Wednesday, October 28, 2026
Wednesday, October 28, 2026

ಮಾದಕ ದ್ರವ್ಯ ವಿರೋಧಿ ಅರಿವು ಕಾರ್ಯಕ್ರಮ

ಮಾದಕ ದ್ರವ್ಯ ವಿರೋಧಿ ಅರಿವು ಕಾರ್ಯಕ್ರಮ

Date:

ಕುಂದಾಪುರ, ಆ.13: ಕಾಳಾವರ ವರದರಾಜ ಎಂ. ಶೆಟ್ಟಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ ಮತ್ತು ಮಾದಕ ದ್ರವ್ಯ ವಿರೋಧಿ ಘಟಕದ ಆಶ್ರಯದಲ್ಲಿ ಮಾದಕ ಪದಾರ್ಥಗಳ ಬಳಕೆಯಿಂದ ಆರೋಗ್ಯ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸಿ ಜಾಗೃತಿಯನ್ನು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಕುಂದಾಪುರ ಆರಕ್ಷಕ ಠಾಣೆಯ ಎ.ಎಸ್.ಐ ಶಾಂತರಾಜ ಬಿ.ಕೆ. ಮಾದಕ ಪದಾರ್ಥಗಳ ಬಳಕೆಯಿಂದ ತಾನು ಕೆಡುವುದಲ್ಲದೆ ತನ್ನ ಕುಟುಂಬ ಮತ್ತು ಸಮಾಜದ ಮೇಲೆ ಅನೇಕ ಕೆಟ್ಟ ಪರಿಣಾಮಗಳಾಗಿ ಬದುಕು ದುರ್ಲಭವಾಗುತ್ತದೆ. ಅದರಿಂದ ದೂರವಿರುವುದಲ್ಲದೆ ನಮಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಾಗರಾಜ ವೈದ್ಯ ಎಂ. ವಹಿಸಿದ್ಧರು.

ಮಾದಕ ದ್ರವ್ಯ ವಿರೋಧಿ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಸಹಾಯಕ ಪ್ರಾದ್ಯಾಪಕಿ ತಂಗಮ್ಮ ಎ.ಎ. ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಎ. ಸ್ವಾಗತಿಸಿ, ಶೃತಿ ಆಚಾರ್ಯ ಎನ್. ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂರನೇ ಟಿ20: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ

ಯು.ಬಿ.ಎನ್.ಡಿ., ಅ.27: ವೆಲ್ಲಿಂಗ್ಟನ್‌ನಲ್ಲಿ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ, ಆತಿಥೇಯ...

ಅಂತಿಮ ಮತದಾರರ ಪಟ್ಟಿಯ ಸಿ.ಡಿ ಹಸ್ತಾಂತರ

ಮಣಿಪಾಲ, ಅ.27: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ – 2026...

ಅ. 30: ನೇರ ಸಂದರ್ಶನ

ಉಡುಪಿ, ಅ.27: ಮಂಗಳೂರು ಫರ‍್ಸ್, ಉಡುಪಿ ನೀಯರ್ ಕಲ್ಯಾಣ್‌ಪುರ ಉಪ್ಪೂರು ಬಿಡ್ಜ್,...

ಕ್ರಿಯೇಟಿವ್ ಪದವಿಪೂರ್ವ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನೆ

ಕಾರ್ಕಳ, ಅ.27: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ರಾಷ್ಟ್ರೀಯ ಸೇವಾ ಯೋಜನೆ,...
error: Content is protected !!