ಉಡುಪಿ, ನ.16: ಅನಂತ ಪ್ರಕಾಶ ಸಂಸ್ಥೆಯ ವತಿಯಿಂದ ಸಾಹಿತಿ ಗಾಯತ್ರಿ ಎಸ್ ಉಡುಪ ಸ್ಮರಣಾರ್ಥ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಅವರ ಕಥೆ ‘ಬುರುಡೆ ಪ್ರಕರಣ’ ದ್ವಿತೀಯ ಬಹುಮಾನವನ್ನು ಗಳಿಸಿದೆ. ಬಹುಮಾನವು ರೂ.5,000 ನಗದು ಮತ್ತು ರೂ. 2,000 ಮೌಲ್ಯದ ಪುಸ್ತಕಗಳನ್ನು ಒಳಗೊಂಡಿದೆ. ನರೇಂದ್ರ ಎಸ್ ಗಂಗೊಳ್ಳಿ ಅವರು ಹೇಳದೆ ಹೋದ ಮಗಳಿಗೆ, ಅವಳ ನಿಟ್ಟುಸಿರು, ನಿಭ್ರತ, ನಾಯಿ ನಾನು, ರೂಮಿನೊಳಗಿಂದ ಮೊದಲಾದ ಪುಸ್ತಕಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಕಥಾ ಸ್ಪರ್ಧೆಯಲ್ಲಿ ನರೇಂದ್ರ ಎಸ್ ಗಂಗೊಳ್ಳಿಗೆ ದ್ವಿತೀಯ ಸ್ಥಾನ
ಕಥಾ ಸ್ಪರ್ಧೆಯಲ್ಲಿ ನರೇಂದ್ರ ಎಸ್ ಗಂಗೊಳ್ಳಿಗೆ ದ್ವಿತೀಯ ಸ್ಥಾನ
Date:




By
ForthFocus™