Tuesday, November 17, 2026
Tuesday, November 17, 2026

ಶಿಸ್ತುಬದ್ಧ ಜೀವನವನ್ನು ನಡೆಸಿಕೊಂಡು ಹೋಗುವಲ್ಲಿ ಕ್ರೀಡೆ ಸಹಕಾರಿ: ಡಾ. ಮಧು ಜಿ

ಶಿಸ್ತುಬದ್ಧ ಜೀವನವನ್ನು ನಡೆಸಿಕೊಂಡು ಹೋಗುವಲ್ಲಿ ಕ್ರೀಡೆ ಸಹಕಾರಿ: ಡಾ. ಮಧು ಜಿ

Date:

ಮಣಿಪಾಲ, ನ.16: ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ಮತ್ತು ಮಣಿಪಾಲ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆಯು 15 ನವೆಂಬರ್ ರಂದು ವಿದ್ಯಾನಗರ ಗ್ರೀನ್ಸ್ ನಲ್ಲಿ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಡಾ. ಮಧು ಜಿ ಪ್ರಾಂಶುಪಾಲರು, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಮೂಡುಬಿದಿರೆ ಇವರು ಮಾತನಾಡಿ ಮನುಷ್ಯನ ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡಲು ಕ್ರೀಡೆ ಅತ್ಯಂತ ಉಪಯುಕ್ತವಾಗಿದ್ದು, ಶೈಕ್ಷಣಿಕವಾಗಿ ಉತ್ತಮ ಏಳ್ಗೆಯನ್ನು, ದೂರದೃಷ್ಟಿ, ಏಕಾಗ್ರತೆ, ದೃಢ ಮನೋಭಾವನೆ, ಆತ್ಮವಿಶ್ವಾಸದ ಗುಣಗಳನ್ನು ಕ್ರೀಡಾಪಟುಗಳಲ್ಲಿ ಬೆಳೆಸುತ್ತದೆ. ಈ ಎಲ್ಲಾ ಗುಣಗಳೊಂದಿಗೆ ಶಿಸ್ತುಬದ್ಧ ಜೀವನವನ್ನು ನಡೆಸಿಕೊಂಡು ಹೋಗುವಲ್ಲಿ ಕ್ರೀಡೆ ಪ್ರಮುಖವಾಗಿದ್ದು, ನಿಮ್ಮನ್ನು ಆಟಗಳಲ್ಲಿ ತೊಡಗಿಸಿಕೊಂಡು ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ ಹಾಗೂ ಇಂದಿನ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನವೀನ್ ಶೆಟ್ಟಿ, ಹಿರಿಯ ರಾಷ್ಟ್ರೀಯ ವಾಲಿಬಾಲ್ ಆಟಗಾರರು ಮತ್ತು ತರಬೇತುದಾರರು ಇವರು ಮಾತನಾಡಿ, ಉತ್ತಮ ಕ್ರೀಡಾಪಟುಗಳಾಗಬೇಕೆಂಬ ಮಹತ್ವಾಕಾಂಕ್ಷೆ ಇರುವವರು ಪ್ರಮುಖವಾಗಿ ವಿನಯತೆ, ಬದ್ಧತೆ, ಸಮರ್ಪಣಾ ಗುಣಗಳನ್ನು ಬೆಳೆಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಇಲ್ಲವಾದಲ್ಲಿ ಅತೀ ದೊಡ್ಡ ಸಾಧನೆಯ ಗುರಿ ಏರಿದರೂ ಸುದೀರ್ಘವಾಗಿ ಅದರಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧಕರಾಗಬೇಕಾದರೂ ಅದಕ್ಕೆ ಕಾರಣೀಕರ್ತರಾದ ಗುರುವನ್ನು, ಬೆಂಬಲಿಗರನ್ನು ಮರೆಯದೇ ವಿಧೇಯತೆಯ ಪ್ರತೀಕವಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ಮಣಿಪಾಲ ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಸಂಸ್ಥೆಯ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ಮುನ್ನಡೆಸುವ ‘ಗಳಿಕೆ ಮತ್ತು ಕಲಿಕೆ’ ಎಂಬ ಶೀರ್ಷಿಕೆಯ ಬಿಸಿನೆಸ್ ಫೇರ್‌ನ್ನು ನಡೆಸಲಾಯಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಲ್ಸನ್ ಡಿಕೋಸ್ಟ ಅವರು ಮಾತನಾಡಿ, ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಸೋತಿರಬಹುದು ಅಥವಾ ಗೆದ್ದಿರಬಹುದು ಆದರೆ ಪ್ರತಿಯೊಬ್ಬರಲ್ಲೂ ಒಂದು ಪಟ್ಟು ಸಾಮರ್ಥ್ಯ ಹೆಚ್ಚಾಗಿದೆ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಹೆಚ್ಚಿದೆ, ಇದೇ ರೀತಿ ಇನ್ನು ಮುಂದಿನ ದಿನಗಳಲ್ಲಿಯೂ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಅದರಿಂದ ಉತ್ತಮ ವ್ಯಕ್ತಿತ್ವವನ್ನು ಹೊಂದಲು ಪ್ರಯತ್ನಿಸಿ ಎಂದರು. ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಆಟಗಳಲ್ಲಿ ಭಾಗವಹಿಸಿದ ಉಪನ್ಯಾಸಕರಿಗೆ ಪ್ರಶಸ್ತಿ ನೀಡಲಾಯಿತು.

ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಶೆಟ್ಟಿ ಸ್ವಾಗತಿಸಿದರು. ಉಪಪ್ರಾಂಶಪಾಲರುಗಳಾದ ರವಿ. ಜಿ. ಹೇಮಂತ ಹಾಗೂ ನವೀನ್. ಎ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರಾದ ಅರುಣ್ ಕುಮಾರ್ ಮತ್ತು ಜಯರಾಜ್ ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿಧಿ ಭಾಗವತ್ ಇವರು ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲಾವಿದರೆಂದರೆ ಕಲಾತಪಸ್ವಿಗಳು: ಪೇಜಾವರ ಶ್ರೀ

ಉಡುಪಿ, ನ.16: ತಮ್ಮ ಬದುಕನ್ನೇ ಯಕ್ಷಗಾನಕ್ಕೆ ಮುಡಿಪಾಗಿಟ್ಟು ಕಲಾರಸಿಕರನ್ನು ರಂಜಿಸಿ ಯಕ್ಷಗಾನವನ್ನು...

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ

ಉಡುಪಿ, ನ.16: ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ...

ಬಾಲಕಾರ್ಮಿಕ ಪದ್ಧತಿ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ

ಧಾರವಾಡ, ನ.16: ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು...
error: Content is protected !!