Monday, August 24, 2026
Monday, August 24, 2026

ಕಲಾವಿದರಿಂದ ಅರ್ಜಿ ಆಹ್ವಾನ

ಕಲಾವಿದರಿಂದ ಅರ್ಜಿ ಆಹ್ವಾನ

Date:

ಉಡುಪಿ, ಆ.23: ಕಲಾವಿದರ ವಿವರಗಳನ್ನು ಕ್ರೋಢಿಕರಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿನ ಕಲಾವಿದರ, ಕಲಾತಂಡಗಳ ಪಟ್ಟಿಯನ್ನು ತಯಾರಿಸಿ ಅವರಿಗೆ ಸೂಕ್ತ ಕಾರ್ಯಕ್ರಮಗಳನ್ನು ನೀಡಲು ಹಾಗೂ ನೈಜ ಕಲಾವಿದರ ಪಟ್ಟಿಯನ್ನು ತಯಾರಿಸಿ ಗುರುತಿನ ಚೀಟಿ ನೀಡಲು ಅರ್ಹ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲಾವಿದರು, ಕಲಾತಂಡದವರು ಹಾಗೂ ಸಾಹಿತಿಗಳು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿಯಿಂದ ನಿಗಧಿತ ಅರ್ಜಿ ನಮೂನೆಯನ್ನು ಪಡೆದು, ಸ್ವ-ವಿವರದ ಮಾಹಿತಿಯೊಂದಿಗೆ ತಮ್ಮ ಆಧಾರ್ ಗುರುತಿನ ಚೀಟಿ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಪಡೆದ ಪ್ರಶಸ್ತಿ ಪುರಸ್ಕಾರಗಳ ವಿವರ, ಪ್ರಮುಖ ಪ್ರದರ್ಶನಗಳ ವಿವರ, ಶಿಲ್ಪಾ ಚಿತ್ರಕಲೆಗಳ ಕಲಾ ಪ್ರದರ್ಶನಗಳ ಛಾಯಾಚಿತ್ರಗಳನ್ನು ಲಗತ್ತಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟಂಬರ್ 30 ರ ಒಳಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಡಾ. ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿನಗರ, ಅಲೆವೂರು ಗ್ರಾಮ, ಮಣಿಪಾಲ ಅಂಚೆ, ಉಡುಪಿ ಜಿಲ್ಲೆ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2986168 ಅನ್ನು ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬಿ.ಎಲ್.ಎ-2ಗಳ ಸಭೆ

ಉಡುಪಿ, ಆ.23: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್...

ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಸರಣಿ ಉಪನ್ಯಾಸ ಮಾಲಿಕೆ ಉದ್ಘಾಟನೆ

ಕುಂದಾಪುರ, ಆ.23: ವಿದ್ಯಾರ್ಥಿ ದೆಸೆಯಲ್ಲಿ ದೇಹ, ಬುದ್ದಿ, ಭಾವನೆ, ಆತ್ಮಕ್ಕೆ ಶಿಕ್ಷಣ...

ತೆಂಕನಿಡಿಯೂರು ಕಾಲೇಜು: ವಿವೇಕಾನಂದರ ಚಿಂತನೆಯ ವಿಶೇಷ ಉಪನ್ಯಾಸ ಕಾರ್ಯಕ್ರಮ

ಮಲ್ಪೆ, ಆ.23: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ತ್ರಿಶಾ ವಿದ್ಯಾ ಕಾಲೇಜು: ‘ವಂದೇ ಮಾತರಂ ಮತ್ತು ಸ್ವಾತಂತ್ರ್ಯ’ ವಿಶೇಷ ಕಾರ್ಯಕ್ರಮ

ಕಟಪಾಡಿ, ಆ.23: ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ನೋಂ.) ಉಡುಪಿ ಜಿಲ್ಲಾ...
error: Content is protected !!