Saturday, October 17, 2026
Saturday, October 17, 2026

ಚೇರ್ಕಾಡಿ: ಆರೋಗ್ಯ ತಪಾಸಣಾ ಶಿಬಿರ

ಚೇರ್ಕಾಡಿ: ಆರೋಗ್ಯ ತಪಾಸಣಾ ಶಿಬಿರ

Date:

ಬ್ರಹ್ಮಾವರ, ಮೇ 25: ಗೆಳೆಯರ ಬಳಗ ಕನ್ನಾರು, ನ್ಯಾಷನಲ್ ಮೆಡಿಕೋಸ್ ಆರ್ಗನೈಜೇಷನ್, ಸಮುದಾಯ ವೈದ್ಯಕೀಯ ವಿಭಾಗ, ದಂತ ವಿಶ್ವವಿದ್ಯಾಲಯ ಕೆ. ಎಂ. ಸಿ. ಮಣಿಪಾಲ, ಪ್ರಸಾದ ನೇತ್ರಾಲಯ, ಉಡುಪಿ, ಜಿಲ್ಲಾಸ್ಪತ್ರೆ ಉಡುಪಿ, ಪ್ರಾಥಮಿಕ ಅರೋಗ್ಯ ಕೇಂದ್ರ, ಪೇತ್ರಿ, ಗ್ರಾಮ ವಿಕಾಸ ಸಮಿತಿ, ಚೇರ್ಕಾಡಿ ಇವರ ಸಹಯೋಗದಲ್ಲಿ ಉಚಿತ ನೇತ್ರ, ದಂತ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವು ಚೇರ್ಕಾಡಿ ಆರ್. ಕೆ. ಪಾಟ್ಕರ್ ಶಾಲಾ ಆವರಣದಲ್ಲಿ ನಡೆಯಿತು. ಶಿಬಿರವನ್ನು ಮಾಜಿ ಶಾಸಕರಾದ ಕೆ. ರಘುಪತಿ ಭಟ್ ಉದ್ಘಾಟಿಸಿದರು.

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗದ ಸಂಯೋಜಕರಾದ ಜಿತೇಂದ್ರ ಮಂಜೇಶ್ವರ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಾರು ಗೆಳೆಯರ ಬಳಗದ ಅಧ್ಯಕ್ಷರಾದ ಭಾಸ್ಕರ ಆಚಾರ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷರಾದ ಶೇಖರ್ ಕುಲಾಲ್, ಸಮುದಾಯ ವೈದ್ಯಕೀಯ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ರತ್ನ ಜೆಯ್, ದಂತ ವಿಶ್ವವಿದ್ಯಾಲಯದ ಪಬ್ಲಿಕ್ ಡೆಂಟಿಸ್ಟ್ ವಿಭಾಗದ ಡಾ. ಯತಿಕಾ ನಾಯಕ್, ಪ್ರಸಾದ್ ನೇತ್ರಾಲಯದ ಡಾ. ನಿರಂಜನ್, ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಉಮೇಶ್ ಎ. ನಾಯ್ಕ್, ಆರೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಗುರುರಾಜ್ ರಾವ್ ಆರೂರು, ಆರ್. ಕೆ. ಪಾಟ್ಕರ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸತೀಶ್ ಪಾಟೀಲ್, ಚೇರ್ಕಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಕಿಟ್ಟಪ್ಪ ಅಮೀನ್, ಮಾಜಿ ಸದಸ್ಯರಾದ ಸುಜಾತ ದಿನೇಶ್ ನಾಯ್ಕ್ ಕಾರ್ಯಕ್ರಮದ ಸಂಚಾಲಕರಾದ ಸುರೇಶ್ ಆಚಾರ್ಯ ಪೇತ್ರಿ ಹಾಗೂ ಸಹ ಸಂಚಾಲಕರಾದ ಗಣೇಶ್ ಕುಲಾಲ್ ಆರೂರು ಉಪಸ್ಥಿತರಿದ್ದರು.

ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದಲ್ಲಿ 318 ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಅಂಚೆ ಇಲಾಖೆಯ ವಿಮೆಯ ಕುರಿತು ಮಾಹಿತಿ ಹಾಗೂ ನೋಂದಣಿ ನಡೆಯಿತು. ವೈಷವಿ ಪ್ರಾರ್ಥಿಸಿ, ಗಣೇಶ್ ಕುಲಾಲ್ ಸ್ವಾಗತಿಸಿ, ಶ್ರೀಕಂಠ ವರದಿ ವಾಚಿಸಿದರು. ಉಮೇಶ್ ಪೂಜಾರಿ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!