ಮಲ್ಪೆ, ನ.29: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲನ ಐಕ್ಯೂಎಸಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ -ಸಂವಾದ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಒಳಗೊಂಡ ಕಾರ್ಯಗಾರ ನಡೆಯಿತು. ಸಂವಿಧಾನ ಪ್ರಜಾಪ್ರಭುತ್ವ ಕುರಿತಾದ ಪ್ರಚಲಿತ ಚರ್ಚೆಗಳು ಮತ್ತು ಸವಾಲುಗಳ ಕುರಿತಾದ ಈ ಕಾರ್ಯಗಾರದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಪ್ರಶಾಂತ ನೀಲಾವರ ಸಂವಿಧಾನ ನಿರ್ಮಾಣದ ಐತಿಹಾಸಿಕ ಹಿನ್ನೆಲೆ ಪ್ರಭಾವ ಬೀರಿದ ಅಂಶಗಳು ಮತ್ತು ಚಿಂತನೆಗಳು ಸಂವಿಧಾನ ರಚನಾ ಸಭೆಯ ಚರ್ಚೆಗಳು ಹಾಗೂ ಸಂವಿಧಾನದ ತಾ ತ್ವಿಕ ಮೌಲ್ಯಗಳ ಕುರಿತಾಗಿ ತಿಳಿಸಿದರು.
ವಿದ್ಯಾರ್ಥಿಗಳಿಂದ ವಾಕ್ ಮತ್ತು ಸ್ವಾತಂತ್ರ್ಯ, ಪ್ರತಿಭಟನೆಯ ಇತಿ ಮಿತಿಗಳು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ, ನ್ಯಾಯಾಂಗದ ಐತಿಹಾಸಿಕ ತೀರ್ಪುಗಳು, ಒಳ ಮೀಸಲಾತಿ ಭ್ರಷ್ಟಾಚಾರ, ಎಸ್ ಐ ಆರ್ ಸಾಧಕ ಬಾಧಕಗಳು ನಾಗರಿಕ ಹೋರಾಟಗಳು ಮತ್ತು ಜವಾಬ್ದಾರಿಗಳ ಕುರಿತಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಪವನ್ ಕುಮಾರ್, ಬಸವರಾಜ್, ಸತ್ಯವ್ವ, ಮಂಜುನಾಥ, ಪಾವನ್, ಸಹನಾ ಹಾಗೂ ಅಧ್ಯಾಪಕ ವೃಂದದಲ್ಲಿ ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್ ಎಂಕಾಂ ಸಂಚಾಲಕರಾದ ಡಾ. ದತ್ತ ಕುಮಾರ್, ಇತಿಹಾಸ ಉಪನ್ಯಾಸಕರಾದ ಡಾ. ಶಿವರಾಜ್ ಡಾ. ಮಹೇಶ್ ಕುಮಾರ್ ಸಂವಾದ ದಲ್ಲಿ ಭಾಗಿಯಾದರು.
ಅಧ್ಯಕ್ಷತೆ ವಹಿಸಿದ ಗ್ರೇಡ್ ೧ ಪ್ರಾಂಶುಪಾಲರಾದ ಪ್ರೊ ಗೋಪಾಲಕೃಷ್ಣ ಎಂ ಗಾಂವ್ಕರ್, ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಂವಿಧಾನವನ್ನು ಮೊದಲಿಗೆ ಸರಿಯಾಗಿ ತಿಳಿದು ನಂತರದಲ್ಲಿ ನಮ್ಮ ಬದುಕಿನಲ್ಲಿ ಪಾಲಿಸುವ ಅವಶ್ಯಕತೆಯಿದೆ ಎಂದರು. ಐಕ್ಯೂಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಶ್ರೀದೇವಿ ಕೆ., ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ರೋವರ್ ರೇಂಜರ್ ಸಂಚಾಲಕ ಮೆರ್ವಿನ್ ಡಿ ಸೋಜಾ, ಸಮಾಜಕಾರ್ಯ ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ಟಿ., ಎನ್ ಎಸ್ ಎಸ್ ಸಂಚಾಲಕರಾದ ಡಾ. ಜಯಮಂಗಳ, ಬೋಧಕ ಬೋಧಕೇತರ ವೃಂದವರು ಉಪಸ್ಥಿತರಿದ್ದರು.




By
ForthFocus™