Thursday, October 8, 2026
Thursday, October 8, 2026

ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜೀವನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ: ಡಾ. ಕೆ. ಉಮೇಶ್ ಶೆಟ್ಟಿ

ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜೀವನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ: ಡಾ. ಕೆ. ಉಮೇಶ್ ಶೆಟ್ಟಿ

Date:

ಕುಂದಾಪುರ, ಅ.8: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜೀವನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದರು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರಾಜೇಶ್ ಶೆಟ್ಟಿ, ಪೂಜಾ ಕುಂದರ್, ರೋವರ್ ಸ್ಕೌಟ್ ಲೀಡರ್ ಪ್ರವೀಣ್ ಮೊಗವೀರ ಗಂಗೊಳ್ಳಿ ಹಾಗೂ ರೇಂಜರ್ ಲೀಡರ್ ರೇವತಿ ಡಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ದ್ವಿತೀಯ ಬಿ.ಬಿ.ಎ ಪ್ರತೀಕ್ಷಾ, ರೋನಿತ್‌ ಕುಮಾರ್‌ ಶೆಟ್ಟಿ, ದ್ವಿತೀಯ ಬಿ.ಕಾಂ. (ಸಿ) ಸುಕ್ಷಿತಾ ಹಾಗೂ ದ್ವಿತೀಯ ಬಿ.ಕಾಂ. (ಬಿ) ವೈಷ್ಣವಿ ಗಾಂಧೀಜಿ ಮತ್ತು ಶಾಸ್ತ್ರಿ ಜಿಯವರ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಾದ ಮಾನ್ಯ ಪ್ರಾರ್ಥಿಸಿ, ಕೀರ್ತನಾ ಸ್ವಾಗತಿಸಿ, ಅನುಷಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೆನಡಾದ ಲೇಖಕಿ ಆನ್ ಕಾರ್ಸನ್ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.8: ಶಾಸ್ತ್ರೀಯ ಸಂಪ್ರದಾಯದೊಂದಿಗೆ ಸೃಜನಶೀಲ ಸಂವಾದ ನಡೆಸುವ ಮೂಲಕ ಸಮಕಾಲೀನ...

ಐಎಂಎ ಉಡುಪಿ ಕರಾವಳಿಯ ನೂತನ ತಂಡದ ಪದಗ್ರಹಣ

ಉಡುಪಿ, ಅ.8: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಉಡುಪಿ-ಕರಾವಳಿಯ ನೂತನ ತಂಡದ...

ನಿಮ್ಮೊಳಗಿನ ಟೀಕಾಕಾರ

ಏನಾದರೂ ತಪ್ಪು ಮಾಡಿದಾಗ "ನೀನು ಸರಿಯಿಲ್ಲ", "ನಿನ್ನಿಂದ ಆಗಲ್ಲ", "ಜನರು ಏನ್...
error: Content is protected !!