ಉಡುಪಿ, ನ.5: ಗುರುವಾರ (ನ.5 ) ಬೆಳಿಗ್ಗೆ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಗಾಯಗೊಂಡು ಅದೃಷ್ಟವಶಾತ್ ಪಾರಾದ ಘಟನೆ ಉಡುಪಿ ನಿಟ್ಟೂರು ಸಮೀಪದ ಶಾರದಾ ಹೊಟೇಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ವಿಶು ಶೆಟ್ಟಿ ಅವರು ಉಡುಪಿಯತ್ತ ತೆರಳುವಾಗ ಅದೇ ಮಾರ್ಗವಾಗಿ ಉಡುಪಿಯತ್ತ ಚಲಿಸುತ್ತಿದ್ದ ಬಸ್ ವಿಶು ಶೆಟ್ಟಿ ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಪರಿಣಾಮ ವಿಶು ಶೆಟ್ಟಿ ಅವರ ಕಾಲಿಗೆ ಗಂಭೀರ ಗಾಯವಾಗಿ ಹಸ್ತ ಸೀಳಿದೆ. ಘಟನೆಯ ಬಗ್ಗೆ ‘ಉಡುಪಿ ಬುಲೆಟಿನ್’ ಜತೆ ಮಾತನಾಡಿದ ಅವರು, “ವೇಗದಿಂದ ಚಲಿಸುತ್ತಿದ್ದ ಬಸ್ ಢಿಕ್ಕಿ ಹೊಡೆದು ಬಸ್ ನಿಲ್ಲಿಸದೆ ಮುಂದಕ್ಕೆ ಸಾಗಿದು ಚಾಲಕನ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಳಗ್ಗೆ ಈ ರೀತಿ ಆದರೆ ಇನ್ನು ರಾತ್ರಿ ಪರಿಸ್ಥಿತಿ ಹೇಗಿರಬಹುದು” ಎಂದು ವಿಶು ಶೆಟ್ಟಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.




By
ForthFocus™