Monday, November 2, 2026
Monday, November 2, 2026

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದೆ: ಮಟ್ಟಾರು ರತ್ನಾಕರ ಹೆಗ್ಡೆ

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದೆ: ಮಟ್ಟಾರು ರತ್ನಾಕರ ಹೆಗ್ಡೆ

Date:

ಉಡುಪಿ, ಅ.31: ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ನಾಡಿನ ಸಂಸ್ಕೃತಿಯನ್ನು ಉಳಿಸುತ್ತಿದೆ. ಇಂತಹ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹೆತ್ತವರಿಗೂ ವಿದ್ಯೆ ಕೊಟ್ಟ ಕಾಲೇಜಿಗೂ ಕೀರ್ತಿ ತರಬೇಕು. ಪರಿಶ್ರಮಕ್ಕೆ ತಕ್ಕ ಫಲವಿದೆ ಎಂಬುದನ್ನು ಅರಿತು ದೇಶದ ಆಸ್ತಿಗಳಾಗಬೇಕು. ಶಿಕ್ಷಕರು ದೇಶದ ಆಗುಹೋಗುಗಳ ಅರಿವುಳ್ಳವರಾಗಿದ್ದು, ವಿದ್ಯಾರ್ಥಿಗಳನ್ನು ಮನುಷ್ಯರನ್ನಾಗಿ ಮಾಡುವ ಕಾರ್ಯವಾಗಬೇಕು ಎಂದು ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. ಇವರು ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಜ್ಞಾನ ಸಂಭ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೇತ್ರ ಜ್ಯೋತಿ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಇವರು ಸಾಮಾಜಿಕ ಮಾಧ್ಯಮಗಳ ಸರಿಯಾದ ಬಳಕೆಯಾಗಬೇಕು, ದೈಹಿಕ ಚಟುವಟಿಕೆಯ ಜೊತೆಗೆ ಓದು ಮುಂದುವರಿಯಲಿ. ಬದುಕಿನಲ್ಲಿ ಯಾವುದು ಮುಖ್ಯ ಮತ್ತು ಯಾವುದು ಅಮುಖ್ಯ ಎಂಬುದರ ನಿರ್ದಿಷ್ಟತೆ ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಮಾತನಾಡಿ ಅನುಭವಕ್ಕಿಂತ ಮಿಗಿಲಾದ ಶಿಕ್ಷಣವಿಲ್ಲ, ಅನುಭವಿ ಸಾಧಕ ವ್ಯಕ್ತಿಗಳ ಮಾತುಗಳು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು. ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿಧಿ ಭಾಗವತ್‌ ಸ್ವಾಗತಿಸಿ, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ ವಂದಿಸಿ, ರಸಾಯನಶಾಸ್ತ್ರ ಉಪನ್ಯಾಸಕಿ ದೀಪ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕರುಗಳಾದ ಸುಧನ್ವ ಮುಂಡ್ಕೂರು ಮತ್ತು ಪ್ರಾಪ್ತಿ ಮುಖೇಶ್ ಶೇಟ್ ವೇದಿಕೆಯಲ್ಲಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ಕ್ಲಾಸಸ್ ಸಿ.ಎ. ಇಂಟರ್ಮೀಡಿಯೇಟ್ ಸಾಧಕರಿಗೆ ಸನ್ಮಾನ

ಕಟಪಾಡಿ, ನ.2: ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಸಾಧನೆಗೈದ...

ಕನ್ನಡತನ ಬಳಸಿ ಬದುಕು ಕಟ್ಟಿಕೊಳ್ಳೋಣ: ಡಾ.ನರೇಂದ್ರ ಕುಮಾರ್

ಉಡುಪಿ, ನ.2: ಕನ್ನಡತನ ಬಳಸಿ ಬದುಕು ಕಟ್ಟಿಕೊಳ್ಳೋಣ. ಈ ರಾಜ್ಯೋತ್ಸವ ದಿನನಿತ್ಯದ...

ಬಿ.ಬಿ. ಹೆಗ್ಡೆ ಕಾಲೇಜು: ಕನ್ನಡ ಡಿಂಡಿಮ

ಕುಂದಾಪುರ, ನ.2: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು: ರಾಘವೇಂದ್ರ ಪ್ರಭು ಕರ್ವಾಲು

ಉಡುಪಿ, ನ.1: ಮಕ್ಕಳೇ ಸಮಾಜದ ಮುಂದಿನ ನಿಜವಾದ ಆಸ್ತಿ. ಮಕ್ಕಳ ವ್ಯಕ್ತಿತ್ವ...
error: Content is protected !!