Friday, September 25, 2026
Friday, September 25, 2026

ಆರೂರು: ಸಿಸಿ ಕ್ಯಾಮೆರಾ ಮತ್ತು ನಿಯಂತ್ರಣ ಕೊಠಡಿ ಉದ್ಘಾಟನೆ

ಆರೂರು: ಸಿಸಿ ಕ್ಯಾಮೆರಾ ಮತ್ತು ನಿಯಂತ್ರಣ ಕೊಠಡಿ ಉದ್ಘಾಟನೆ

Date:

ಆರೂರು, ಆ.2: ಶ್ರೀ ವಿಷ್ಣುಮೂರ್ತಿ ಯುವಕ ಮಂಡಲ ಆರೂರು ನೇತೃತ್ವದಲ್ಲಿ, ಬ್ರಹ್ಮಾವರ ವ್ಯವಸಾಯ ಸೇವ ಸಹಕಾರಿ ಸಂಘ ಹಾಗೂ ದಾನಿಗಳ ಸಹಕಾರದಿಂದ ಆರೂರು ಹಾಲೆಕಟ್ಟೆ ವೃತ್ತದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸುವ್ಯವಸ್ಥೆಯ ಹಿತ ದೃಷ್ಟಿಯಿಂದ ಅಳವಡಿಸಿದ ಸಿಸಿ ಕ್ಯಾಮೆರಾ ಮತ್ತು ಅದರ ನಿಯಂತ್ರಣ ಕೊಠಡಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶಾಸಕ ಯಶ್ಪಾಲ್ ಸುವರ್ಣ ಸಿಸಿ ಕ್ಯಾಮೆರಾ ಉದ್ಘಾಟನೆ ನಡೆಸಿದ್ದು ಉಡುಪಿಯ ವಕೀಲರಾದ ಆರೂರು ಸುಕೇಶ್ ಶೆಟ್ಟಿ ಅದರ ನಿಯಂತ್ರಣ ಕೊಠಡಿಯ ಉದ್ಘಾಟನೆಯನ್ನು ನಡೆಸಿದರು.

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಕುಲಾಲ್, ನೀಲಮ್ಮ ಚಾರಿಟೇಬಲ್ ಟ್ರಸ್ಟಿನ ಆರೂರು ತಿಮ್ಮಪ್ಪ ಶೆಟ್ಟಿ, ಆರೂರು ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಮಾಜಿ ಅಧ್ಯಕ್ಷರಾದ ರತ್ನಾಕರ ಭಟ್ ಆರೂರು, ಉದ್ಯಮಿ ಶ್ರೀಧರ್ ಶೆಟ್ಟಿ ಆರೂರು, ಕಮಲಾಕ್ಷ್ ಹೆಬ್ಬಾರ್, ಹರೀಶ್ ಶೆಟ್ಟಿ ಚೇರ್ಕಾಡಿ, ಚಂದ್ರಶೇಖರ್ ಕಲ್ಕೂರ, ಶ್ರೀ ವಿಷ್ಣುಮೂರ್ತಿ ಯುವಕ ಮಂಡಲದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗುರುರಾಜ್ ರಾವ್ ಆರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷ್ಣುಮೂರ್ತಿ ಯುವಕ ಮಂಡಲದ ಅಧ್ಯಕ್ಷ ಸಿಎ ಅಶ್ವತ್ ಶೆಟ್ಟಿ ಸ್ವಾಗತಿಸಿ, ವಿಷ್ಣು ಪ್ರಸಾದ್ ವಂದಿಸಿದರು. ಯಾದವ್ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಇಂಧನ ಮತ್ತು ಸಂಸ್ಕೃತಿ ಕುರಿತು ಮಹತ್ವದ ಚರ್ಚೆ ನಡೆಸಿದ ಭಾರತ, ಯುಎಇ ಮತ್ತು ಫ್ರಾನ್ಸ್‌

ಯು.ಬಿ.ಎನ್.ಡಿ., ಸೆ.24: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ...

ಕುಂದಾಪ್ರ ಕನ್ನಡ: ಭಾಷಾ ವಿಶೇಷತೆ- ವಿಶೇಷ ಉಪನ್ಯಾಸ

ಕುಂದಾಪುರ, ಸೆ.24: ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಉಡುಪಿಯ ಹಲವೆಡೆ ದಿನವಿಡೀ ಉತ್ತಮ ಮಳೆ

ಉಡುಪಿ, ಸೆ.24: ಉಡುಪಿಯ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಕಾರ್ಕಳ, ಮಣಿಪಾಲ,...
error: Content is protected !!