Sunday, October 25, 2026
Sunday, October 25, 2026

ನ.1: ಕಾಪು ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ನ.1: ಕಾಪು ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Date:

ಕಾಪು, ಅ.25: ಕಾಪು ಪರಿಸರದ ಜನತೆಗೆ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಕಾಪು, ತನ್ನ ಆರೋಗ್ಯ ಸೇವಾ ಸಂಸ್ಥೆಯು ಯಶಸ್ವಿ ಐದು ವರ್ಷ ಪೂರೈಸಿದ ಸಂತಸದ ಪ್ರಯುಕ್ತ ನವೆಂಬರ್ 1 2026, ಆದಿತ್ಯವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.30 ವರೆಗೆ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಕೋತಲ್ ಕಟ್ಟೆ, ಕಾಪು ಇದರ ಆವರಣದಲ್ಲಿ ಐ – ನೀಡ್ಸ್ ಆಪ್ಟಿಕಲ್ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಧೂತಪಾಪೇಶ್ವರ್ ಲಿಮಿಟೆಡ್ ಇದರ ಆಶ್ರಯ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಮತ್ತು ಸಲಹೆ (ಆಯುರ್ವೇದ) ಹಾಗೂ ಉಚಿತ ಮೂಳೆ ಸಾಂದ್ರತಾ ತಪಾಸಣಾ, ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರಾರ್ಥಿಗಳು ಮುಂಚಿತ ನೋಂದಾವಣೆ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ: 9980909951, 9448928299 (ಈ ಆರೋಗ್ಯ ಶಿಬಿರದಲ್ಲಿ – ಎಲ್ಲಾ ರೀತಿಯ ಶಾರೀರಿಕ ರೋಗ ಸಂಬಂಧಿ ದೈಹಿಕ ತಪಾಸಣೆ – ಚಿಕಿತ್ಸಾ ಸಲಹೆ, ವಿಶೇಷವಾಗಿ ಪ್ರಸ್ತುತ ಜನ ಸಾಮಾನ್ಯರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಮೂಳೆ ಆರೋಗ್ಯ ಸಂಬಂಧಿ (ಮೂಳೆ ಸವೆತ – ಮೂಳೆ ಖನಿಜ ಸಾಂದ್ರತೆ ಇಳಿತ, ಗಂಟು ನೋವು, ಬೆನ್ನು ನೋವು) ವಿವಿಧ ಸಮಸ್ಯೆಗಳು ಹಾಗೂ ದೃಷ್ಟಿ ಸಂಬಂಧಿ ಸಮಸ್ಯೆಗಳು, ಸ್ತ್ರೀ ಸಂಬಂಧಿ, ಮುಖ ಸೌಂದರ್ಯ, ಕೇಶ ಸಂಬಂಧಿ ಸಮಸ್ಯೆಗಳಿಗೆ ತಜ್ಞ ವೈದ್ಯರುಗಳಿಂದ ಉಚಿತ ತಪಾಸಣೆ – ಚಿಕಿತ್ಸಾ ಸಲಹೆ ನೀಡಲಾಗುವುದು.

ವೈದ್ಯರ ಸಲಹೆ ಹಾಗೂ ಅಗತ್ಯತೆಯ ಮೇರೆಗೆ ಆಯ್ದ ಶಿಬಿರಾರ್ಥಿಗಳಿಗೆ ಉಚಿತ ಮಧುಮೇಹ ರಕ್ತ ತಪಾಸಣೆಯನ್ನು ಮಾಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಡಾ. ಸದಾನಂದ ಎಲ್ ಭಟ್ ಕಾಪು, ಎಂ.ಡಿ(ಆಯು).
ಡಾ. ಸುಷ್ಮಾ ಎಸ್ ಭಟ್, ಎಂ.ಡಿ(ಆಯು). ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.1: ಗುಜ್ಜಾಡಿ ನಾಯಕವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಗುಜ್ಜಾಡಿ, ಅ.25: ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಆಯುಷ್...

ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾದರೆ ಸೂಕ್ತ ಕ್ರಮ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.25: ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ...

ಭೂತಾನ್‌ನ ಮೊಂಗಾರ್ ಜಿಲ್ಲೆಯಲ್ಲಿ ಭಾರತದ ಬೆಂಬಲದೊಂದಿಗೆ ಕೈಗೊಂಡ 15 ಸಮುದಾಯ ಯೋಜನೆಗಳ ಉದ್ಘಾಟನೆ

ನವದೆಹಲಿ, ಅ.24: ಭೂತಾನ್‌ನ ಪೂರ್ವ ಭಾಗದಲ್ಲಿರುವ ಮೊಂಗಾರ್ ಜಿಲ್ಲೆಯಲ್ಲಿ, ಭಾರತ ಸರ್ಕಾರದ...
error: Content is protected !!