Thursday, October 8, 2026
Thursday, October 8, 2026

ರಂಗ ಅಧ್ಯಯನ ಕೇಂದ್ರ ಉದ್ಘಾಟನೆ

ರಂಗ ಅಧ್ಯಯನ ಕೇಂದ್ರ ಉದ್ಘಾಟನೆ

Date:

ಬಸ್ರೂರು, ಅ.7: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಶಾರದಾ ರಂಗ ಅಧ್ಯಯನ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ ಎಂ ದಿನೇಶ ಹೆಗ್ಡೆ, ರಂಗಭೂಮಿ ಶಿಕ್ಷಣವು ವಿದ್ಯಾಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗಿದ್ದು, ಅಭಿನಯ ಮತ್ತು ನಾಟಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ, ನಾಯಕತ್ವ ಗುಣ ತಂಡದ ಮನೋಭಾವ ಮತ್ತು ಸೃಜನಶೀಲತೆ ಗುಣ ಬೆಳೆಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೇಖಕರು ಮತ್ತು ಟೀಚರ್ ಪತ್ರಿಕೆಯ ಸಂಪಾದಕರಾದ ಉದಯ ಗಾಂವ್ಕರ್ ಮಾತನಾಡಿ ರಂಗಭೂಮಿ ಸಮಾಜವನ್ನು ಅರ್ಥಮಾಡಿಕೊಳ್ಳುವ ಮತ್ತು ಬದಲಾವಣೆಯತ್ತ ಕೊಂಡೊಯ್ಯುವ ಮತ್ತು ಸಾಮಾಜಿಕ ಜವಬ್ದಾರಿಯನ್ನು ಬೆಳೆಸುವ ಮಹತ್ದ ಹೆಜ್ಜೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ಅನುಪಮಾ ಎಸ್ ಶೆಟ್ಟಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕರಾದ ವಾಸುದೇವ ಗಂಗೇರ, ವಸ್ತ್ರವಿನ್ಯಾಸಕರಾಗಿ ಚಿನ್ನ ವಿ ಗಂಗೇರ ಸಹ ನಿರ್ದೇಶಕರಾದ ಗಣೇಶ ಶೆಟ್ಟಿ ಉಪಸ್ಥಿತರಿದ್ದರು. ಶಾರದಾ ರಂಗ ಅಧ್ಯಯನ ಕೇಂದ್ರದ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಅಭ್ಯಾಸ ಮಾಲಿಕೆ ನಾಟಕ ಪ್ರದರ್ಶನ ”ಮಹಾತ್ಮ” ಎಂಬ ನಾಟಕವು ಎಲ್ಲಾ ಪ್ರೇಕ್ಷಕರ ಮನಸೂರೆಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಯಾನಂದ ಎನ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಪ್ರಮೀಳಾ ಕಾಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕರಾದ ಡಾ. ವಿಶ್ವನಾಥ ಆಚಾರ್ಯ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗ್ರಂಥಾಲಯದಲ್ಲಿ ನಮ್ಮ ಸಾಹಿತಿ

ಉಡುಪಿ, ಅ.7: ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ,...

ಗ್ರಾಮೀಣ ರೈತ ಮಹಿಳೆಯರಿಗೆ ಕೋಳಿಮರಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಅ.7: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಬೆಂಗಳೂರು ಇವರ...

ಸರ್ಕಾರದ ಸೌಲಭ್ಯಗಳು ಭೋವಿ ಸಮುದಾಯದ ಕಟ್ಟ ಕಡೆಯ ಫಲನುಭವಿಗೂ ತಲುಪಲಿ: ರಾಮಪ್ಪ ಎಂ

ಉಡುಪಿ, ಅ.7: ಸರಕಾರವು ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ...

ರಥಬೀದಿ ಕಾಲೇಜು: ಕನ್ನಡ ಭಾಷೆ ಮತ್ತು ಕೃತಕ ಬುದ್ಧಿಮತ್ತೆಯ ಪಾತ್ರ ಉಪನ್ಯಾಸ ಕಾರ್ಯಕ್ರಮ

ಮಂಗಳೂರು, ಅ.7: ಕನ್ನಡ ಭಾಷಿಕರ ಸಂಖ್ಯೆ ದೊಡ್ಡದಿದ್ದರೂ ಡಿಜಿಟಲ್ ಜಗತ್ತಿನಲ್ಲಿ ಕನ್ನಡದ...
error: Content is protected !!