡದ ಕಾರಂತರು ನೇರ ನಡೆ...
error: Content is protected !!