Tuesday, September 15, 2026
Tuesday, September 15, 2026

ದೇಶದ ಪ್ರಗತಿಯಲ್ಲಿ ಕೃಷಿ, ಹೈನುಗಾರಿಕೆಯ ಪಾತ್ರ ಪ್ರಮುಖವಾಗಿದೆ: ಉಮೇಶ್ ಕುಂದರ್

ದೇಶದ ಪ್ರಗತಿಯಲ್ಲಿ ಕೃಷಿ, ಹೈನುಗಾರಿಕೆಯ ಪಾತ್ರ ಪ್ರಮುಖವಾಗಿದೆ: ಉಮೇಶ್ ಕುಂದರ್

Date:

ಕೋಟ, ಆ.24: ದೇಶದ ಸುಭಿಕ್ಷೆಗೆ ಕೃಷಿ ಮತ್ತು ಹೈನುಗಾರಿಕೆ ಮೂಲ ಕಾರಣವಾಗಿದೆ ಎಂದು ಕೆ.ಎಂ.ಎಫ್ ವಿಸ್ತರಣಾಧಿಕಾರಿ ಉಮೇಶ್ ಕುಂದರ್ ಹೇಳಿದರು. ಸೋಮವಾರ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷರಾದ ವಲೇರಿಯನ್ ಡಿಸೋಜ ಅಧ್ಯಕ್ಷತೆ ವಹಿಸಿ ಸಾಮಾನ್ಯ ಸಭೆಯನ್ನು ನಡೆಸಿಕೊಟ್ಟರು. 25-26ನೇ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ನೀಡಿ ಪ್ರಥಮ ಬಹುಮಾನ ಪಡೆದ ಜೂಡಿಪ್ ಪಿಕಾರ್ಡೋ ಇವರಿಗೆ ನಗದು ಇನ್ನುಳಿದ ಹೈನುಗಾರರಿಗೆ ಪರಿಕರ ರೂಪದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಹಾಲು ಉತ್ಪಾದಕರಿಗೆ ಬೋನಸ್ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷೆ ಶ್ಯಾಮಲ ದೇವಾಡಿಗ, ನಿರ್ದೇಶಕರುಗಳಾದ ಜಲಜ ಬಿ ಪೂಜಾರಿ, ವಸುಧಾ ಪಿಎನ್ ಬಾಯರಿ, ಜಯಂತ ಪೂಜಾರಿ, ನಾಗರತ್ನ ಮಡಿವಾಳ, ಲಲಿತಾ ಪೂಜಾರಿ, ಡಯಾನಾ ಪಿಂಟೋ, ದಾಕ್ಷಾಯಿನಿ, ಮೈನಾ ಬಿ ಸಾಲಿಯಾನ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಪಾಂಡೇಶ್ವರ ಸಂಘದ ನಡಾವಳಿ, ವರದಿ, ಲೆಕ್ಕಪತ್ರ, ಆಯವ್ಯಯ ವಾಚಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಾಯಕಿ ಸುಜಾತ ವೆಂಕಟೇಶ ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜೀವದ ಹಂಗು ತೊರೆದು ಅರಣ್ಯವನ್ನು ಕಾಪಾಡಿದ ವೀರರ ತ್ಯಾಗ ಚಿರಸ್ಮರಣೀಯ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು, ಸೆ.14: ಬೆಂಗಳೂರಿನ ಅರಣ್ಯ ಭವನದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ...

ಬಿಜೆಪಿ ಮಾಜಿ ಶಾಸಕ ನೆ. ಲ. ನರೇಂದ್ರ ಬಾಬು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಸೆ.14: ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಕಾಪು: ಚೆಸ್ ಪಂದ್ಯಾಟ ಉದ್ಘಾಟನೆ

ಕಾಪು, ಸೆ.14: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ...

ಬಿ.ಬಿ. ಹೆಗ್ಡೆ ಕಾಲೇಜು: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.10: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...
error: Content is protected !!