Saturday, August 8, 2026
Saturday, August 8, 2026

ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ

ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ

Date:

ಉಡುಪಿ, ಜು.6: ವಿಶ್ವ ಬ್ರಾಹ್ಮಣ ಸಮಾಜೋದ್ದಾರಕ ಸಂಘ (ರಿ) ಉಪ್ಪೂರು ಹಾಗೂ ಸಮಾನ ಮನಸ್ಕ ತಂಡ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಸಮಾನ ಮನಸ್ಕರ ತಂಡ ಕೊಡ ಮಾಡಿದ ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂತು.

ಕಲಿಕೆ ಎನ್ನುವುದು ಮಾನವನ ಸಾಧನೆಯ ದಾರಿಯ ಪೂರಕ ವ್ಯವಸ್ಥೆ. ಸಹಕಾರ ನೀಡುವುದು ಸಾಮಾಜಿಕ ಧರ್ಮ ಎಂದು ಪುಸ್ತಕ ವಿತರಣೆ ಮಾಡಿ ಸಮಾನ ಮನಸ್ಕ ತಂಡ ಕಟ್ಟಿ ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ನಿಸ್ವಾರ್ಥ ಸೇವಕ ಶಶಿಧರ್ ಪುರೋಹಿತ್ ಮಾತನಾಡಿದರು.

ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಒಂದರಿಂದ ಹತ್ತನೇ ತರಗತಿಯ ಸುಮಾರು 40 ವಿದ್ಯಾರ್ಥಿಗಳು ಉಚಿತ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ಪಡೆದುಕೊಂಡರು.

ಅತಿಥಿಗಳಾಗಿ ಸಮಾನ ಮನಸ್ಕ ತಂಡದ ಸದಸ್ಯರಾದ ದಿವಾಕರ್ ಆಚಾರ್ಯ ಉಡುಪಿ, ಸಂಘದ ಗೌರವ ಸಲಹೆಗಾರರಾದ ಧನಂಜಯ ಆಚಾರ್ಯ, ವಿಶ್ವಕರ್ಮ ಯುವ ಸಂಘಟನೆಯ ಕಾರ್ಯದರ್ಶಿ ಪಾಂಡುರಂಗ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೃಷ್ಣ ಆಚಾರ್ಯ ವಹಿಸಿದ್ದರು. ಸರ್ವರಿಗೂ ಉಪಹಾರದ ವ್ಯವಸ್ಥೆ ಸ್ಥಳೀಯ ಸಂಘದ ಸದಸ್ಯರಾದ ನಾಗೇಶ್ ಆಚಾರ್ಯ ಮಾಡಿದ್ದರು. ಸಂಘದ ಉಪಾಧ್ಯಕ್ಷರಾದ ಹರೀಶ್ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಆಚಾರ್ಯ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಧುಸೂದನ್ ಹೇರೂರು ದಂಪತಿಗಳಿಗೆ ಸನ್ಮಾನ

ಕಟಪಾಡಿ, ಆ.6: ಉಡುಪಿ ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ...

ತೋನ್ಸೆ (ಕೆಮ್ಮಣ್ಣು) ಗ್ರಾಮ ಪಂಚಾಯತ್: ಸಾರ್ವಜನಿಕರ ಅಹವಾಲು ಸ್ವೀಕಾರ

ಉಡುಪಿ, ಆ.6: ತೋನ್ಸೆ ಗ್ರಾಮ ಪಂಚಾಯತ್ ಕಚೇರಿಗೆ ಶಾಸಕ ಯಶ್ಪಾಲ್ ಸುವರ್ಣ...

ಆಗಸ್ಟ್ -ಸೆಪ್ಟಂಬರ್ ಮಾಹೆಯ ಪಡಿತರ ಒಂದೇ ಬಾರಿಗೆ ವಿತರಣೆ : ಪ್ರತ್ಯೇಕ ಬಯೋಮೆಟ್ರಿಕ್ ಕಡ್ಡಾಯ

ಉಡುಪಿ, ಆ.6: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂತ್ಯೋದಯ ಮತ್ತು...

ತೆಂಕನಿಡಿಯೂರು ಕಾಲೇಜು: ಹೆಚ್ಐವಿ/ ಏಡ್ಸ್ ಜಾಗೃತಿ ಕಾರ್ಯಕ್ರಮ

ಮಲ್ಪೆ, ಆ.6: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...
error: Content is protected !!