ಉಡುಪಿ, ಅ.1: ರೋಟರಿ ಉಡುಪಿಯಿಂದ ಶ್ರೀ ಕೃಷ್ಣಬಾಲನಿಕೇತನದ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಸಮವಸ್ತ್ರದ ಪ್ರಾಯೋಜಕತ್ವನ್ನು ವಹಿಸಿದ ಗೋಕುಲದಾಸ ಪೈ ಮಾತನಾಡುತ್ತಾ ಬಾಲನಿಕೇತನದೊಂದಿಗೆ ತಮ್ಮ ಬಾಂಧವ್ಯವನ್ನು ನೆನಪಿಸಿಕೊಂಡರು.

ರೋಟರಿ ಉಡುಪಿಯ ಅಧ್ಯಕ್ಷ ಗೋಪಾಲಕೃಷ್ಣ ಪ್ರಭು ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದ್ದ ಗೋಕುಲದಾಸ ಪೈ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಬಾಲನಿಕೇತನದ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಕ್ಲಬ್ ನ ಕಾರ್ಯದರ್ಶಿ ಗಣಪತಿ ಪ್ರಭು, ನಾರಾಯಣ ಬಿ.ಕೆ., ಸುಬ್ರಹ್ಮಣ್ಯ ಕಾರಂತ, ಮಾತಾಜಿ, ಮಕ್ಕಳು ಉಪಸ್ಥಿತರಿದ್ದರು. ಗುರುರಾಜ ಭಟ್ ಕಾರ್ಯಕ್ರಮ ಸಂಯೋಜಿಸಿದ್ದರು.




By
ForthFocus™