Thursday, September 24, 2026
Thursday, September 24, 2026

ಕ್ರೀಡಾ ಕ್ಷೇತ್ರದಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಅಮೋಘ ಸಾಧನೆ

ಕ್ರೀಡಾ ಕ್ಷೇತ್ರದಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಅಮೋಘ ಸಾಧನೆ

Date:

ಗಣಿತನಗರ, ಆ.24: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಶಾರದಾ ಪದವಿಪೂರ್ವ ಕಾಲೇಜು, ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ಬೃಹತ್ ಜಿ ಗೌಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಯೋಗಾಸನ ಸ್ಪರ್ಧೆ: ಕಾರ್ಕಳ ಜ್ಞಾನಸುಧಾದ ಇಬ್ಬರು ರಾಜ್ಯಮಟ್ಟಕ್ಕೆ

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪಾರ್ಥ ಸಿ ಎಂ ಹಾಗೂ ಅನ್ವಿ ಎಚ್ ಅಂಚನ್ ಆರ್ಟಿಸ್ಟಿಕ್ ಸೋಲೊ ವಿಭಾಗದಲ್ಲಿ ಚಿನ್ನದ ಪದಕವನ್ನು (ಟ್ರೇಡಿಶ್ನಲ್ ಯೋಗಾಸನದಲ್ಲಿ ದ್ವಿತೀಯ) ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ರಿದಮಿಕ್ ವಿಭಾಗದಲ್ಲಿ ಅಸ್ಮಿತಾ ಎ.ಎನ್ ಹಾಗೂ ಅದಿತಿ ಜೆ ಪಾಟೀಲ್ ಬೆಳ್ಳಿಪದಕವನ್ನು, ಆರ್ಟಿಸ್ಟಿಕ್ ಪೈರ್ ವಿಭಾಗದಲ್ಲಿ ತರುಣ್ ಒ ವೈ ಹಾಗೂ ಸಂಮ್ಯುಕ್ತ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಲಾನ್ ಟೆನ್ನಿಸ್: ಕಾರ್ಕಳ ಜ್ಞಾನಸುಧಾದ ಇಬ್ಬರು ರಾಜ್ಯಮಟ್ಟಕ್ಕೆ

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ತೆಂಕನಿಡಿಯೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಲಾನ್ ಟೆನ್ನಿಸ್ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ
ಕಾಲೇಜಿನ ದ್ವಿತೀಯ ಪಿಯುಸಿಯ ಕಾರ್ತಿಕ್ ಎಲ್ ಎಚ್ ಮತ್ತು ಪ್ರಥಮ ಪಿಯುಸಿಯ ಬಿ.ಜಿ. ಧಾರ್ಮಿಕ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚದುರಂಗ ಸ್ಪರ್ಧೆ: ಕಾರ್ಕಳ ಜ್ಞಾನಸುಧಾದ ತರುಣ್ ಬಿ ಎಲ್ ರಾಜ್ಯಮಟ್ಟಕ್ಕೆ

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ವಿದ್ಯೋದಯ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ತರುಣ್ ಬಿ ಎಲ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!