Saturday, October 31, 2026
Saturday, October 31, 2026

ತ್ರಿಶಾ ಕ್ಲಾಸಸ್: ಸಿಎ ಇಂಟರ್ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ

ತ್ರಿಶಾ ಕ್ಲಾಸಸ್: ಸಿಎ ಇಂಟರ್ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ

Date:

ಮಂಗಳೂರು, ಅ.31: ಸಿ.ಎ ಸಿ.ಎಸ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗಾಗಿ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ ಎ ಇಂಟರ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಡಾ. ನಾರಾಯಣ ಕಾಯರ್ ಕಟ್ಟೆ ಇವರು ವಿದ್ಯಾರ್ಥಿಗಳು ಮುಂದಿನ ಹಂತಗಳನ್ನು ಉತ್ತಮ ತಯಾರಿಯೊಂದಿಗೆ ಪೂರ್ಣಗೊಳಿಸಬೇಕು. ಆರ್ಟಿಕಲ್ ಶಿಪ್ ತರಬೇತಿ ಹಂತದಲ್ಲಿ ವೃತ್ತಿಪರತೆಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತ ಸಾಧಕರಿಗೆ ಶುಭ ಕೋರಿದರು.

ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ನಂಬಿಕೆ, ನುರಿತ ಅಧ್ಯಾಪಕ ವೃಂದದ ತರಬೇತಿ ಮತ್ತು ಪ್ರೇರಣೆ ಈ ಕ್ಷಣಕ್ಕೆ ಕಾರಣ. ತ್ರಿಶಾ ಸಂಸ್ಥೆ ವಿದ್ಯಾರ್ಥಿಗಳ ಬೆನ್ನೆಲುಬಾಗಿ ಸದಾ ಪ್ರೋತ್ಸಾಹಿಸುತ್ತದೆ ಎಂದು ಶುಭ ಹಾರೈಸಿದರು ಮತ್ತು ಆರ್ಟಿಕಲ್ ಶಿಪ್ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ನೀಡಿದರು. ಸಾಧಕ ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತ್ರಿಶಾ ಕ್ಲಾಸಸ್ ನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸನ್ಮಾನ ಕಾರ್ಯಕ್ರಮದ ನಂತರ ಆರ್ಟಿಕಲ್ ಶಿಪ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ಪ್ರೊ. ಸುಪ್ರಭಾ ನಿರ್ವಹಿಸಿದರು.

ತರಬೇತುದಾರರಾದ ಸಿಎ ಸಮರ್ಥ್ ಜಿ.ಕೆ ಹಾಗೂ ಸಿಎ ಸಂತೋಷ್ ಪ್ರಭು, ವಿದ್ಯಾರ್ಥಿಗಳು ಹಾಗೂ ಪಾಲಕರು, ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮೀಕ್ಷಾ ಹಾಗೂ ತಂಡ ಪ್ರಾರ್ಥಿಸಿ, ಆದಿತ್ಯಾ ಜೆ. ಶೆಟ್ಟಿ ನಿರೂಪಿಸಿ, ಸನ್ಮಾನಿತರ ವಿವರ ವಾಚಿಸಿದರು. ಗಾಯತ್ರಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಾಯುಪಡೆಯ 29 ನೇ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ

ನವದೆಹಲಿ, ಅ.31: ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಶನಿವಾರ 29...

ಕೃಷಿ ಸಂಬಂಧಿತ ಚಟುವಟಿಗಳಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ

ಉಡುಪಿ, ಅ.31: ಕೃಷಿ ಇಲಾಖೆಯ ವತಿಯಿಂದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ...

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದೆ: ಮಟ್ಟಾರು ರತ್ನಾಕರ ಹೆಗ್ಡೆ

ಉಡುಪಿ, ಅ.31: ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ನಾಡಿನ ಸಂಸ್ಕೃತಿಯನ್ನು ಉಳಿಸುತ್ತಿದೆ. ಇಂತಹ...
error: Content is protected !!