ಉಡುಪಿ, ಆ.19: ಪ್ಲಾನೆಟ್ ಮಾರ್ಸ್ ಫೌಂಡೇಶನ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಿಡಬ್ಲ್ಯೂಸಿ ಸದಸ್ಯರಾದ ಮಿತ್ರ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಲಿಲ್ಲಿ ಪುಷ್ಪಾ, ಕಲ್ಲ್ಯಾಣಪುರ ಯೂನಿಯನ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ರಮೇಶ್ ನಾಯಕ್, ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ ರೇಷ್ಮಾ ರಮೇಶ್, ರೋಟರಾಕ್ಟ್ ಕ್ಲಬ್ ಆಫ್ ಉಡುಪಿ ಅಧ್ಯಕ್ಷ ಅನಂತಕೃಷ್ಣ, ಎಸ್.ಸಿ.ಐ ಅಧ್ಯಕ್ಷ ಮಿತ್ರ ಕುಮಾರ್, ಸಂಸ್ಥೆಯ ಸದಸ್ಯರು ಹಾಗೂ ರೋಟರಾಕ್ಟ್ ಕ್ಲಬ್ ಆಫ್ ಉಡುಪಿ ಮತ್ತು ರೋಟರಾಕ್ಟ್ ಕ್ಲಬ್ ಆಫ್ ಮಾಹೆ, ಮಣಿಪಾಲದ ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಮಕ್ಕಳಿಂದ ಸ್ವಾತಂತ್ರ್ಯ ಹೋರಾಟದ ಮಹತ್ವ, ದೇಶಭಕ್ತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಬಿಂಬಿಸುವ ಭಾಷಣಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಾವೇರಿ ಕಾರ್ಯಕ್ರಮ ನಿರೂಪಿಸಿದರು. ರೋಟರಾಕ್ಟ್ ಕ್ಲಬ್ ಆಫ್ ಉಡುಪಿ ವತಿಯಿಂದ ಸಂಸ್ಥೆಯ ಮಕ್ಕಳಿಗೆ ಪರಿಸರ ಸ್ನೇಹಿ ಮರುಬಳಕೆ ಮಾಡಬಹುದಾದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ವಿತರಿಸಲಾಯಿತು. ಋತುಚಕ್ರದ ಸ್ವಚ್ಛತೆ, ಆರೋಗ್ಯ ಮತ್ತು ಪರಿಸರ ಸ್ನೇಹಿ ನ್ಯಾಪ್ಕಿನ್‌ಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು.




By
ForthFocus™