ಕೋಟ, ಜೂ.8: ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಬಹುಮುಖ್ಯ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ್ ಹೇಳಿದರು. ಸಾಸ್ತಾನದ ಪಾಂಡೇಶ್ವರ ಬಿಲ್ಲವ ಯುವ ವೇದಿಕೆ ಮೂಡಹಡು ಆಶ್ರಯದಲ್ಲಿ ನೋಟ್ ಬುಕ್ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಬಿಲ್ಲವ ಸಮಯದಾಯದ 210 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ರವಿಕಿರಣ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸಾಸ್ತಾನ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಗೋಳಿಗರಡಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ ಪೂಜಾರಿ, ಉದ್ಯಮಿ ದಯಾನಂದ ಪೂಜಾರಿ, ಗೋಪಾಲ್ ಪೂಜಾರಿ ಮಠದತೋಟ, ಮಾಧವ ಪೂಜಾರಿ ಸಾಲಿಗ್ರಾಮ, ಶೇಖರ್ ಪೂಜಾರಿ ಮೂಡ್ಕಟ್ಟು, ಸ್ನೇಹಸಂಜೀವಿ ಒಕ್ಕೂಟ ಪಾಂಡೇಶ್ವರ ಅಧ್ಯಕ್ಷೆ ಸುಜಾತ ವೆಂಕಟೇಶ, ಬಿಲ್ಲವ ಯುವ ವೇದಿಕೆಯ ಕಾರ್ಯದರ್ಶಿ ವಿಜಯ ಪೂಜಾರಿ, ಪತ್ರಕರ್ತ ರವೀಂದ್ರ ಕೋಟ ಮುಂತಾದವರು ಉಪಸ್ಥಿತರಿದ್ದರು. ಬಿಲ್ಲವ ಯುವ ವೇದಿಕೆಯ ಕಾರ್ಯಾಧ್ಯಕ್ಷ ಸುರೇಶ್ ಪೂಜಾರಿ ಪಾಂಡೇಶ್ವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಇದರ ಸೀಮಾ ವಿಜಯ್ ಪೂಜಾರಿ ಹಾಗೂ ಉಷಾ ಗಣೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಿಲ್ಲವ ಯುವ ವೇದಿಕೆ ಪಾಂಡೇಶ್ವರ: ನೋಟ್ ಬುಕ್ ವಿತರಣೆ; ಪ್ರತಿಭಾ ಪುರಸ್ಕಾರ
ಬಿಲ್ಲವ ಯುವ ವೇದಿಕೆ ಪಾಂಡೇಶ್ವರ: ನೋಟ್ ಬುಕ್ ವಿತರಣೆ; ಪ್ರತಿಭಾ ಪುರಸ್ಕಾರ
Date:




By
ForthFocus™