Monday, August 31, 2026
Monday, August 31, 2026

ಕೆ.ಸಿ.ಇ.ಟಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಕಾಲೇಜು ಅತ್ಯುತ್ತಮ ಸಾಧನೆ; ಕಾಲೇಜಿನ 30 ವಿದ್ಯಾರ್ಥಿಗಳಿಗೆ 100 ರ ಒಳಗೆ ರ‍್ಯಾಂಕ್‌; ನಾಗದೇವ್‌ ಎಂ. ಜಿ ಇಂಜಿನಿಯರಿಂಗ್ ವಿಭಾಗದಲ್ಲಿ 28ನೇ ರ‍್ಯಾಂಕ್‌

ಕೆ.ಸಿ.ಇ.ಟಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಕಾಲೇಜು ಅತ್ಯುತ್ತಮ ಸಾಧನೆ; ಕಾಲೇಜಿನ 30 ವಿದ್ಯಾರ್ಥಿಗಳಿಗೆ 100 ರ ಒಳಗೆ ರ‍್ಯಾಂಕ್‌; ನಾಗದೇವ್‌ ಎಂ. ಜಿ ಇಂಜಿನಿಯರಿಂಗ್ ವಿಭಾಗದಲ್ಲಿ 28ನೇ ರ‍್ಯಾಂಕ್‌

Date:

ಉಡುಪಿ, ಜೂ.9: ಏಪ್ರಿಲ್ 23 ಮತ್ತು 24 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಇಂಜಿನಿಯರಿಂಗ್ ವಿಭಾಗದಲ್ಲಿ ಕ್ರಿಯೇಟಿವ್ ಕಾಲೇಜಿನ ನಾಗದೇವ್‌ ಎಂ. ಜಿ 28 ನೇ ರ‍್ಯಾಂಕ್ ಪಡೆದುಕೊಂಡು ಅದ್ಭುತ ಸಾಧನೆಗೈದಿದ್ದಾರೆ. ಮಾತ್ರವಲ್ಲದೆ ವಿದ್ಯಾರ್ಥಿಗಳಾದ ಸಂವಿತ್‌ ಅಮಿತ್‌ 55, ಧ್ರುವ ವಿ ಬಿ 71, ತೇಜಸ್‌ ಆರ್‌ ಬಿ 82, ನಮಿತ್‌ ಕೆ ಹೆಗಡೆ 199, ತೇಜಸ್‌ ಹೆಗಡೆ ಹೆಚ್‌ ಡಿ 236, ಸುಕ್ಷೀತ್‌ ಗಿರೀಶ್‌ ಗೌಡ 238, ನಿನಾದ್‌ ರಾಜೇಶ್‌ ನಾಯ್ಕ್‌ 395, ಪ್ರಣಮ್ಯಾ ಭಟ್‌ 490, ಲೇಖನ್‌ ಕಾರಿಯಪ್ಪ 493, ಧನುಷ್‌ ಹೆಷ್‌ ಎ 496 ರ‍್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 22 ವಿದ್ಯಾರ್ಥಿಗಳು 1000 ರ‍್ಯಾಂಕ್ನೊಳಗೆ, 43 ವಿದ್ಯಾರ್ಥಿಗಳು 2000 ರ‍್ಯಾಂಕ್ನೊಳಗೆ ಇದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಕೃಷಿ ವಿಭಾಗದಲ್ಲಿ ಧ್ರುವ ವಿ ಬಿ 11, ತೇಜಸ್‌ ಆರ್‌ ಬಿ 17, ತೇಜಸ್‌ ಹೆಗಡೆ ಹೆಚ್‌ ಡಿ 53, ಲೇಖನ್‌ ಕಾರಿಯಪ್ಪ 69, ಪ್ರಣಮ್ಯಾ ಭಟ್‌ 90, ಮೋಕ್ಷ ವಿ ಎಮ್‌ 108, ಶ್ರಾವ್ಯಾ ಬಾಲಕೃಷ್ಣ 148, ಬಗನಾಲ್‌ ಆಶ್ರಿತ್‌ ನಂದನ್‌ 205, ನಟರಾಜ್‌ 261, ಆರ್ಯ ವಿ 269, ಕೆ ಎನ್‌ ರಾಘವೇಂದ್ರ 303, ಸೃಜನಾ ಎಸ್ 345, ತರುಣ್‌ ಸಾಗರ್‌ 369, ಅನುಷ್ಕಾ ಜನಾರ್ 436, ಹಿತರ್ತ್ 443 ರ‍್ಯಾಂಕ್ ಪಡೆದಿದ್ದಾರೆ. ಪಶು ವೈದ್ಯಕೀಯದಲ್ಲಿ ತೇಜಸ್‌ ಆರ್‌ ಬಿ 102, ಧ್ರುವ ವಿ ಬಿ 120, ಮೋಕ್ಷ ವಿ ಎಮ್‌ 197, ವಿ ಆರ್‌ ಗಣೇಶ್‌ 230, ಲೇಖನ್‌ ಕಾರಿಯಪ್ಪ 248, ರಿಶಿತ್‌ ಎಂ ಶೆಟ್ಟಿ 441 ರ‍್ಯಾಂಕ್ ಪಡೆದಿದ್ದಾರೆ. ನರ್ಸಿಂಗ್ ವಿಭಾಗದಲ್ಲಿ ತೇಜಸ್‌ ಆರ್‌ ಬಿ 102, ಧ್ರುವ ವಿ ಬಿ 121, ಮೋಕ್ಷ ವಿ ಎಮ್‌ 198, ವಿ ಆರ್‌ ಗಣೇಶ್‌ 231, ಲೇಖನ್‌ ಕಾರಿಯಪ್ಪ 249, ರಿಶಿತ್‌ ಎಂ ಶೆಟ್ಟಿ 442 ರ‍್ಯಾಂಕ್ ಪಡೆದಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ 30 ವಿದ್ಯಾರ್ಥಿಗಳು 100 ರ ರ‍್ಯಾಂಕ್ ಒಳಗೆ, 290 ವಿದ್ಯಾರ್ಥಿಗಳು 1000 ರ‍್ಯಾಂಕ್‌ನೊಳಗೆ, 521 ವಿದ್ಯಾರ್ಥಿಗಳು 2000 ರ‍್ಯಾಂಕ್‌ನೊಳಗೆ ಸ್ಥಾನ ಗಳಿಸಿಕೊಂಡಿದ್ದಾರೆ.

