Saturday, October 31, 2026
Saturday, October 31, 2026

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆ: ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆ: ಅರ್ಜಿ ಆಹ್ವಾನ

Date:

ಉಡುಪಿ, ಅ.30: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ಈ ಕೆಳಕಂಡ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಳುಮೆಣಸು, ಗೇರು, ಜಾಯಿಕಾಯಿ, ಅನಾನಸು, ಅಂಗಾಂಶ ಬಾಳೆ ಹಾಗೂ ಕಂದು ಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬೂತನ್, ಡ್ರಾಗನ್ ಫೂಟ್ ಹೊಸ ತೋಟಗಳ ಸ್ಥಾಪನೆಗೆ ಶೇ.40 ಸಹಾಯಧನ, ಸಣ್ಣ ಸಸ್ಯಾಗಾರಗಳ/ ನರ್ಸರಿಗಳ ಸ್ಥಾಪನೆಗೆ ಶೇ.50 ರ ದರದಲ್ಲಿ (ಗರಿಷ್ಠ ರೂ. 10 ಲಕ್ಷಗಳು) ಸಹಾಯಧನ, ಸಸ್ಯಾಗಾರಗಳ ಉನ್ನತೀಕರಣಕ್ಕಾಗಿ ಶೇ.50 ರಂತೆ ಪ್ರತಿ ಹೆಕ್ಟೇರಿಗೆ ರೂ. 2 ಲಕ್ಷಗಳಂತೆ 2 ಹೆಕ್ಟೇರಿಗೆ ರೂ.4 ಲಕ್ಷಗಳ ಸಹಾಯಧನ, ಅಂಗಾಂಶ ಕೃಷಿ ಘಟಕ ಸ್ಥಾಪನೆಗೆ ಶೇ.40 ರಂತೆ (ಗರಿಷ್ಠ ರೂ. 100 ಲಕ್ಷಗಳು) ಸಹಾಯಧನ, ನೀರು ಸಂಗ್ರಹಣ ಘಟಕ (28*27*3 ಮೀ.ಅಳತೆ) ನಿರ್ಮಾಣಕ್ಕೆ ಗರಿಷ್ಠ 0.90 ಲಕ್ಷ ರೂಪಾಯಿಗಳ ಸಹಾಯಧನ, ಎರೆಹುಳ ಘಟಕ ನಿರ್ಮಾಣಕ್ಕೆ ಗರಿಷ್ಠ 0.50 ಲಕ್ಷ ಸಹಾಯಧನ ಲಭ್ಯವಿದೆ.

ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಪ್ರತಿ ಹೆಕ್ಟೇರಿಗೆ ರೂ.1500, ವಿವಿಧ ಜಾತಿಯ ಅಣಬೆ ಉತ್ಪಾದನೆಗಾಗಿ ಅಣಬೆ ಉತ್ಪಾದನಾ ಘಟಕ, ಸ್ಪಾನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಶೇ.40 ರ ಗರಿಷ್ಠ 8 ರಿಂದ 12 ಲಕ್ಷ ರೂ.ಗಳ ಸಹಾಯಧನ, ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ವಿವಿಧ ಸಂಸ್ಥೆಗಳು ಸ್ಥಾಪಿಸುವ ಗ್ರಾಮೀಣ ಮಾರುಕಟ್ಟೆ/ ರೈತ ಸಂತೆ/ ನೇರ ಮಾರುಕಟ್ಟೆ ಸ್ಥಾಪಿಸಲು ಶೇ.40 ರ ಗರಿಷ್ಠ ರೂ.10 ಲಕ್ಷಗಳ ಸಾಲ ಆಧಾರಿತ ಸಹಾಯಧನಕ್ಕೆ ಅವಕಾಶವಿರುತ್ತದೆ. ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ.35ರ ದರದಲ್ಲಿ (ಗರಿಷ್ಠ 12.25 ಲಕ್ಷಗಳವರೆಗೆ) ಸಹಾಯಧನ, ಪ್ಯಾಕ್ ಹೌಸ್‌ಗಳ ನಿರ್ಮಾಣಕ್ಕೆ ಗರಿಷ್ಠ 2.40 ಲಕ್ಷಗಳವರೆಗೆ ಶೇ.50 ಸಹಾಯಧನ ಲಭ್ಯವಿದೆ. ರೈತರ ಯಾಂತ್ರೀಕರಣ ಅವಶ್ಯಕತೆಗೆ 20 ಹೆಚ್.ಪಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ‍್ಯಾಕ್ಟರ್ ಖರೀದಿಗೆ ಗರಿಷ್ಠ 0.75 ಲಕ್ಷ ರೂ.ವರೆಗೆ ಸಹಾಯಧನ, ತೋಟಗಾರಿಕೆ ಬೆಳೆಗಳಿಗೆ ಬಳಸುವ ಪ್ಲಾಸ್ಟಿಕ್ ಹೊದಿಕೆ/ಮಲ್ಚಿಂಗ್ ಗಳಿಗೆ ಶೇ.50 ರ ದರದಲ್ಲಿ, ಪ್ರತಿ ಹೆಕ್ಟೇರ್‌ಗೆ ರೂ. 20,000 ಸಹಾಯಧನ, ತೋಟಗಳಲ್ಲಿ ಕಳೆ ನಿಯಂತ್ರಣಕ್ಕಾಗಿ ವೀಡ್ ಮ್ಯಾಟ್ ಬಳಕೆಗೆ ಶೇ.50 ರ ದರದಲ್ಲಿ ರೂ. 25,000 ಪ್ರತಿ ಹೆಕ್ಟೇರ್‌ಗೆ ಸಹಾಯಧನ ಲಭ್ಯವಿದೆ. ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಗಳಡಿ ಅನುಮೋದಿತ ವಿವಿಧ ಯಂತ್ರೋಪಕರಣಗಳಿಗೆ ಶೇ.50 ರ ಸಹಾಯಧನ, ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ಶೇ.90 ರಷ್ಟು ಸಹಾಯಧನ ಲಭ್ಯವಿದ್ದು ಕಛೇರಿಯಲ್ಲಿ ಅರ್ಜಿ ಸಲ್ಲಿಸಿ ಕಾರ್ಯಾದೇಶ ಪಡೆದು ಇಲಾಖೆಯಿಂದ ಅನುಮೋದಿತ ಡೀಲರ್‌ಗಳ ಮೂಲಕ ರೈತರು ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ.

ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕು ಅರಣ್ಯವಾಸಿ ಹಕ್ಕು ಪತ್ರ ಪಡೆದ ಧಾರ್ತಿ ಆಭಾ ಫಲಾನುಭವಿಗಳಿಗೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ನಿಗದಿತ ಎಲ್ಲಾ ಯೋಜನೆಗಳಲ್ಲಿ, ಶೇ. 90ರ ಸಹಾಯಧನ ಪಡೆಯಲು ಅವಕಾಶವಿದ್ದು ಅರಣ್ಯವಾಸಿ ಹಕ್ಕು ಪತ್ರ ಇರುವವರು ಪ್ರಯೋಜನ ಪಡೆಯಬಹುದಾಗಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಫಾರ್ಮ್ ಗೇಟ್ ಸಹಾಯಧನಕ್ಕೆ ಅವಕಾಶವಿದ್ದು, ರೂ. 1 ಲಕ್ಷ ಸಹಾಯಧನ ಪಡೆಯಲು ಅವಕಾಶವಿದೆ. ಸೋಲಾರ್ ಪಂಪ್‌ಸೆಟ್‌ಗಳ ಖರೀದಿಗೆ ಇಲಾಖೆಯಿಂದ ಶೇ. 50 ರ ಸಹಾಯಧನ, 3 ಹೆಚ್.ಪಿ ಪಂಪ್‌ಸೆಟ್‌ಗೆ ಒಟ್ಟು ವೆಚ್ಚ 2 ಲಕ್ಷ ಗಳಿದ್ದು, ರೂ. 1 ಲಕ್ಷ ಸಹಾಯಧನ ಹಾಗೂ 5 ಹೆಚ್.ಪಿ ಮೇಲ್ಪಟ್ಟ ಪಂಪ್‌ಸೆಟ್‌ಗೆ ಒಟ್ಟು ವೆಚ್ಚ 3 ಲಕ್ಷ ಗಳಿಗೆ ರೂ. 1.50 ಲಕ್ಷ ಸಹಾಯಧನ ಲಭ್ಯವಿದೆ. ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಡಿ ಅಡಿಕೆ, ತೆಂಗು, ಕಾಳುಮೆಣಸು, ರಾಂಬೂತಾನ್ ಮುಂತಾದ ಬೆಳೆಗಳಿಗೆ ತೋಟ ನಿರ್ಮಾಣ ಮಾಡಬಹುದಾಗಿದೆ.

ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯಲು ಆಸಕ್ತ ಅರ್ಹ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ ಮತ್ತು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಂಬಾಗಿಲು ಜಂಕ್ಷನ್ ನಲ್ಲಿ ಯಾವುದೇ ಅಪಘಾತಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಅ.31: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್‌ಗಳನ್ನು ಸಂಗ್ರಹ ಮಾಡಲಾಗುತ್ತದೆ....

ನೆಟ್‌ಬಾಲ್: ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಉಡುಪಿ, ಅ.30: ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀವಿದ್ಯಾನಿಕೇತನ ಪಿ.ಯು ಕಾಲೇಜು...
error: Content is protected !!