ಉಡುಪಿ, ನ.9: ಸುಮನಸಾ ಕೊಡವೂರು ಸಂಸ್ಥೆಯ ರಜತ ಸಂಭ್ರಮ ಸರಣಿ ಕಾರ್ಯಕ್ರಮಗಳಲ್ಲಿ ‘ಚೈತನ್ಯ ರಂಗ’ ಆಶ್ರಮ ಸೇವಾ ಕಾರ್ಯಕ್ರಮ ಕೊಳಲಗಿರಿಯ ಸ್ವರ್ಗ ಆಶ್ರಮದಲ್ಲಿ ನಡೆಯಿತು.
ಸಂಸ್ಥೆಯ ರಜತ ಸಂಭ್ರಮ ಸಮಿತಿಯ ಸಲಹೆಗಾರರಾದ ವಿಶ್ವನಾಥ್ ಶೆಣೈ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ಆಶ್ರಮದ ಸ್ಥಾಪಕರಾದ ಡಾ. ಶಶಿಕಿರಣ್, ರಜತ ಸಂಭ್ರಮ ಸಮಿತಿಯ ಜನಾರ್ದನ ಕೊಡವೂರು, ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು, ಪೂರ್ಣಿಮಾ ಜನಾರ್ದನ್, ಸಂಚಾಲಕರಾದ ಭಾಸ್ಕರ್ ಪಾಲನ್, ಕಾರ್ಯಕ್ರಮದ ಸಂಯೋಜಕರಾದ ವಿಜಯ ಭಾಸ್ಕರ್ ಹಾಗೂ ಗೀತಾ ಹರೀಶ್ ಉಪಸ್ಥಿತರಿದ್ದರು.




By
ForthFocus™