ಕಾಲೇಜು ನಿರಂತರ ಐದು ವರ್ಷಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲೂ ಶೇಕಡಾ 100 ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕರಾದ ಕಾಂತರಾಜ್, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಉಡುಪಿ, ಆ.30: ವಿಶ್ವವೇ ಕಂಡ ಅತ್ಯದ್ಭುತ ಕ್ರೀಡಾಪಟು, ಹಾಕಿ ದಂತಕಥೆ ಮೇಜರ್...

ಕೆಂಜೂರು ಆಯುಷ್ಮಾನ್ ಆರೋಗ್ಯ ಕೇಂದ್ರ ಕಾಮಗಾರಿಗೆ ಶಿಲಾನ್ಯಾಸ

ಬ್ರಹ್ಮಾವರ, ಆ.30: ಕಳ್ತೂರು ಗ್ರಾಮ ಪಂಚಾಯತ್ ಕೆಂಜೂರಿನಲ್ಲಿ ಸುಮಾರು 65 ಲಕ್ಷ...

ಎಸ್.ಐ.ಆರ್ ಪರಿಶೀಲನಾ ಸಭೆ ಮತ್ತು ಬಿ.ಎಲ್.ಎ-2 ಕಾರ್ಯಗಾರ

ಕಾಪು, ಆ.30: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರ ಎಸ್.ಐ.ಆರ್...

ಕಾಪು ಪುರಸಭೆಯ ಸಾಮಾನ್ಯ ಸಭೆ

ಕಾಪು, ಆ.30: ಕಾಪು ಪುರಸಭೆಯ ಸಾಮಾನ್ಯ ಸಭೆ ಕಾಪು ಪುರಸಭೆಯ ಸಭಾಂಗಣದಲ್ಲಿ...
error: Content is protected !!