Wednesday, October 7, 2026
Wednesday, October 7, 2026

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕಾರ್ಯಗಾರ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕಾರ್ಯಗಾರ

Date:

ಕುಂದಾಪುರ, ಅ.6: ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯಶಾಸ್ತ್ರ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು  ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು. ಕರ್ನಾಟಕ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ  ಹಾಗೂ ಪ್ರಾದೇಶಿಕ ಮುಖ್ಯಸ್ಥ ರಮೇಶ ವೈದ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗಿದ್ದು ಈ ಕ್ಷೇತ್ರದಲ್ಲಿ ಪ್ರಸ್ತುತ ವೈವಿಧ್ಯಮಯ ಉದ್ಯೋಗಾವಕಾಶಗಳು ಕಂಡುಬರುತ್ತವೆ.  ಭಾರತೀಯ ರಿಸರ್ವ್ ಬ್ಯಾಂಕ್,  ಸ್ಟೇಟ್ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಎಲ್ಲಾ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಕ್ಲರ್ಕ್, ಪ್ರೊಬೆಶನರಿ ಆಫೀಸರ್, ಸ್ಪೆಷಲ್ ಆಫೀಸರ್ ಸೇರಿದಂತೆ ಹಲವಾರು ರೀತಿಯ ಉದ್ಯೋಗಾವಕಾಶಗಳಿವೆ. ಈ ಎಲ್ಲ ಉದ್ಯೋಗಗಳಿಗೆ ಬ್ಯಾಂಕುಗಳು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನಗಳನ್ನು ನಡೆಸುತ್ತವೆ. ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಕ್ಕೆ ಕೇವಲ ಪದವಿಯ ಅಂಕಗಳು ಸಾಕಾಗುವುದಿಲ್ಲ. ಶೈಕ್ಷಣಿಕ ಅರ್ಹತೆಯೊಂದಿಗೆ ಸಂವಹನ ಕೌಶಲ್ಯ, ತಾರ್ಕಿಕ ಚಿಂತನೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.  ಈ ಆಯ್ಕೆ ಪ್ರಕ್ರಿಯೆಯನ್ನು ಅರಿತುಕೊಂಡು ಅಗತ್ಯ ಕೌಶಲಗಳೊಂದಿಗೆ ಸೂಕ್ತ ತಯಾರಿ ನಡೆಸಿ ಪ್ರಯತ್ನಿಸಿದರೆ ಬ್ಯಾಂಕ್ ಉದ್ಯೋಗವನ್ನು ಗಳಿಸಿ ಉತ್ತಮ ವೇತನ, ಸಾಮಾಜಿಕ ಸ್ಥಾನಮಾನ ಹಾಗೂ ಯೋಗ್ಯ ಜೀವನವನ್ನು ನಡೆಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ವೈದ್ಯ ಎಂ ಮಾತನಾಡಿ ಸೂಕ್ತ ಮಾರ್ಗದರ್ಶನ ಹಾಗೂ ಪ್ರಯತ್ನಶೀಲತೆಯಿಂದ  ಸಾಧನೆಯ ಮಾರ್ಗ ತೆಗೆದುಕೊಳ್ಳುತ್ತದೆ  ನಮ್ಮ ವಿದ್ಯಾರ್ಥಿಗಳು  ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಕಾಲೇಜಿನ ವಾಣಿಜ್ಯಶಾಸ್ತ್ರ  ವಿಭಾಗದ ಮುಖ್ಯಸ್ಥ ಡಾ. ಉದಯ ಶೆಟ್ಟಿ. ಕೆ  ಪ್ರಾಸ್ತಾವಿಸಿದರು.. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸುಬ್ರಮಣ್ಯ. ಎ., ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಮೋಹಿನಿ ಅತ್ತಿಮನಿ ಉಪಸ್ಥಿತರಿದ್ದರು. ಪ್ರತಿಮಾ ಸ್ವಾಗತಿಸಿ, ನಾಗೇಂದ್ರ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ್ಯೂಟ್ರಿನೋ ಸಂಶೋಧನೆಗಾಗಿ ಬೆಲ್ಜಿಯಂ ಮೂಲದ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.6: ಬೆಲ್ಜಿಯಂ ಮೂಲದ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ ಐಸ್ಕ್ಯೂಬ್ ನ್ಯೂಟ್ರಿನೋ...

ನೌಕಾಪಡೆಗಾಗಿ ಬ್ರಹ್ಮೋಸ್ ಏರೋಸ್ಪೇಸ್ ಜೊತೆ ರಕ್ಷಣಾ ಸಚಿವಾಲಯ ರೂ.660 ಕೋಟಿ ಒಪ್ಪಂದಕ್ಕೆ ಸಹಿ

ನವದೆಹಲಿ, ಅ.6: ಭಾರತೀಯ ನೌಕಾಪಡೆಯ ಹಡಗುಗಳಿಗೆ ಬ್ರಹ್ಮೋಸ್ ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆ...

ಕಸಾಪ ಉಡುಪಿ ತಾಲೂಕು: ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಉಡುಪಿ, ಅ.6: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ...

ಅಂಗನವಾಡಿ ಶಿಕ್ಷಕರಿಗೂ ಸರ್ಕಾರಿ ಉದ್ಯೋಗದ ಸೌಲಭ್ಯ ಸಿಗಲಿ: ಯಶ್ಪಾಲ್ ಸುವರ್ಣ

ಉಡುಪಿ, ಅ.6: ಪ್ರಧಾನಿ ನರೇಂದ್ರ ಮೋದಿಯವರ ನಿರಂತರ 25 ವರ್ಷಗಳ ರಾಷ್ಟ್ರ...
error: Content is protected !!